ಮಂಗಳೂರು: ಶಾಲಾ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ಮಳೆಗಾಲದಲ್ಲಿ ಬರುವಂತಹ ಕಾಯಿಲೆಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ಡಾಬರ್ ಚವನ್‌ಪ್ರಾಶ್ ಸಂಸ್ಥೆಯ ವತಿಯಿಂದ ಮಂಗಳೂರಿನ ಗಾಂಧಿ ನಗರ ಸರಕಾರಿ ಶಾಲೆ ಹಾಗೂ ಕದ್ರಿ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಡಾಬರ್ ಚವನ್ ಪ್ರಾಶ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಡಾಬರ್ ಚವನ್ ಪ್ರಾಶ್ ಅನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಮಕ್ಕಳು ಸೇರಿದಂತೆ ವಿವಿಧ ಪ್ರಾಯದವರಲ್ಲಿ ದುರ್ಬಲ ರೋಗನಿರೋಧಕ ಶಕ್ತಿ ದೂರವಾಗಿ ರೋಗ ನಿರೋಧಕ ಶಕ್ತಿ ಇಮ್ಮಡಿ ಆಗಲಿದೆ. ಈ ಕಾರಣದಿಂದ ಡಾಬರ್ ಚವನ್ ಪ್ರಾಶ್ ಸಂಸ್ಥೆಯು ಶಾಲಾ ಮಕ್ಕಳಿಗೆ ಉಚಿತವಾಗಿ ಹಂಚಿಕೆ ಮಾಡುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದೆ.
ಪ್ರಾಚೀನ ಆಯುರ್ವೇದ ಪದ್ಧತಿಗಳ ಆಧಾರದ ಮೇಲೆ ಸರಿಯಾದ ಪ್ರಮಾಣದ ಔಷಧಿಗಳನ್ನು ಸೇವಿಸಿದರೆ ದೇಹವನ್ನು ಮಳೆಗಾಳದ ರೋಗಕಾರಕ ಜೀವಾಣುಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ. ಅಲೋಪತಿ ಔಷಧಿಗಳು ರೋಗಗಳನ್ನು ಗುಣಪಡಿಸುವತ್ತ ಗಮನಹರಿಸಿದರೆ, ಪ್ರಾಚೀನ ಭಾರತೀಯ ಗಿಡಮೂಲಿಕೆ ವ್ಯವಸ್ಥೆ ಮತ್ತು ಆಯುರ್ವೇದವು ಆರೋಗ್ಯಕರ ಮತ್ತು ಚೈತನ್ಯಮಯ ಜೀವನಶೈಲಿಯನ್ನು ಪಾಲಿಸುವ ಕಡೆಗೆ ಗಮನಹರಿಸುತ್ತವೆ. ಆಯುರ್ವೇದದ ಎಂಟು ಶಾಖೆಗಳಲ್ಲಿ ಒಂದಾದ ರಸಾಯನ ಚಿಕಿತ್ಸೆಯು, ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬೇಕಾದ ಉತ್ತಮ ಸೂತ್ರಗಳು, ಆಹಾರ ನಿಯಮಗಳು ಮತ್ತು ಜೀವನಶೈಲಿ ಅಭ್ಯಾಸಗಳನ್ನು ಪಾಲಿಸಲು ನೆರವಾಗುತ್ತವೆ. ಅದರಲ್ಲೂ ದಿನನಿತ್ಯ ಎರಡು ಚಮಚ ಡಾಬರ್ ಚ್ಯವನ್‌ಪ್ರಾಶ್ ಸೇವನೆಯು ರಸಾಯನ ಚಿಕಿತ್ಸೆಯನ್ನು ದೈನಂದಿನ ದಿನಚರಿಯಲ್ಲಿ ಸೇರಿಸಿಕೊಳ್ಳಲು ಅತ್ಯಂತ ಉತ್ತಮ ಮಾರ್ಗವಾಗಿದೆ.
ಈ ವೇಳೆ ಡಾ. ರುಚಿ ಅವರು ಮಾತನಾಡಿ, ಚವನ್‌ಪ್ರಾಶ್ ಆಯುರ್ವೇದ ಉತ್ಪನ್ನವಾಗಿದ್ದು, ದಶಕಗಳಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಸೋಂಕುಗಳಿಂದ ರಕ್ಷಣೆ ಹೊಂದಲು ಬಳಸಲಾಗುತ್ತಿದೆ ಎಂದರು.
ಸಂಸ್ಥೆಯ ಪ್ರಶಾಂತ್ ಅಗರವಾಲ್ ಅವರು ಮಾತನಾಡಿ, ಆಯುರ್ವೇದದ ಶ್ರೀಮಂತ ಪರಂಪರೆ ಮತ್ತು ಪ್ರಕೃತಿ ಗಾಢ ಜ್ಞಾನ ಹೊಂದಿರುವ ಡಾಬರ್ ಯಾವಾಗಲೂ ಸುರಕ್ಷಿತ, ಕೈಗೆಟಕುವ ದರದಲ್ಲಿ ಲಭ್ಯವಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಸಮಂತ್, ಗಾಂಧಿ ನಗರ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕಿಯರು ಹಾಗೂ ಡಾಬರ್ ಇಂಡಿಯಾದ ದಿನೇಶ್ ಕುಮಾರ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post