ಉಜಿರೆ: ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ಭಾರತದ ಸರ್ವಧರ್ಮಗಳೂ ಸತ್ಯ, ಅಹಿಂಸೆ, ಪರೋಪಕಾರ, ಸೇವೆ, ಅನುಕಂಪ ಮಾನವೀಯ ಮೌಲ್ಯಗಳಿಗೆ ಒತ್ತು ನೀಡಿ ವಿಶ್ವವೇ ಒಂದು ಕುಟುಂಬ ಎಂದು ಪರಿಭಾವಿಸಿದ್ದು ಇತರ ಗೌರವಿಸುವುದು ನಮ್ಮ ಸನಾತನ ಧರ್ಮದ ಜೀವಾಳ ಎಂದು ರಾಜ್ಯ ಸರಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ.ಎಂ.ಬಿ.ಪಾಟೀಲ್ ಅವರು ಹೇಳಿದರು.
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಮಂಗಳವಾರ ನಡೆದ ಲಕ್ಷದೀ ಪೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಸರ್ವ ಧರ್ಮ ಸಮ್ಮೇಳನದ 93ನೆಯ ಅಧಿವೇಶನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸರ್ವಧರ್ಮೀಯರಿಗೂ ಸೇವೆ ನೀಡುವ ಧರ್ಮಸ್ಥಳ ಅನುಪಮ ಶ್ರದ್ಧಾ-ಭಕ್ತಿಯ ಕೇಂದ್ರವಾ: ಗಿದೆ. ಇಲ್ಲಿನ ಧರ್ಮಸಹಿಷ್ಣುತೆ, ಚತುರ್ವಿದ ದಾನ ಪರಂಪರೆ, ಮಾನವೀಯ ಸೇವೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಮಾನವ ಸೇವೆಯೇ ಶ್ರೇಷ್ಠ ಧರ್ಮವಾಗಿದ್ದು, ಲಕ್ಷದೀಪೋತ್ಸವ ಪ್ರತಿ ಮನೆ ಯಲ್ಲಿಯೂ, ಪ್ರತಿಯೊಬ್ಬರ ಮನದಲ್ಲಿಯೂ ವಿಶ್ವಸಾಮರಸ್ಯದ ಬೆಸುಗೆಯನ್ನು ಬೆಸೆಯಲಿ, ಪರಸ್ಪರ ಪ್ರೀತಿ-ವಿಶ್ವಾಸದೊಂದಿಗೆ ಶಾಂತಿ, ಸಾಮ ರಸ್ಯದ ಸೌಹಾರ್ದಯುತ ಬದುಕಿಗೆ ಲಕ್ಷದೀಪೋತ್ಸವ ನಾಂದಿಯಾಗಲಿ, ಲಕ್ಷದೀಪೋತ್ಸವದ ಹೊಂಬೆಳಕಿ ನಲ್ಲಿ ನೈತಿಕತೆ, ಸೇವೆ ಜೀವನ ಮೌಲ್ಯಗಳು ನಿರಂತರ ನಂದಾದೀಪವಾಗಿ ಸರ್ವರ ಸಾರ್ಥಕ ಬದುಕಿಗೆ ದಾರಿದೀಪವಾಗಲಿ ಎಂದು ಅವರು ಹಾರೈಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಮಾನವೀಯತೆಯೇ ಸಕಲ ಧರ್ಮಗಳ ಸಾರ, ಮಾನವನು ತನ್ನ ಜೀವನದಲ್ಲಿ ನೈತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಆದರ್ಶ ಬದುಕನ್ನು ನಡೆಸಲು ದಾರಿ ತೋರುವುದೇ ಧರ್ಮದ ಉದ್ದೇಶ ಎಂದು ಹೇಳಿದರು. ಧರ್ಮ ಕೇವಲ ಪೂಂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸತ್ಯ, ಅಹಿಂಸೆ, ಕರುಣೆ, ಶಾಂತಿ, ನೆಮ್ಮದಿ, ಪರೋಪಕಾರ, ಸಮಾನತೆ ಮೌಲ್ಯಗಳನ್ನು ಉದ್ದೀಪನಗೊಳಿಸಬೇಕು.
ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರು ವಹಿಸಿ ಮಾತನಾಡಿ, ವೈವಿಧ್ಯತೆಯನ್ನು ಹೃದಯದಿಂದ ಒಪ್ಪಿಕೊಳ್ಳುವಂತಹ ಸಮನ್ವಯ ದೃಷ್ಟಿ ಇದ್ದಾಗ ಮಾತ್ರ ಎಲ್ಲ ಮಾನವರೂ ಶಾಂತಿ ಸೌಹಾರ್ದತೆ ಸಮಾನತೆಯಿಂದ ಬದುಕಲು ಸಾಧ್ಯವಾಗುತ್ತದೆ, ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯತೆಯೆನ್ನುವುದು ಒಂದು ಸಹಜವಾದ ಪ್ರಕ್ರಿಯೆಯಾಗಿದೆ. ವಿಚಾರಕ್ಕೆ ಮುಕ್ತವಾದ ಅವಕಾಶವಿದ್ದಾಗ ವೈವಿಧ್ಯಯಿರಲು ಸಾಧ್ಯ, ಧರ್ಮ ಎಂದಿಗೂ ಅಶಾಂತಿಗೆ ಕಾರಣವಾಗುವುದಿಲ್ಲ, ನಾವು ನಮ್ಮ ಸ್ವಾರ್ಥಕ್ಕಾಗಿ ಅದನ್ನು ತಪ್ಪಾಗಿ ಉಪಯೋಗಿಸಿದಾಗ ಅಶಾಂತಿಗೆ ಕಾರಣವಾಗುತ್ತದೆ. ನಮ್ಮ ಧರ್ಮ ಸಂಪ್ರದಾಯಗಳನ್ನು ತಿಳಿದು ಪಾಲಿಸುವುದರೊಂದಿಗೆ ಇತರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಿ ಎಂದರು.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಮೂಲಕ ಬಂದ ಅಂಕಣಕಾರ ತನ್ನೀರ್ ಅಹಮ್ಮದ್ ಉಲ್ಲಾ ಮಾತನಾಡಿ, ಸತ್ಯಮೇವ ಜಯತೇ ಎನ್ನುವಂತೆ ಸತ್ಯ ಯಾವಾಗಲೂ ಗೆಲ್ಲುತ್ತದೆ, ಸುಳ್ಳು ಸೋಲುತ್ತದೆ. ಪಾದಯಾತ್ರೆ ತನಗೆ ಅಮೂಲ್ಯ ಜೀವನಪಾಠ ಕಲಿಸಿದೆ. ಹತ್ತು ಸಾವಿರ ಮಂದಿಯನ್ನು ಪಾದಯಾತ್ರೆಯಲ್ಲಿ ತಾನು ಭೇಟಿಯಾಗಿ ಅಪಾರ ಲೋಕಾನುಭವ ಪಡೆದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಸಮ್ಮೇಳನದಲ್ಲಿ ಉಪನ್ಯಾಸಕರಾಗಿ ವಿದ್ವಾಂಸರಾದ ಎಸ್.ಸೂರ್ಯಪ್ರಕಾಶ್ ಪಂಡಿತ್, ತನ್ವೀರ್ ಅಹಮ್ಮದ್ ಉಲ್ಲಾ, ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ ಸುರೇಂದ್ರ ಕುಮಾರ್, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ ಹರ್ಷೇಂದ್ರ ಕುಮಾರ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post