• About us
  • Contact us
  • Disclaimer
Friday, February 13, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಜೆರೋಸಾ ಶಾಲೆ ಪ್ರಕರಣ: ವಿಚಾರಣೆ ಆರಂಭಿಸಿದ ಐಎಎಸ್ ಅಧಿಕಾರಿ ಆಕಾಶ್ ಶಂಕರ್, ಮಕ್ಕಳನ್ನು ಕರೆತಂದು ಹೇಳಿಕೆ ನೀಡಿದ ಪೋಷಕರು

Coastal Times by Coastal Times
February 21, 2024
in ಕರಾವಳಿ
ಜೆರೋಸಾ ಶಾಲೆ ಪ್ರಕರಣ: ವಿಚಾರಣೆ ಆರಂಭಿಸಿದ ಐಎಎಸ್ ಅಧಿಕಾರಿ ಆಕಾಶ್ ಶಂಕರ್, ಮಕ್ಕಳನ್ನು ಕರೆತಂದು ಹೇಳಿಕೆ ನೀಡಿದ ಪೋಷಕರು
91
VIEWS
WhatsappTelegramShare on FacebookShare on Twitter

ಮಂಗಳೂರು: ನಗರದ ಸೇಂಟ್‌ ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಹಿಂದೂ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂಬ ಆರೋಪ ಹಾಗೂ ನಂತರದ ಬೆಳವಣಿಗೆಗಳ ಬಗ್ಗೆ ಐಎಎಸ್‌ ಅಧಿಕಾರಿ ಆಕಾಶ್‌ ಶಂಕರ್‌ ಸೋಮವಾರ ಲಿಖಿತ ಹಾಗೂ ವಿಡಿಯೋ ರೆಕಾರ್ಡಿಂಗ್ ಮೂಲಕ ಹೇಳಿಕೆಗಳನ್ನು ದಾಖಲಿಸಿ ವಿಚಾರಣೆ ಆರಂಭಿಸಿದರು.

ಸಂಜೆ 3 ಗಂಟೆಯಿಂದ ಪೋಷಕರು ತಮ್ಮೊಂದಿಗೆ ಮಕ್ಕಳನ್ನು ಕರೆತಂದು ಅಧಿಕಾರಿ ಮುಂದೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಒಬ್ಬೊಬ್ಬರಾಗಿಯೇ ಪೋಷಕರು ಅಧಿಕಾರಿಗಳಿಗೆ ಮೌಖಿಕವಾಗಿ ಮಾಹಿತಿಗಳನ್ನು ನೀಡಿದ್ದಾರೆ. ಎಲ್ಲರ ಹೇಳಿಕೆಯನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಅಲ್ಲದೆ, ಅಧಿಕಾರಿಗಳು ವರದಿ ಮಾಡಿಕೊಂಡಿದ್ದಾರೆ. ಏಳು ಮತ್ತು ಆರನೇ ತರಗತಿಯ ಸುಮಾರು 30ರಷ್ಟು ಪೋಷಕರು ಆಗಮಿಸಿದ್ದರು. ಕೆಲವೊಬ್ಬರು ತಮ್ಮ ಮಕ್ಕಳನ್ನೂ ಜೊತೆಗೆ ಕರೆತಂದಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಪೋಷಕಿ ಜ್ಯೋತಿ ವಿವಾದ ಇಷ್ಟೊಂದು ಜಟಿಲವಾಗಲು ಸಿಸ್ಟರ್ ಪ್ರಭಾ ಅವರೇ ಕಾರಣ. ಮಕ್ಕಳು, ಪೋಷಕರು ಆರೋಪ ಮಾಡುತ್ತಿದ್ದರೂ, ಅವರು ಮುಂದೆ ಬಂದು ಮಾತನಾಡುತ್ತಿಲ್ಲ. ನಮ್ಮನ್ನು ಕರೆದಾದರೂ ಮಾತನಾಡಬಹುದಿತ್ತು. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿದ್ದಾರೆ. ನಮ್ಮ ಎದುರು ಬಂದು ಶಾಲೆಯಲ್ಲೇ ಮಾತಾಡಬಹುದಿತ್ತಲ್ಲ. ಈ ವಿಚಾರ ಇಷ್ಟು ದೊಡ್ಡದು ಆಗುತ್ತಿರಲಿಲ್ಲ. ಈಗ ನಾವು ನಮ್ಮ ಕೆಲಸ ಬಿಟ್ಟು ಅಲೆದಾಡುವ ಸ್ಥಿತಿಯಾಗಿದೆ. ಆದರೆ ಅಂತಹ ಮನಸ್ಥಿತಿಯವರು ಯಾವ ಶಾಲೆಯಲ್ಲೂ ಶಿಕ್ಷಕಿಯಾಗಿ ಮುಂದುವರಿಯಬಾರದು ಎಂದರು.

