ಮಂಗಳೂರು, ಮಾ.21: ನಗರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿ ಮಾತಾಡಿದ ಅವರು, “ಬಂಟರು ಯಾನೆ ನಾಡವರನ್ನು ಪ್ರವರ್ಗ 3(ಬಿ)ಯಿಂದ ಕೈಬಿಟ್ಟು 2(ಎ)ಗೆ ಸೇರಿಸಬೇಕು, ಬಂಟರ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಂಟರ ಯಾನೆ ನಾಡವರ ಸಮಾಜ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕು. ಈ ಕುರಿತು ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತ ರಾಗಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮುನ್ನ ಬಂಟರ ಸಮಾಜಕ್ಕೆ ನ್ಯಾಯ ಒದಗಿಸಬೇಕು” ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಒತ್ತಾಯಿಸಿದ್ದಾರೆ.
“ಬಂಟ ಸಮಾಜದಲ್ಲಿ 40 ಶೇ. ಜನರು ಬಡತನ ರೇಖೆಗಿಂತ ಕೆಳಗಿದ್ದು, ಕಷ್ಟ-ಕಾರ್ಪಣ್ಯಗಳೊಂದಿಗೆ ನಿತ್ಯ ದುಃಖದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಹಲವು ಬಾರಿ ಮನವಿ ಮಾಡಿದ್ದರೂ ಈ ಹಿಂದಿನಿಂದ ಆಡಳಿತದಲ್ಲಿದ್ದ ಯಾವುದೇ ಸರಕಾರಗಳು ಈ ನಿಟ್ಟಿನಲ್ಲಿ ಗಮನ ಕೊಡಲಿಲ್ಲ. ನಮ್ಮ ಬಗ್ಗೆ ತಾರತಮ್ಯ ಧೋರಣೆಯನ್ನು ಅನುಸರಿಸಿದ ಕಾರಣ ವಿದ್ಯೆ, ಉದ್ಯೋಗ, ರಾಜಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬಂಟ ಸಮಾಜ ಬಾಂಧವರು ಅವಕಾಶ ವಂಚಿತರಾಗುವಂತಾಗಿದೆ ಎಂದು ಹೇಳಿದರು.
ಜಗತ್ತಿನಲ್ಲಿರುವ ಎಲ್ಲಾ ಬಂಟರ ಸಂಘ ಮತ್ತು ಸಂಘಟನೆಗಳಿಗೆ ಮಾತೃಸ್ಥಾನದಲ್ಲಿರುವ ಬಂಟರ ಯಾನೆ ನಾಡವರ ಮಾತೃಸಂಘದ ಪ್ರೇರಣೆ ಮತ್ತು ಪ್ರೋತ್ಸಾಹದಿಂದ ಜಗತ್ತಿನೆಲ್ಲಡೆ ಬಂಟರ ಯಾನೆ ನಾಡವರ ಸಂಘಗಳು ಸ್ಥಾಪನೆಯಾಗಿವೆ. ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಜಾತಿ ಆಧಾರದಲ್ಲಿ ಮೀಸಲಾತಿ ನಿಯಮಗಳನ್ನು ಜಾರಿಗೆ ತಂದಿವೆ. ಸುಪ್ರೀಮ್ ಕೋರ್ಟ್, ಹೈಕೋರ್ಟ್‌ಗಳು ಸಹಿತ ಯಾವತ್ತೂ ಅವುಗಳನ್ನು ಮಾನ್ಯ ಮಾಡಿದೆ. ಜಾತಿವಾದಿಗಳಲ್ಲಿ ಆದರೆ ಸರಕಾರದ ಕಾನೂನುಗಳಿಂದಾಗಿ ಹುಟ್ಟಿನಿಂದ ಸಾವಿನವರೆಗೆ ಜಾತಿಯ ನಮ್ಮ ಬೆನ್ನುಬಿಡುವುದಿಲ್ಲ, ಈಗಿರುವ ಮೀಸಲಾತಿ ವರ್ಗೀಕರಣದಲ್ಲಿ ನಮ್ಮ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜದ ಹಿತದೃಷ್ಟಿಯಿಂದ ಹಾಗೂ ನಮ್ಮ ಹಕ್ಕನ್ನು ರಕ್ಷಿಸುವ ಸಲುವಾಗಿ ಅನಿವಾರ್ಯವಾಗಿ ಹಾಗೂ ಒತ್ತಾಯಪೂರ್ವಕವಾಗಿ ಸರಕಾರದ ಮುಂದೆ ನಮ್ಮ ಕೇಳಿಕೆಗಳನ್ನು ಪುನಃ ಮಂಡಿಸಬೇಕಾದ ಪರಿಸ್ಥಿತಿ ಒದಗಿಬಂದಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದುಳಿದ ಆಯೋಗವನ್ನು ರಚಿಸಿ ಹಲವಾರು ಜಾತಿಗಳನ್ನು ಬೇರೆ, ಬೇರೆ ಪ್ರವರ್ಗಗಳಲ್ಲಿ ಸೇರಿಸಿ, ಅವರಿಗೆ ವಿವಿದರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿವೆ. ಕೇಂದ್ರದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮುದಾಯಕ್ಕೆ ಮೀಸಲಾತಿ ನೀಡಲಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟರನ್ನು ಪ್ರವರ್ಗ 3(ಬಿ)ಯಲ್ಲಿ ಸೇರಿಸಿದ್ದಾರೆ, ನಾಡವರನ್ನು ಪ್ರವರ್ಗ 2(ಎ)ಯಲ್ಲಿ ಸೇರಿಸಿದ್ದಾರೆ.
ಬಂಟರು ಹಾಗೂ ನಾಡವರು ಒಂದೇ ಜನಾಂಗವಾದ ಕಾರಣ ಸಂಘವನ್ನು ಸ್ಥಾಪಿಸುವಾಗ 1908ನೇ ಇಸವಿಯಲ್ಲಿ ಸಂಘಕ್ಕೆ ಬಂಟರ ಯಾನೆ ನಾಡವರ ಮಾತೃಸಂಘ ಎಂದು ಹೆಸರಿಟ್ಟರು. ಆ ಸಮಯದಲ್ಲಿ ಯಾವುದೇ ಮೀಸಲಾತಿಯು ಇರಲಿಲ್ಲ. 1960ನೇ ಇಸವಿಯಿ೦ದ ನಮ್ಮ ಹಿರಿಯರು ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘವು ಮೀಸಲಾತಿಯ ಬಗ್ಗೆ ಸರಕಾರಕ್ಕೆ ಮನವಿಗಳನ್ನು ಹಲವಾರು ಬಾರಿ ಸಲ್ಲಿಸಿದೆ. 2004ನೇ ಇಸವಿಯಲ್ಲಿ ನಾನು ಮಾತೃಸಂಘದ ಅಧ್ಯಕ್ಷನಾಗಿದ್ದಾಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಮನವಿಗಳನ್ನು ಸ್ವೀಕರಿಸಲು ಮಂಗಳೂರಿಗೆ ಬರುತ್ತಿದೆ. ಬಂಟ ಸಮಾಜವನ್ನು ಪ್ರತಿನಿಧಿಸಲು ದಿನಾಂಕ 18-10-2004ರಂದು ಆಯೋಗದ ಮುಂದೆ ಹಾಜರಾಗಬೇಕು ಎಂದು ಆಯೋಗವು ಸೂಚನೆ ನೀಡಿದ ಮೇರೆಗೆ, ಸಂಘವು ಈ ಬಗ್ಗೆ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು 1960ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಡಾ. ಆರ್. ನಾಗನಗೌಡರು, 1972ನೇ ಇಸವಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ಎಲ್.