• About us
  • Contact us
  • Disclaimer
Friday, March 20, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಉಳ್ಳಾಲ: ಕಲ್ಲಿದ್ದಲು ಆಧಾರಿತ ಫಿಶ್ ಮೀಲ್ ಕಂಪೆನಿಯ ವಿರುದ್ಧ ಪ್ರತಿಭಟನೆ, ಫ್ಯಾಕ್ಟರಿ ಮುಚ್ಚದಿದ್ದರೆ ನಗರಸಭೆ ಮುತ್ತಿಗೆ ಡಿವೈಎಫ್ಐ ಎಚ್ಚರಿಕೆ

Coastal Times by Coastal Times
November 20, 2023
in ಕರಾವಳಿ
ಉಳ್ಳಾಲ: ಕಲ್ಲಿದ್ದಲು ಆಧಾರಿತ ಫಿಶ್ ಮೀಲ್ ಕಂಪೆನಿಯ ವಿರುದ್ಧ ಪ್ರತಿಭಟನೆ, ಫ್ಯಾಕ್ಟರಿ ಮುಚ್ಚದಿದ್ದರೆ ನಗರಸಭೆ ಮುತ್ತಿಗೆ ಡಿವೈಎಫ್ಐ ಎಚ್ಚರಿಕೆ
32
VIEWS
WhatsappTelegramShare on FacebookShare on Twitter

ಉಳ್ಳಾಲ: ಇಲ್ಲಿನ ನಗರ ಸಭಾ ವ್ಯಾಪ್ತಿಯ ಕೋಟೆಪುರದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಮೀನು ಸಂಸ್ಕರಣಾ ಕಂಪೆನಿಯು ಸಮುದ್ರದಲ್ಲಿ ಮೀನುಗಳ ನಾಶಕ್ಕೆ ಕಾರಣವಾಗುತ್ತಿದ್ದು, ಪರಿಸರಕ್ಕೆ ಮಾರಕವಾದ ಈ ಕಂಪೆನಿಯ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಹಾಗೂ ಇದರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ದ.ಕ. ಜಿಲ್ಲಾಡಳಿತದ ಧೋರಣೆಯ ವಿರುದ್ಧ ಡಿವೈಎಫ್‌ಐ ಕೋಡಿ ಕೋಟೆಪುರ ಘಟಕದ ವತಿಯಿಂದ ಸೋಮವಾರ ಕೋಟೆಪುರದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಯನ್ನುದ್ದೇಶಿಸಿ ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಕೋಡಿ- ಕೋಟೆಪುರ ಪರಿಸರದಲ್ಲಿ ಮೀನಿನ ತೈಲ ಸಂಸ್ಕರಣಾ ಘಟಕಕ್ಕೆ ಕಾನೂನಾತ್ಮಕ ಅನುಮತಿಗಳಿವೆ ಅನ್ನುವ ಹೇಳಿಕೆ ನೀಡುತ್ತಿರಬಹುದು. ಆದರೆ ಪರಿಸರವನ್ನು ಮಲಿನಗೊಳಿಸುವ ಕೈಗಾರಿಕೆಗಳಿಗೆ ಅನುಮತಿ ಕೊಟ್ಟ ಅಧಿಕಾರಿಗಳು ಭ್ರಷ್ಟರು. ಪರಿಸರ ನಿಯಂತ್ರಣ ಮಾಲಿನ್ಯ ಮಂಡಳಿ ಅಧಿಕಾರಿ ಕಾರ್ಖಾನೆ ಪರವಾಗಿ ಹೇಳಿಕೆ ಕೊಡುತ್ತಿದ್ದಾರೆ. ಅಧಿಕಾರಿ ಈ ಪರಿಸರ ದಲ್ಲಿ ವಾಸಮಾಡಬೇಕು. ಕಲ್ಲಿದ್ದಲಿನ ಉಪಯೋಗದಿಂದ ಹಾರುಬೂದಿ ಪರಿಸರದಲ್ಲಿಡೀ ಹರಿದಾಡುತ್ತಿದೆ. ಇದರಿಂದ ಆಗಿರುವ ಅನಾಹುತಗಳನ್ನು ಅಧಿಕಾರಿಗಳು ನೋಡಬೇಕು. ಕೈಗಾರಿಕೋದ್ಯಮಿಗಳಿಗೆ ಸುರಕ್ಷತಾ ಕ್ರಮ ದೊಡ್ಡ ಮೊತ್ತ ತಗಲುವುದು ಎಂದು ಹೇಳುವ ಅಧಿಕಾರಿಗಳು ಕಂಪೆನಿ ಮಾಲೀಕರು ಅಧಿಕಾರಿಗಳಾಗಿದ್ದಾರ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ. ನಗರಸಭೆ, ಜಿಲ್ಲಾಡಳಿತಕ್ಕೆ ಜನಪ್ರತಿನಿಧಿಗಳು ಪರಿಸರದ ಸ್ಥಿತಿಯನ್ನು ವಿವರಿಸುತ್ತಿಲ್ಲ. ಇಡೀ ಪರಿಸರ ಮಾಲಿನ್ಯದಿಂದ ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್ ಬಾಧಿತರು ಹೆಚ್ಚುತ್ತಿದ್ದು, ವಯಸ್ಕರು ಕೆಮ್ಮುವಿನಿಂದ ಬಳಲುತ್ತಿದ್ದಾರೆ. ಕೋಡಿ ಕೋಟೆಪುರ ಜನರನ್ನು ಆರೋಗ್ಯ ತಪಾಸಣೆ ಯನ್ನು ಆರೋಗ್ಯ ಇಲಾಖೆ ಕೈಗೊಂಡಾಗ ಮಾಹಿತಿ ಬಹಿರಂಗವಾಗಲಿದೆ.

