• About us
  • Contact us
  • Disclaimer
Thursday, February 26, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

‘ಎಮರ್ಜೆನ್ಸಿ’ ಚಿತ್ರವನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ಕೋರಿದ ಕಂಗನಾ

Coastal Times by Coastal Times
December 19, 2022
in ಸಿನಿಮಾ
‘ಎಮರ್ಜೆನ್ಸಿ’ ಚಿತ್ರವನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ಕೋರಿದ ಕಂಗನಾ
68
VIEWS
WhatsappTelegramShare on FacebookShare on Twitter

ನವದೆಹಲಿ : ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರು ತಮ್ಮ ಮುಂಬರುವ ‘ಎಮರ್ಜೆನ್ಸಿ’ ಚಿತ್ರವನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ನೀಡುವಂತೆ ಲೋಕಸಭೆ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಕಂಗನಾ ಅನುಮತಿ ಕೋರಿ ಸಚಿವಾಲಯಕ್ಕೆ ಬರೆದಿರುವ ಪತ್ರ ಪರಿಶೀಲಿಸಲಾಗುತ್ತಿದೆ. ಆದರೆ, ದುರದೃಷ್ಟವಶಾತ್‌ ಆಕೆಗೆ ಅನುಮತಿ ಸಿಗಲಾರದು ಎಂದು ಮೂಲಗಳು ಭಾನುವಾರ ತಿಳಿಸಿವೆ.

ಇಂದಿರಾಗಾಂಧಿ ಅವರ ಅಧಿಕಾರಾವಧಿಯಲ್ಲಿ ಹೇರಿದ್ದ ತುರ್ತುಪರಿಸ್ಥಿತಿ ಕುರಿತು ನಿರ್ಮಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದ ಕೆಲವು ದೃಶ್ಯಗಳನ್ನು ಸಂಸತ್ತಿನ ಆವರಣದೊಳಗೆ ಚಿತ್ರೀಕರಿಸಲು ಅನುಮತಿ ನೀಡುವಂತೆ ಕಂಗನಾ ಪತ್ರದಲ್ಲಿ ಕೋರಿದ್ದಾರೆ.

ಸಾಮಾನ್ಯವಾಗಿ ಖಾಸಗಿಯವರಿಗೆ ಸಂಸತ್‌ ಆವರಣದೊಳಗೆ ಸಿನಿಮಾ ಚಿತ್ರೀಕರಣ, ವಿಡಿಯೊ ಚಿತ್ರೀಕರಣ ಅಥವಾ ಛಾಯಾಚಿತ್ರೀಕರಣಕ್ಕೆ ಅನುಮತಿ ಇಲ್ಲ. ಆದರೆ, ಸರ್ಕಾರದ ಕೆಲಸ ಅಥವಾ ಇನ್ಯಾವುದೋ ಅಧಿಕೃತ ಉದ್ದೇಶದ ಕೆಲಸಕ್ಕೆ ಇದು ಅನ್ವಯಿಸದು. ಸರ್ಕಾರದ ವಾಹಿನಿ ದೂರದರ್ಶನ ಮತ್ತು ಸಂಸದ್‌ ಟಿ.ವಿಗೆ ಮಾತ್ರ ಕಾರ್ಯಕ್ರಮ ಅಥವಾ ಸಂಸತ್ತಿನ ಒಳಗಿನ ಘಟನೆಗಳ ಬಗ್ಗೆ ಚಿತ್ರೀಕರಣ ಮಾಡಲು ಅನುಮತಿ ಇದೆ ಎಂದು ಮೂಲಗಳು ತಿಳಿಸಿವೆ.

ದೇಶದ ರಾಜಕೀಯ ಇತಿಹಾಸದಲ್ಲಿ ಕರಾಳ ಅಧ್ಯಾಯವೆನಿಸಿದ ತುರ್ತು ಪರಿಸ್ಥಿತಿಯನ್ನು ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು 1975ರ ಜೂನ್ 25ರಿಂದ 1977ರ ಮಾರ್ಚ್‌ 21ರವರೆಗಿನ 21 ತಿಂಗಳ ಕಾಲ ಹೇರಿದ್ದರು. ತುರ್ತುಪರಿಸ್ಥಿತಿಯ ಕರಾಳತೆಯನ್ನು ತೆರೆದಿಡಲಿರುವ ಈ ಚಿತ್ರದಲ್ಲಿ ಕಂಗನಾ ಅವರು ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಕಥೆ, ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯೂ ಕಂಗನಾ ಅವರದೇ ಆಗಿದೆ. ಚಿತ್ರದ ಚಿತ್ರೀಕರಣ ಇದೇ ವರ್ಷದ ಜೂನ್‌ನಲ್ಲಿ ಆರಂಭವಾಗಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಡಿಸೆಂಬರ್ 24 ರಿಂದ 10 ದಿನಗಳ ಬೇಕಲ್ ಅಂತರಾಷ್ಟ್ರೀಯ ಬೀಚ್ ಫೆಸ್ಟ್ ಆರಂಭ

Next Post

1993ರ ಪಾಲಾರ್‌ ಸ್ಫೋಟ ಪ್ರಕರಣ: ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ಮೈಸೂರು ಕಾರಾಗೃಹದಿಂದ ಬಿಡುಗಡೆ

Related Posts

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ
ಸಿನಿಮಾ

ಫೆ.27: “ಬಿರ್ದ್ ದ ಕಂಬುಲ” ಹಾಗೂ “ವೀರಕಂಬಳ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

February 22, 2026
9
ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!
ಸಿನಿಮಾ

ಫೆ. 6ರಂದು ಬಹುನಿರೀಕ್ಷಿತ “ನಾನ್‌ವೆಜ್‌” ತುಳು ಸಿನಿಮಾ ಬಿಡುಗಡೆ, ಮಲ್ಪಿಪ್ಲೆಕ್ಸ್‌ನಲ್ಲಿ ಕೇವಲ 99 ರೂಪಾಯಿ ಟಿಕೇಟು!

February 3, 2026
39
Next Post
1993ರ ಪಾಲಾರ್‌ ಸ್ಫೋಟ ಪ್ರಕರಣ: ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ಮೈಸೂರು ಕಾರಾಗೃಹದಿಂದ ಬಿಡುಗಡೆ

1993ರ ಪಾಲಾರ್‌ ಸ್ಫೋಟ ಪ್ರಕರಣ: ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ಮೈಸೂರು ಕಾರಾಗೃಹದಿಂದ ಬಿಡುಗಡೆ

Discussion about this post

Recent News

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
56
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
46
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

February 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d