• About us
  • Contact us
  • Disclaimer
Friday, February 27, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಲೋಕಾಯುಕ್ತ ಬಲೆಗೆ ಬಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಜೂನಿಯರ್ ಇಂಜಿನಿಯರ್

Coastal Times by Coastal Times
September 20, 2024
in ಕ್ರೈಮ್ ನ್ಯೂಸ್
ಲೋಕಾಯುಕ್ತ ಬಲೆಗೆ ಬಿದ್ದ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಜೂನಿಯರ್ ಇಂಜಿನಿಯರ್
3
VIEWS
WhatsappTelegramShare on FacebookShare on Twitter

ಮಂಗಳೂರು: ಗುತ್ತಿಗೆ ಕಾಮಗಾರಿ ಬಿಲ್ ಮಂಜೂರಾತಿಗೆ ಲಂಚ ಪಡೆಯುತ್ತಿರುವಾಗಲೇ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಜೂನಿಯರ್ ಇಂಜಿನಿಯರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರೆಡ್ ಹ್ಯಾಂಡ್‌ ಆಗಿ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ‌.

ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರೊಬ್ಬರು 2022-23ನೇ ಸಾಲಿನ ಐದನೇ ಹಣಕಾಸು ಯೋಜನೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಸ್.ಕೋಡಿ ಸರ್ಕಾರಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆ ಕೆಲಸ ನಿರ್ವಹಿಸಿದ್ದರು. ಕಾಮಗಾರಿಯ 9,77,154 ರೂ ಮೊತ್ತದ ಬಿಲ್ ಮಂಜೂರಾತಿಗೆ ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು ಅವರ ಬಳಿ ಪಿಡಬ್ಲ್ಯೂಡಿ ಕ್ಲಾಸ್-1 ಗುತ್ತಿಗೆದಾರರು ತೆರಳಿದ್ದರು. ಈ ವೇಳೆ ಬಿಲ್ ಪಾಸ್ ಮಾಡಲು ತನಗೆ 37 ಸಾವಿರ ರೂ. ಮತ್ತು ಕಿನ್ನಿಗೊಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗೆ 15 ಸಾವಿರ ರೂ. ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ ಜೂನಿಯರ್ ಇಂಜಿನಿಯರ್ ನಾಗರಾಜು ಮುಂಚಿತವಾಗಿ 7000 ರೂ. ಲಂಚ ಪಡೆದಿದ್ದರು.

ಉಳಿದ ಲಂಚದ ಮೊತ್ತವಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಜೂನಿಯರ್ ಇಂಜಿನಿಯರ್ ನಾಗರಾಜು 30 ಸಾವಿರ ರೂ. ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ 15 ಸಾವಿರ ರೂ. ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಅಧಿಕಾರಿಗಳು ಬಲೆ ಬೀಸಿದ್ದಾರೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮತ್ತು ಜೂನಿಯರ್ ಇಂಜಿನಿಯರ್​ 52 ಸಾವಿರ ರೂ ಬೇಡಿಕೆ ಇಟ್ಟು, ಇಂದು 45 ಸಾವಿರ ರೂ ಸ್ವೀಕರಿಸುತ್ತಿದ್ದರು. ಈ ಹಿಂದೆಯೂ ಜೂನಿಯರ್ ಇಂಜಿನಿಯರ್ 7 ಸಾವಿರ ರೂಪಾಯಿಯನ್ನು ಗೂಗಲ್ ಪೇ ಮೂಲಕ ಪಡೆದಿದ್ದರು. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾಗಿ ಕರ್ನಾಟಕ ಲೋಕಾಯುಕ್ತ‌ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್‌ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಲೋಕಾಯುಕ್ತ‌ ಮಂಗಳೂರು ಪೊಲೀಸ್ ಅಧೀಕ್ಷಕ ಎಂ.ಎ.ನಟರಾಜ್‌ ಮಾರ್ಗದರ್ಶನದಲ್ಲಿ ಮಂಗಳೂರು ಲೋಕಾಯುಕ್ತ ಠಾಣಾ ಉಪಾಧೀಕ್ಷಕಿ ಡಾ.ಗಾನ ಪಿ.ಕುಮಾರ್, ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ, ಸುರೇಶ್ ಕುಮಾರ್ ಪಿ, ಚಂದ್ರಶೇಖರ್ ಕೆ.ಎನ್, ಚಂದ್ರಶೇಖರ್ ಸಿ.ಎಲ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಅಪ್ಸ್ ಮಾಡೆಲ್ ಮ್ಯಾನೇಜ್ಮೆಂಟ್ ಮತ್ತು ಅಸ್ತ್ರ ಗ್ರೂಪ್ ವತಿಯಿಂದ ಮಿಸ್ಟರ್ಮಿಸ್, ಟೀನ್ ,ಮಿಸ್ಟ್ರೆಸ್ ಕರಾವಳಿ 2024

Next Post

ದಕ್ಷಿಣ ಕನ್ನಡದಲ್ಲಿ ಕಾಲರಾ ಪ್ರಕರಣ ಪತ್ತೆ, ರೋಗಿ ಗುಣಮುಖ: ಜಿಲ್ಲಾ ಆರೋಗ್ಯಾಧಿಕಾರಿ

Related Posts

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
ಕ್ರೈಮ್ ನ್ಯೂಸ್

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
57
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ
ಕ್ರೈಮ್ ನ್ಯೂಸ್

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
46
Next Post
ದಕ್ಷಿಣ ಕನ್ನಡದಲ್ಲಿ ಕಾಲರಾ ಪ್ರಕರಣ ಪತ್ತೆ, ರೋಗಿ ಗುಣಮುಖ: ಜಿಲ್ಲಾ ಆರೋಗ್ಯಾಧಿಕಾರಿ

ದಕ್ಷಿಣ ಕನ್ನಡದಲ್ಲಿ ಕಾಲರಾ ಪ್ರಕರಣ ಪತ್ತೆ, ರೋಗಿ ಗುಣಮುಖ: ಜಿಲ್ಲಾ ಆರೋಗ್ಯಾಧಿಕಾರಿ

Discussion about this post

Recent News

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
57
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
46
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆಗೈದು ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ

February 26, 2026
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

ಮಂಗಳೂರು: ಖಾಸಗಿ ವೀಡಿಯೋ ಮುಂದಿಟ್ಟು ಸ್ಪೀಕಿಂಗ್ ಕೋರ್ಸ್ ಮಾಲೀಕರಿಗೆ ಹಣಕ್ಕಾಗಿ ಬ್ಲ್ಯಾಕ್ ಮೇಲ್ – ಆರೋಪಿ ಅರೆಸ್ಟ್

February 25, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d