ಮಂಗಳೂರು ; ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರದ ಜನಪರ ಆಡಳಿತ, ಜನ ಕಲ್ಯಾಣ ಯೋಜನೆ ಹಾಗೂ ಸರಕಾರದ ಸಾಧನೆಯನ್ನು ಮನೆ ಮನೆಗಳನ್ನು ತಲುಪಲು ಜನವರಿ 21 ರಿಂದ ವಿಜಯ ಸಂಕಲ್ಪ, ಅಭಿಯಾನ ಹಮ್ಮಿಕೊಂಡಿದ್ದು, ಮಂಗಳೂರು ನಗರ ದಕ್ಷಿಣ ವಿಧಾನ ಕ್ಷೇತ್ರದಲ್ಲಿ ನಾಳೆ (21/01/2023) ಬೆಳಗ್ಗೆ 09:00 ಗಂಟೆಗೆ ಅಳಪ ಉತ್ತರ ವಾರ್ಡಿನ ಕನ್ನಗುಡ್ಡೆಯಲ್ಲಿ ಅಭಿಯಾನಕ್ಕೆ ಚಾಲನ ನೀಡಲಿದ್ದೇವೆ ಎಂದು ಶಾಸಕ ಶ್ರೀ. ಡಿ ವೇದವ್ಯಾಸ್ ಕಾಮತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಬೂತ್ ಮಟ್ಟದ ಎಲ್ಲಾ ಮನೆಗಳ ಸಂಪರ್ಕ, ಎಲ್ಲಾ ಮನೆಗಳಿಗೆ ಸರಕಾರದ ಸಾಧನೆಗಳ ಕರಪತ್ರ ವಿತರಣೆ, ಸ್ಟಿಕ್ಕರ್ ವಿತರಣೆ, ಮಿಸ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಅಭಿಯಾನ, ಫಲಾನುಭವಿಗಳ ಸಂಪರ್ಕ, ಪ್ರತಿ ಬೂತ್ ವ್ಯಾಪ್ತಿಯಲ್ಲಿ 10 ಗೋಡೆ ಬರಹಗಳು, ಡಿಜಿಟಲ್ ಗೋಡೆ ಬರಹ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿದೆ.

ಈಗಾಗಲೇ ಬೂತ್ ವಿಜಯ್ ಅಭಿಯಾನವು ಯಶಸ್ವಿಯಾಗಿ ನಡೆಯುತಿದ್ದು, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ, ಪಕ್ಷದ ಬಲವರ್ಧನೆಯ ಕಾರ್ಯ ನಡೆಯುತ್ತಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಆಡಳಿತಕ್ಕೆ ತರುವ ದೃಷ್ಟಿಯಿಂದ ಸಂಘಟನಾತ್ಮಕ ಚಟುವಟಿಕೆಗಳು ಹಾಗೂ ಮತದಾರರಿಗೆ ಸರಕಾರದ ಸಾಧನೆಗಳನ್ನು ತಲುಪಿಸುವ ಕಾರ್ಯಕ್ರಮಗಳು ನಡೆಯುತ್ತಿದೆ. ವಿಜಯ ಸಂಕಲ್ಪ ಅಭಿಯಾನದೊಂದಿಗೆ ಕಾರ್ಯಕರ್ತರಿಗೆ ಹೆಚ್ಚಿನ ಹುಮ್ಮಸ್ಸು ನೀಡುವ ಮೂಲಕ ಜನರ ಬಳಿ ತಲುಪುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post