ಉಳ್ಳಾಲ ತಾಲೂಕಿನಲ್ಲಿ ಅತಿ ಹೆಚ್ಚು ಜನರಿಗೆ ಕ್ಯಾನ್ಸರ್ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆಗಳು ಉಂಟಾಗಿ ಅನೇಕ ಹೃದಯಾಘಾತಗಳು ಆಗುತ್ತಿವೆ. ಜಲ, ನೆಲ ಸೇರಿ ಮಾನವನ ಜೀವಕ್ಕೆ ಸೇರುವ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ. ಮತ್ಸ್ಯಸಂಕುಲ ಸಾಯುವ ವೀಡಿಯೋ ಮೀನುಗಾರ ಹಾಕಿ ದು:ಖ ವ್ಯಕ್ತಪಡಿಸಿದ್ದರೂ, ಈವರೆಗೆ ಎಂಜಲು ಕಾಸಿನಲ್ಲಿ ಬದುಕುವ ಅಧಿಕಾರಿಗಳು ಸಮುದ್ರಕ್ಕೆ ಮಲಿನ ನೀರು ಬಿಡುವ ಕೈಗಾರಿಕೆಗಳಿಗೆ ನೋಟೀಸೇ ಮಾಡಿಲ್ಲ. ಮೀನುಗಾರರಿಗೆ, ಮೀನು ಸಂಕುಲಕ್ಕೆ ತೊಂದರೆಯಾದಲ್ಲಿ ಡಿವೈಎಫ್ ಐ ಎಂದುಗೂ ಸಹಿಸುವುದಿಲ್ಲ. ಹಲ್ಲು ಮತ್ತು ಕಲ್ಲು ನಡುವೆ ಜಗಳವಾದಲ್ಲಿ ಹಲ್ಲೇ ಮುರಿಯೋದು, ಕಲ್ಲಿನಂತೆ ಡಿವೈಎಫ್ ಐ ಇದೆ. ನೂರಾರು ಪೈಪುಗಳು ಸಮುದ್ರದಡಿಯಲ್ಲಿದೆ, ಇವೆಲ್ಲದಕ್ಕೆ ಅನುಮತಿ ಕೊಟ್ಟವರಾರು?. ಹಾರುಬೂದಿಯನ್ನು ವಸತಿ ಪ್ರದೇಶದ ಮಧ್ಯಭಾಗದಲ್ಲಿ ಬಿಡಲಾಗುತ್ತಿದೆ. ಪ್ರಕ್ರಿಯೆಗಳು ಮುಂದುವರಿದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಮುಂದಿನ ಹೆಜ್ಜೆ ನಗರಸಭೆ ಕಡೆಗೆ ಇಡಲಿದ್ದೇವೆ ಅಲ್ಲಿ ನ್ಯಾಯ ಸಿಗದಿದ್ದಲ್ಲಿ ಬೈಕಂಪಾಡಿಯಲ್ಲಿರುವ ಪರಿಸರ ಮಾಲಿನ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿಯೆದುರು, ನಂತರ ವಿಧಾನಸಭೆಗೆ ಕಾಲ್ನಡಿಗೆ ಮೂಲಕ ಹೋಗುತ್ತೇವೆ. ದಾನಶೂರ ಕರ್ಣ ಅನ್ನುವ ಮಾಲೀಕರು ಕ್ಯಾನ್ಸರ್, ಅಸ್ತಮಾವನ್ನು ದಾನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಬರುವ ಲಾರಿಗಳನ್ನು ತಡೆಯುವ ಪ್ರಯತ್ನವನ್ನು ಡಿವೈಎಫ್ ಐ ಮಾಡಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭ ರಝಾಕ್ ಮೊಂಟೆಪದವು, ಅಶ್ರಫ್ ಹರೇಕಳ, ರಝಾಕ್ ಮುಡಿಪು, ಜಯಂತ್ ನಾಯ್ಕ್, ಇಬ್ರಾಹಿಂ ಮದಕ, ಜನಾರ್ದನ ಅಮೀನ್, ಬಶೀರ್ ಲಚ್ಚಿಲ್, ಅಶ್ರಫ್ ಅಲೇಕಳ, ಇಬ್ರಾಹಿಂ ಕೋಟೆಪುರ, ನೌಫಾಲ್ ಕೋಟೆಪುರ, ರಿಯಾಝ್ ಮುಂತಾದವರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಮುನ್ನ ಕೋಟೆಪುರದಿಂದ ಕೋಡಿ ಕೈಗಾರಿಕೆಗಳಿರುವ ಪ್ರದೇಶದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಉಳ್ಳಾಲ ಠಾಣಾ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.‌