ಜಿ. ಹಾವನೂರ್ ರವರ, 1984ನೇ ಇಸವಿಯಲ್ಲಿ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ವೆಂಕಟಸ್ವಾಮಿಯವರ ಹಾಗೂ 1990ರಲ್ಲಿ ಅಧ್ಯಕ್ಷರಾಗಿದ್ದ ಒ. ಚೆನ್ನಪ್ಪರೆಡ್ಡಿ ಯವರ ಮತ್ತು 1995ರಲ್ಲಿ ಅಧ್ಯಕ್ಷರಾಗಿದ್ದ ಪ್ರೊ. ರವಿವರ್ಮಕುಮಾರ್ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡಿದ್ದಲ್ಲದೆ, 1956ನೇ ಇಸವಿಯಿಂದ 2004ನೇ ಇಸವಿಯವರೆಗೆ ಸರಕಾರಿ ಹಾಗೂ ಸಂಬಂದ ಪಟ್ಟ ಇಲಾಖೆಗಳಲ್ಲಿ ಉದ್ಯೋಗದಲ್ಲಿದ್ದ ಬಂಟರ ಸಂಖ್ಯೆಯ ಬಗ್ಗೆ ಅಮೂಲಾಗ್ರವಾದ ಅಧ್ಯಯನ ಮಾಡಿತ್ತು. ಈ ಅಧ್ಯಯನದ ಅಂಕಿ ಅಂಶಗಳ ಪ್ರಕಾರ 1956ನೇ ಇಸವಿಯಿಂದ 2004ನೇ ಇಸವಿಯವರೆಗೆ ಸರಕಾರ ಮತ್ತು ಅದಕ್ಕೆ ಸಂಬಂದಪಟ್ಟ ಇಲಾಖೆಗಳಲ್ಲಿ ಉದ್ಯೋಗಗಳಲ್ಲಿದ್ದವರ ಸಂಖ್ಯೆಯು 80 ಕಡಿತವಾಗಿರುವುದು ಕಂಡುಬಂತು.
ಆನಂತರ ಆಯೋಗದ ಮುಂದೆ ಮಂಡಿಸಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ 18-10-2004ರಂದು ಶ್ರೀ ಎಸ್. ಸಿದ್ದಗಂಗಯ್ಯರವರು ಅಧ್ಯಕ್ಷರಾಗಿದ್ದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮುಂದೆ, ಮಾತೃಸಂಘದ ಅಧ್ಯಕ್ಷನಾದ ನಾನು ಹಾಜರಾಗಿ ಬಂಟ ಸಮುದಾಯವನ್ನು ಪ್ರವರ್ಗ 3(ಬಿ) ಯಿಂದ ತೆಗೆದು 2(ಎ) ಸೇರಿಸಬೇಕು ಎಂದು ವಾದವನ್ನು ಮಂಡಿಸಿ ಮನವಿ ನೀಡಿದ್ದೆ. ಆನಂತರ ದಿನಾಂಕ 1-10-2013 ರಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಶ್ರೀ ಶಂಕರಪ್ಪನವರಿಗೆ, ದಿನಾಂಕ 17-10-2015ರಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಶ್ರೀ ಹೆಚ್ ಕಾಂತರಾಜ್ ರವರಿಗೆ ಹಾಗೂ ದಿನಾಂಕ 19.11.2020 ರಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಈಗಿನ ಅಧ್ಯಕ್ಷರಾದ ಶ್ರೀ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ನಮ್ಮ ಮನವಿಯನ್ನು ಸಲ್ಲಿಸಿದ್ದೇನೆ. ಬಂಟ ಸಮಾಜ ದಲ್ಲಿ 40% ಜನರು ಬಡತನದ ರೇಖೆಗಿಂತ ಕೆಳಗಿದ್ದು ಕಷ್ಟ-ಕಾರ್ಪಣ್ಯ ಗಳೊಂದಿಗೆ ನಿತ್ಯ ದುಖಃದ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ನಾವು ಕೊಟ್ಟ ಹಲವು ಮನವಿಗಳಿಗೆ ಈ ಹಿಂದಿನಿಂದಲೂ ಆಡಳಿತದಲ್ಲಿದ್ದ ಎಲ್ಲಾ ಸರಕಾರಗಳು ಯಾವುದೇ ಗಮನ ಕೊಡಲಿಲ್ಲ. ನಮ್ಮ ಬಗ್ಗೆ ತಾರತಮ್ಯದ ದೋರಣೆಯನ್ನು ಅನುಸರಿಸಿದ ಕಾರಣ ವಿದ್ಯೆ, ಉದ್ಯೋಗ, ಬಡ್ತಿ, ಉಧ್ಯಮ, ರಾಜಕೀಯ ಹಾಗೂ ಇತರ ಹಲವಾರು ಕ್ಷೇತ್ರಗಳಲ್ಲಿ ಬಂಟ ಸಮಾಜ ಬಾಂದವರು ಅವಕಾಶವಂಚಿತರಾಗುವಂತಾಗಿದೆ ಮತ್ತು ಕಷ್ಟ- ನಷ್ಟಗಳಿಗೆ ಒಳಗಾಗಿದ್ದಾರೆ ಎಂದು ಹೇಳಿದರು
ನಮ್ಮ ಈ ಕೆಳಗಿನ ಕೇಳಿಕೆಗಳನ್ನು ಕೂಡಲೇ ಈಡೇರಿಸಬೇಕೆಂದು ಸರಕಾರದೊಂದಿಗೆ ಕೇಳಿಕೊಂಡಿದ್ದೇವೆ. ; ಬಂಟರು ಯಾನೆ ನಾಡವರನ್ನು ಪ್ರವರ್ಗ 2 (ಎ) ಯಲ್ಲಿ ಸೇರಿಸಬೇಕು, ಬಂಟರು ಯಾನೆ ನಾಡವರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ನಿಗಮಕ್ಕೆ ಪ್ರತಿ ವರ್ಷ ಐದು ನೂರುಕೊಟ ಅನುದಾನವನ್ನು ನೀಡಬೇಕು. ಬಂಟರು ಅನುವಂಶಿಕ ಮೊಸರು, ಆಡಳಿತದಾರರಾಗಿದ್ದ ಆದರೆ ಪ್ರಸ್ತುತ ಸರಕಾರದ ಅಧೀನದಲ್ಲಿರುವ ದೇವಸ್ಥಾನ, ದೈವಸ್ಥಾನ ಮತ್ತು ಇತರ ಆರಾಧನಾ ಕ್ಷೇತ್ರಗಳ ಆಡಳಿತವನ್ನು ಸಂಬಂದಪಟ್ಟವರಿಗೆ ವಾಪಾಸು ನೀಡುವುದು. ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಬಂಟರ ಯಾನೆ ನಾಡವರ ಸಮಾಜ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವುದು. ನಾವು ಸಲ್ಲಿಸಿದ ಕೇಳಿಕೆಯಂತೆ ಎ. ಬಿ. ಶೆಟ್ಟಿ ವೃತ್ತವನ್ನು ಮೊದಲಿದ್ದ ಸ್ಥಳದಲ್ಲಿ, ದೊಡ್ಡದಾಗಿ ಹಾಗೂ ಅಕರ್ಷಕವಾಗಿ ನಿರ್ಮಿಸಬೇಕು. ವಿಧ್ಯಾವಂತ ನಿರುದ್ಯೋಗಿಗಳಿಗೆ ಮಾಸಿಕ ರೂ. ಐದು ಸಾವಿರದಂತೆ ಸಹಾಯದನ ಮಂಜೂರು ಮಾಡುವುದು. ಬಿ.ಪಿ.ಎಲ್. ಕಾರ್ಡ್‌ದಾರರಿಗೆ ಮತ್ತು ಅವರ ಮಕ್ಕಳಿಗೆ ಉಚಿತ ಆರೋಗ್ಯ ಇನ್ನೂ ರೆನ್ಸ್ ನೀಡುವುದು. 8. ಬಿ.ಪಿ.ಎಲ್. ಕಾರ್ಡ್‌ದಾರ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸ ನೀಡುವುದು. 30 ವರ್ಷದಾಟಿದ ಅವಿವಾಹಿತ ಹೆಣ್ಣು ಮಕ್ಕಳಿಗೆ ಸಹಾಯಧನ ನೀಡುವುದು.

ಸುದ್ದಿಗೋಷ್ಠಿಯಲ್ಲಿ ಜೊತೆ ಕಾರ್ಯದರ್ಶಿ ಸಂಪಿಗೇಡಿ ಸಂಜೀವ ಶೆಟ್ಟಿ, ಕೋಶಾಧಿಕಾರಿ ಸಿ.ಎ.ರಾಮ ಮೋಹನ ರೈ ಹಾಗೂ ಬಂಟರ ಯಾನೆ ನಾಡವರ ಮಾತೃಸಂಘದ ಸದಸ್ಯರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post