ಜೆರೋಸಾ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಟಾರ್ಗೆಟ್ : ಹಿಂದೂ ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡುತ್ತಿದ್ದರು. ಹಣೆಗೆ ಪ್ರಸಾದ, ಕೈಗೆ ಬಳೆ, ಕಾಲಿಗೆ ಗೆಜ್ಜೆ ಹಾಕುವಂತೆ ಇರಲಿಲ್ಲ. ಹಾಕಿದರೆ ಬೈಯುತ್ತಿದ್ದರು. ನಾನು ಏಳನೇ ತರಗತಿಯಲ್ಲಿರುವಾಗ ಇದೆಲ್ಲ ಹೇಳುತ್ತಿದ್ದರು. ಅವಾಗ ಸಮಾಜ ವಿಜ್ಞಾನ ವಿಷಯಕ್ಕೆ ಆ ಶಿಕ್ಷಕಿ ಇದ್ದರು. ಆ ಸಮಯದಲ್ಲಿ ನಾವು ಚಿಕ್ಕವರಿದ್ದೆವು. ಹೆಚ್ಚೇನು ಗೊತ್ತಾಗುತ್ತಿರಲಿಲ್ಲ. 10 ನೇ ತರಗತಿಯಲ್ಲಿದ್ದಾಗ ಪೋಷಕರ ಬಳಿ ಹೇಳಿದ್ದೆ. ಶಾಲೆಗೆ ಬಂದು ಮಾತನಾಡಿದ್ರೆ ಟಾರ್ಗೆಟ್ ಮಾಡುತ್ತಾರೆ ಅಂತಾ ಚರ್ಚಿಸರಿರಲಿಲ್ಲ. ಲಿಖಿತವಾಗಿ ಬರೆದುಕೊಟ್ಟಿದ್ದೇನೆ. ಹತ್ತನೇ ತರಗತಿ ಅಂಕಪಟ್ಟಿಯನ್ನು ದಾಖಲೆಯಾಗಿ ನೀಡಿದ್ದೇನೆ ಎಂದರು.

ವಿಚಾರಣೆ ಬಳಿಕ ಅಧಿಕಾರಿ ಆಕಾಶ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ‘ಈ ಪ್ರಕರಣದ ಸತ್ಯಶೋಧನೆ ಪ್ರಕ್ರಿಯೆಯನ್ನು ಆರಂಭಿಸಿದ್ದೇನೆ. ಬೆಳಿಗ್ಗೆ 10ರಿಂದ ಸಂಬಂಧಪಟ್ಟ ಅಧಿಕಾರಿಗಳಿಂದ ಪ್ರಾಥಮಿಕ ಮಾಹಿತಿ ಕಲೆಹಾಕಿದ್ದೇನೆ. ಇನ್ನಷ್ಟು ಮಾಹಿತಿ ಕಲೆ ಹಾಕಬೇಕಿದೆ. ಈ ಹಂತದಲ್ಲಿ ವಿಚಾರಣೆ ಕುರಿತು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ತನಿಖೆಗೆ ಎಲ್ಲರೂ ಸಂಪೂರ್ಣ ಸಹಕಾರ ಕೊಡಬೇಕು’ ಎಂದರು. ‘ಎರಡು ದಿನಗಳು ಇಲ್ಲೇ ಇದ್ದು, ವಿಚಾರಣೆ ಪೂರ್ಣಗೊಳಿಸಿ ಆದಷ್ಟು ಬೇಗ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ. ಪ್ರಕರಣಕ್ಕೆ ಸಂಬಂಧಿಸಿ ವಸ್ತುನಿಷ್ಠ ವರದಿ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಜೆರೋಸಾ ಶಾಲೆ ಮುಂಭಾಗ ನಡೆದ ಪ್ರತಿಭಟನೆ ಪ್ರಕರಣದಲ್ಲಿ ವೇದವ್ಯಾಸ ಕಾಮತ್, ಭರತ್ ಶೆಟ್ಟಿಗೆ ನಿರೀಕ್ಷಣಾ ಜಾಮೀನು

Next Post

ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ; ಆರೋಪಿ ಸೋದರನ ಹತ್ಯೆಗೆ ಸ್ಕೆಚ್ ನಾಲ್ವರು ಪೊಲೀಸ್ ವಶಕ್ಕೆ

Related Posts

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ
ಕರಾವಳಿ

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

February 13, 2026
36
ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು
ಕರಾವಳಿ

ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು

February 12, 2026
26
Next Post
ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ; ಆರೋಪಿ ಸೋದರನ ಹತ್ಯೆಗೆ ಸ್ಕೆಚ್ ನಾಲ್ವರು ಪೊಲೀಸ್ ವಶಕ್ಕೆ

ಅಕ್ಷಯ್ ಕಲ್ಲೇಗ ಕೊಲೆಗೆ ಪ್ರತೀಕಾರ ; ಆರೋಪಿ ಸೋದರನ ಹತ್ಯೆಗೆ ಸ್ಕೆಚ್ ನಾಲ್ವರು ಪೊಲೀಸ್ ವಶಕ್ಕೆ

Discussion about this post

Recent News

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

February 13, 2026
36
ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು

ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು

February 12, 2026
26
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

ಕುಂದಾಪುರ: ಕೋಡಿ ಸೀವಾಕ್ ಸಮೀಪ “ಸೀವಾಕ್ ರೆಸ್ಟೋ ಕೆಫೆ” ಬಳಿ ಮಹಿಳೆ ಹಾಗೂ ಮೂರು ಮಕ್ಕಳ ರಕ್ಷಣೆ

February 13, 2026
ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು

ಉಳ್ಳಾಲ; ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಬೆಂಕಿ , ಚಾಲಕ ಪ್ರಾಣಾಪಾಯದಿಂದ ಪಾರು

February 12, 2026
ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ಪೋಕ್ಸೋ ನ್ಯಾಯಾಲಯ

ಅಪ್ರಾಪ್ತ ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ ಆರೋಪಿಯನ್ನು ಖುಲಾಸೆಗೊಳಿಸಿದ ಮಂಗಳೂರು ಪೋಕ್ಸೋ ನ್ಯಾಯಾಲಯ

February 11, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d