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಉಡುಪಿ: ನೇಜಾರು ಹತ್ಯೆ ಬಗ್ಗೆ ಫೇಸ್ ಬುಕ್‌‌ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಂಚಿಕೊಂಡಾತನ ವಿರುದ್ಧ ಸುಮೋಟೋ ಕೇಸ್

Next Post

ಯಾರೋ ಮಾಡಿದ ತಪ್ಪಿಗೆ 11 ತಿಂಗಳ ಕಾಲ ಸೌದಿ ಜೈಲು ವಾಸ ಅನುಭವಿಸಿ ಅಂತೂ ತಾಯ್ನಾಡಿಗೆ ಬಂದಿಳಿದ ಕಡಬದ ಯುವಕ

Related Posts

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.
ಕರಾವಳಿ

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

March 19, 2026
30
ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್
ಕರಾವಳಿ

ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

March 18, 2026
27
Next Post
ಯಾರೋ ಮಾಡಿದ ತಪ್ಪಿಗೆ 11 ತಿಂಗಳ ಕಾಲ ಸೌದಿ ಜೈಲು ವಾಸ ಅನುಭವಿಸಿ ಅಂತೂ ತಾಯ್ನಾಡಿಗೆ ಬಂದಿಳಿದ ಕಡಬದ ಯುವಕ

ಯಾರೋ ಮಾಡಿದ ತಪ್ಪಿಗೆ 11 ತಿಂಗಳ ಕಾಲ ಸೌದಿ ಜೈಲು ವಾಸ ಅನುಭವಿಸಿ ಅಂತೂ ತಾಯ್ನಾಡಿಗೆ ಬಂದಿಳಿದ ಕಡಬದ ಯುವಕ

Discussion about this post

Recent News

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
25
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
41
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

ಬೆಳ್ತಂಗಡಿ: ನೈತಿಕ‌ ಪೊಲೀಸ್ ಗಿರಿ, ಜಾತ್ರೆಗೆ ಬಂದಿದ್ದ ಬಾಲಕನನ್ನು ಅಪಹರಿಸಿ ಹಲ್ಲೆ : ಪ್ರಕರಣ ದಾಖಲು

March 19, 2026
ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

ಉಳ್ಳಾಲ: 9ರ ಹರೆಯದ ಬಾಲಕನಿಗೆ ಅಶ್ಲೀಲ ವೀಡಿಯೋ ತೋರಿಸಿ ಲೈಂಗಿಕ ಕಿರುಕುಳ: ಆರೋಪಿ ಪೊಲೀಸ್ ವಶಕ್ಕೆ

March 19, 2026
ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ಪ್ರಭೇದದ ತೋಳ ‘ಗೀತಾ’ 7 ಮರಿಗಳಿಗೆ ಜನ್ಮ ನೀಡಿದೆ.

March 19, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d