ಮಂಗಳೂರು, ಮಾ.20: ಮಂಗಳೂರು, ಮಾ.20: ಮಂಗಳೂರು ಕೆಥೋಲಿಕ್ ಧರ್ಮ ಕ್ಷೇತ್ರದ ಬೈಬಲ್ ಆಯೋಗ ಮತ್ತು ಕೆಥೋಲಿಕ್ ಕಾರಿಸ್ಮಾತಿಕ್ ಸೇವಾ ಸಂಚಲನ ವತಿಯಿಂದ ನಗರದ ಕುಲಶೇಖರ ಕೋರ್ಡೆಲ್ ಪವಿತ್ರ ಶಿಲುಬೆಯ ಚರ್ಚ್ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಬೈಬಲ್ ಮಹಾ ಸಮ್ಮೇಳನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಮಂಗಳೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಅ.ವಂ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದರು. ಅದಕ್ಕೂ ಮೊದಲು ಚರ್ಚ್‌ನಿಂದ ಸಮ್ಮೇಳನದ ವೇದಿಕೆಗೆ ಬೈಬಲ್ ಮೆರವಣಿಗೆ ನಡೆಯಿತು. ಬೈಬಲ್‌ನಿಂದ ಆಯ್ದ ವಿಷಯಗಳ ಕುರಿತು ಪ್ರಬೋಧನೆ ನಡೆಯಿತು.
ಮಂಗಳೂರು ಕೆಥೋಲಿಕ್ ಧರ್ಮ ಕ್ಷೇತ್ರದ ಬೈಬಲ್ ಆಯೋಗ ಮತ್ತು ಕೆಥೋಲಿಕ್ ಕಾರಿಸ್ಮಾತಿಕ್ ಸೇವಾ ಸಂಚಲನ ವತಿಯಿಂದ ಮಂಗಳೂರಿನ ಕುಲಶೇಖರ ಕೋರ್ಡೆಲ್ ಪವಿತ್ರ ಶಿಲುಬೆಯ ಚರ್ಚ್ ಆವರಣದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ಸಂಜೆ 4ರಿಂದ ರಾತ್ರಿ 8.30ರವರೆಗೆ ಸಮ್ಮೇಳನ ನಡೆಯಲಿದ್ದು, ಬೈಬಲ್‌ನಿಂದ ಆಯ್ದ ವಿಷಯಗಳ ಕುರಿತು ಪ್ರಬೋಧನೆ ನಡೆಯಲಿದೆ. ಧರ್ಮ ಗುರುಗಳು, ಭಗಿನಿಯರು, ಮಂಗಳೂರು ಧರ್ಮಕ್ಷೇತ್ರ ಹಾಗೂ ಸುತ್ತಮುತ್ತಲಿನ ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.
ಕರ್ನಾಟಕ ಪ್ರಾಂತೀಯ ಕ್ಯಾರಿಸ್ಮಾಟಿಕ್ ಸಂಚಾಲನದ ನಿರ್ದೇಶಕ ವಂ. ಫ್ರ್ಯಾಂಕ್ಲಿನ್ ಡಿಸೋಜ, ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ. ಡಾ. ಜೆ.ಬಿ. ಸಲ್ಡಾನ್ಹಾ, ರೋಯ್ ಕ್ಯಾಸ್ತಲಿನೊ, ಕ್ಯಾರಿಸ್ಮಾಟಿಕ್ ಸಂಚಾಲನದ ಸಂಚಾಲಕ ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಚೇರ್‌ಮೆನ್ ಕೆವಿನ್ ಡಿಸೋಜ, ಕಾರ್ಯದರ್ಶಿ ಮೊಸ್ಸಂ ರೇಗೋ, ಚರ್ಚ್‌ನ ಉಪಾಧ್ಯಕ್ಷೆ ರೂತ್ ಕ್ಯಾಸ್ತಲಿನೊ, ಕಾರ್ಯ ದರ್ಶಿ ಅನಿಲ್ ಡೆಸಾ, ಬೈಬಲ್ ಆಯೋಗದ ಸಹ ಕಾರ್ಯದರ್ಶಿ ಲೆನನ್ ಜೋನ್ ಮಸ್ಕರೇನಸ್, ಚರ್ಚ್‌ನ ಸಹಾಯಕ ಧರ್ಮಗುರುಗಳಾದ ವಂ. ವಿಜಯ್ ಮೊಂತೇರೊ, ಪಾವ್ಲ್ ಸೆಬಾಸ್ಟಿಯನ್, ನಿಶಿತ್ ಲೋಬೊ ಉಪಸ್ಥಿತರಿದ್ದರು.
ಕೇರಳದ ಧರ್ಮಗುರುಗಳಿಂದ ಪ್ರಬೋಧನೆ: ಕೇರಳದ ಅನಾಕ್ಕರ ಮೇರಿಯನ್ ರಿಟ್ರೀಟ್ ಸೆಂಟರ್‌ನ ನಿರ್ದೇಶಕ, ಧರ್ಮಗುರು ವಂ| ಡೊಮಿನಿಕ್ ವಲಮನಲ್ ಅವರು ವಿಶೇಷ ಪ್ರಭೋದನೆ ನೀಡಲಿದ್ದಾರೆ. ಇಂಗ್ಲಿಷ್‌ನಲ್ಲಿ ನಡೆಯುವ ಪ್ರವಚನವನ್ನು ಕೊಂಕಣಿಗೆ ಭಾಷಾಂತರ ಮಾಡಲಾಗುತ್ತದೆ. ಉಳಿದಂತೆ ಮಂಗಳೂರಿನ ಬಿಷಪ್ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ, ವಿಶ್ರಾಂತ ಬಿಷಪ್ ಅ|ವಂ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ|ವಂ|ಡಾ| ಲೋರೆನ್ಸ್ ಮುಕ್ಕುಝಿ, ಗುಲ್ಬರ್ಗಾ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ|ವಂ|ಡಾ| ರಾಬರ್ಟ್ ಮಿರಾಂದ ಬಲಿಪೂಜೆ ನೆರವೇರಿಸಲಿದ್ದಾರೆ. ವಿವಿಧ ಚರ್ಚ್‌ಗಳ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಸಮ್ಮೇಳನ ಹೀಗೆ ನಡೆಯಲಿದೆ:
* ಪ್ರತೀ ದಿನ ಸಂಜೆ 4 ಗಂಟೆಗೆ ಸಮ್ಮೇಳನ ಆರಂಭ. ಮೊದಲು ದೇವರ ಸ್ತುತಿ ಗಾಯನ, 5 ಗಂಟೆಗೆ ಪವಿತ್ರ ಬಲಿಪೂಜೆ.
* ಸಂಜೆ 6 ಗಂಟೆಯಿಂದ ರಾತ್ರಿ 8.30ರ ವರೆಗೆ ಪ್ರಬೋಧನೆ ನಡೆಯಲಿದೆ. ಮಧ್ಯ ಮಧ್ಯ ಗಾಯನ ಕೂಡ ಇರಲಿದೆ.
* ಭಾಗವಹಿಸುವ ಭಕ್ತರಿಗೆ ನೆರವಾಗಲು ನಿತ್ಯ ನೂರರಂತೆ 400 ಮಂದಿ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
* ಸುತ್ತಲೂ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ವಾಹನ ಪಾರ್ಕಿಂಗ್‌ಗೆ ವಿಶಾಲ ಮೈದಾನದಲ್ಲಿ ವ್ಯವಸ್ಥೆ ಇದೆ.
Discover more from Coastal Times Kannada
Subscribe to get the latest posts sent to your email.
Discussion about this post