ಮಂಗಳೂರು,21: ನಗರದ ಎಕ್ಕೂರಿನ ಇಂಡಿಯಾನ್ ಸಭಾಂಗಣದಲ್ಲಿ ನಡೆದ ಎಸ್‌ಡಿಪಿಐ ರಾಷ್ಟ್ರೀಯ ಪ್ರತಿನಿಧಿ ಮಂಡಳಿ ಸಭೆಯು ಪಕ್ಷದ ಯುವ ಸಂಘಟನೆ ʼYOUNG DEMOCRATSʼ ಆರಂಭಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಸಂಘಟನಾ ಸಮಿತಿ ಯನ್ನು ರಚಿಸಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರು ಮತ್ತು ಕಾರ್ಯಾಧ್ಯಕ್ಷರಾದ ಮುಹಮ್ಮದ್ ಶಫಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಷ್ಟ್ರ, ರಾಜ್ಯ, ಜಿಲ್ಲೆ , ತಾಲೂಕು ಮಟ್ಟದಲ್ಲಿ ಪಕ್ಷದ ಯುವ ಸಂಘಟನೆ ಯನ್ನು ಆರಂಭಿಸಲಾಗುವುದು ಎಂದರು.
ದೇಶದ ಬಲಿಷ್ಠ ಶಕ್ತಿಯಾಗಿರುವ ಯುವ ಸಮೂಹ ಬೇರೆ ಬೇರೆ ಕಾರಣಗಳಿಂದ ರಾಜಕೀಯದಿಂದ ದೂರ ಸರಿಯುತ್ತಿ ದ್ದಾರೆ. ದೇಶದ ಮುಂದಿನ ಭವಿಷ್ಯವಾಗಿರುವ ಅವರನ್ನು ರಾಷ್ಟ್ರ ಕಟ್ಟುವ ಮತ್ತು ಸಂವಿಧಾನವನ್ನು ಉಳಿಸುವ ಕಾರ್ಯಕ್ಕೆ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಉದ್ದೇಶಕ್ಕಾಗಿ ಯೂತ್ ವಿಂಗ್ ಪ್ರಾರಂಭಿಸಲಾಗಿದೆ 15ರಿಂದ 40 ವರ್ಷ ವರೆಗಿನ ಯುವಜನರಿಗೆ ಯೂತ್ ವಿಂಗ್‌ನಲ್ಲಿ ಸೇರಲು ಅವಕಾಶ ಇದೆ ಎಂದು ಮಾಹಿತಿ ನೀಡಿದರು.
ಪಕ್ಷದ ಪದಾಧಿಕಾರಿಗಳ ಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಎಸ್‌ಡಿಪಿಐ ಅಧ್ಯಕ್ಷ ಎಂಕೆ ಫೈಝಿ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಕಳೆದ ಮಾರ್ಚ್‌ನಲ್ಲಿ ಬಂಧಿಸಿದ್ದರು. 11 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ಅವರ ಬಂಧನ ಖಂಡನೀಯ. ಫೈಝಿ ಅವರಂತಹ ನಾಯಕರನ್ನು ಬಂಧಿಸಿ ಜೈಲಿನಲ್ಲಿಡುವ ಮೂಲಕ ಕೇಂದ್ರ ಸರಕಾರವು ಈಡಿ, ಸಿಬಿಐ, ಎನ್‌ಐಎ ಮುಂತಾದ ತನಿಖಾ ಸಂಸ್ಥೆಗಳ ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.

ಉಪಾಧ್ಯಕ್ಷ ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಹಮ್ಮದ್ ಅಶ್ರಫ್ ಅಂಕಜಾಲ್, ಮುಹಮ್ಮದ್ ರಿಯಾಝ್, ಅಬ್ದುಲ್ ಮಜೀದ್, ಮೆಹರ್ ಅಫ್ರೋಝ್ ಯಾಸ್ಮೀನ್, ಕಾರ್ಯದರ್ಶಿಗಳಾದ ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್‌ಮತ್ತು ಯಾಮೊಯ್ದೀನ್ , ಖಜಾಂಚಿ ಜಿ. ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post