ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಅರಣ್ಯ, ಪರಿಸರ ಮತ್ತು ಜೀವೀ ಶಾಸ್ತ್ರ ಇಲಾಖೆ ಕರ್ನಾಟಕ ಸರ್ಕಾರ ಇವರ ವತಿಯಿಂದ, G20 summit ಅಂಗವಾಗಿ ದಿನಾಂಕ: 21.05.2023 ಭಾನುವಾರದಂದು ಮಂಗಳೂರಿನ ತಣ್ಣೀರು ಬಾವಿ ಬೀಚ್‌ನಲ್ಲಿ ಮೆಗಾ ಬೀಚ್ ಕ್ಲೀನ್ ಕಾರ್ಯಕ್ರಮ ನಡೆಯಿತು.
ಕಡಲ ತೀರಾ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಮಂಗಳೂರಿನ ಅರಣ್ಯ ಸಂರಕ್ಷಾಣಾಧಿಕಾರಿ ಡಾ| ದಿನೇಶ್ ಕುಮಾರ್ ವೈ.ಕೆ, ಮತ್ತು ಮುಖ್ಯ ಸಂರಕ್ಷಾಣಾಧಿಕಾರಿ ಕರಿಕಲರ್, ಕೋಸ್ಟ್ ಗಾರ್ಡ್ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ, ಮೀನುಗಾರಿಕಾ ಮಹಾವಿದ್ಯಾಲಯ ಹಾಗೂ ಸುಮಾರು 600 ರಿಂದ 700 ಜನ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬೀಚ್‌ನ 3.0 ಕಿಮೀ ವ್ಯಾಪ್ತಿಯನ್ನು ಸ್ವಚ್ಛಗೊಳಿಸಲಾಯಿತು.
ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಕಡಲತೀರಗಳ ಸುತ್ತಲೂ ಕಸ ಮತ್ತು ಜೈವಿಕ ವಿಘಟನೀಯವಲ್ಲದ ವಸ್ತುಗಳನ್ನು ತೆಗೆದುಹಾಕಿದರು. ತ್ಯಾಜ್ಯವು ಮುಖ್ಯವಾಗಿ ಆಹಾರ ಪದಾರ್ಥಗಳ ಹೊದಿಕೆಗಳು, ಪ್ಲಾಸ್ಟಿಕ್ ಬಾಟಲಿಗಳು, ಪ್ರವಾಸಿಗರು ಎಸೆದ ಮದ್ಯದ ಬಾಟಲಿಗಳನ್ನು ಒಳಗೊಂಡಿತ್ತು. ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಕಸದ ಚೀಲಗಳಲ್ಲಿ ಸಂಗ್ರಹಿಸಲಾಗಿದೆ.ಅಂದಾಜು 5 ಟನ್ ನಷ್ಟು ಕಸ ಕಡಲತೀರ ಸ್ವಚ್ಚಗೊಳಿಸಲಾಯಿತು.
ಈ ಸಂದರ್ಭದಲ್ಲಿ ಗ್ಯಾನ್ ವೇದಾಂತ ಫೌಂಡೇಶನ್(ರಿ ) ಇದರ ವತಿಯಿಂದ ಮಂಗಳೂರಿನ ಹರೀಶ್ ಆಚಾರ್ಯ ಇವರಿಂದ ಮರಳಿನಲ್ಲಿ ಮೂಡಿಬಂದ ಕಾಂತಾರ ಕಲಾಕೃತಿ ಮತ್ತು ಶಾಲಾ ಕಾಲೇಜು ಮಕ್ಕಳಿಗೆ ಕಡಲ ತೀರಾ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಲೈವ್ ಪೇಂಟಿಂಗ್ ನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ಯಾನ್ ವೇದಾಂತ ಫೌಂಡೇಶನ್(ರಿ ) ಇದರ ಅಧ್ಯಕ್ಷರು ಬಾಲಕೃಷ್ಣ ಶೆಟ್ಟಿ, ರಂಜನ್ ಪಿ, ವಸಂತ್ ಎಂ, ಮೆಲ್ವಿನ್ ಲೆಸ್ಲಿ, ಭಾರತಿ ಶೆಟ್ಟಿ ,ಖ್ಯಾತ ವ್ಯಂಗ್ಯ ಚಿತ್ರಗಾರ ಹರಿಶ್ಚಂದ್ರ ಶೆಟ್ಟಿ ಮತ್ತು ಸ್ಥಳೀಯ ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post