ಬೆಂಗಳೂರು: 2024-25ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಇಂದಿನಿಂದ (ಮಾರ್ಚ್21) ಶುರುವಾಗಲಿದೆ. 2,818 ಪರೀಕ್ಷಾ ಕೇಂದ್ರದಲ್ಲಿ 8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ ರಾಜ್ಯಾದ್ಯಂತ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳು, ಹಾಲ್‌ಗಳು ಸಿಸಿಟಿವಿ ಕ್ಯಾಮರಾಗಳನ್ನು ಒಳಗೊಂಡಿವೆ. ಇದಲ್ಲದೆ ಕುಡಿಯುವ ನೀರು, ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯನ್ನು ಮಾಡಲಾಗಿದೆ.
ಮೊದಲ ದಿನ ಪ್ರಥಮ ಭಾಷೆಗಳ ಪರೀಕ್ಷೆ: ಇಂದು ಪ್ರಥಮ ಭಾಷೆಗಳ ಪರೀಕ್ಷೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-1ರ ವೇಳಾಪಟ್ಟಿ:
ಮಾರ್ಚ್ 21 – ಪ್ರಥಮ ಭಾಷೆ (ಕನ್ನಡ, ಸಂಸ್ಕೃತ, ಹಿಂದಿ, ಉರ್ದು ಇತ್ಯಾದಿ)
ಮಾರ್ಚ್ 24 – ಗಣಿತ
ಮಾರ್ಚ್ 26 – ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
ಮಾರ್ಚ್ 29 – ಸಮಾಜ ವಿಜ್ಞಾನ
ಏಪ್ರಿಲ್ 2 – ವಿಜ್ಞಾನ
ಏಪ್ರಿಲ್ 4 – ತೃತೀಯ ಭಾಷೆ
ಎಲ್ಲಾ ಪರೀಕ್ಷಾ ಕೇಂದ್ರಗಳ ವೆಬ್ ಕಾಸ್ಟಿಂಗ್ ಅನ್ನು ಅಧಿಕಾರಿಗಳು ಗಮನಿಸಲಿದ್ದಾರೆ. 21 ನೋಡಲ್ ಅಧಿಕಾರಿಗಳು ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಕ್ಷಣೆ ಮಾಡಲಿದ್ದಾರೆ. ಬೆಂಗಳೂರಿನ SSLC ಬೋರ್ಡ್ನಲ್ಲೂ ಅಧಿಕಾರಿಗಳು ಗಮನಿಸುತ್ತಾರೆ. ಪರೀಕ್ಷೆ ಆರಂಭವಾದ ವೇಳೆಯಿಂದ ಮುಗಿಯುವ ತನಕ ಅಡೆತಡೆಯಿಲ್ಲದ ವಿದ್ಯುತ್ ಪೂರೈಕೆಗೆ ಚೆಸ್ಕಾಂಗೆ ಮನವಿ ಮಾಡಲಾಗಿದೆ. ಮಕ್ಕಳ ಆರೋಗ್ಯ ತಪಾಸಣೆಗೆ ತಾಲೂಕು ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳ ಸಹಕಾರ ಪಡೆಯಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post