ಮಂಗಳೂರು: ಮಂಗಳೂರಿನ ಗರೋಡಿಯಲ್ಲಿ ರಿಕ್ಷಾದಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ಆರೋಪಿಯ ಗುರುತು ಪತ್ತೆಯಾಗಿಲ್ಲ. ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.ಮಂಗಳೂರಿನ ಗರೋಡಿ ಬಳಿ ರಿಕ್ಷಾದಲ್ಲಿ ನಡೆದ ಸ್ಫೋಟ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮತ್ತು ರಿಕ್ಷಾ ಚಾಲಕ ಚಿಕಿತ್ಸೆ ಪಡೆಯುತ್ತಿರುವ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು ಘಟನೆಯಲ್ಲಿ ಗಾಯಗೊಂಡ ಆರೋಪಿ ಮತ್ತು ರಿಕ್ಷಾ ಚಾಲಕನನ್ನು ವೀಕ್ಷಿಸಿದ್ದೇನೆ. ಆರೋಪಿಗೆ ಶೇ.45ರಷ್ಟು ಸುಟ್ಟಗಾಯವಾಗಿದೆ. ಆತ ಯಾರು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆತನ ಗುರುತು ಪತ್ತೆ ಹಚ್ಚಲು ಪೋಷಕರನ್ನು ಕರೆಸಲಾಗಿದ್ದು, ಆ ಬಳಿಕ ಆತನ ಬಗ್ಗೆ ತಿಳಿಯಲಿದೆ ಎಂದರು.


ಆಟೋ ಸ್ಫೋಟ ಪ್ರಕರಣದಲ್ಲಿ ಸುಟ್ಟ ಗಾಯಗಳಿಂದ ಬದುಕುಳಿದಿರುವ ಶಂಕಿತ ವ್ಯಕ್ತಿಯನ್ನು ಮೊಹಮ್ಮದ್ ಶಾಕೀರ್ ಎಂದು ಮೇಲ್ನೋಟಕ್ಕೆ ಗುರುತು ಪತ್ತೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಕದ್ರಿಯಲ್ಲಿ ಲಷ್ಕರ್ ಉಗ್ರರ ಪರವಾಗಿ ಗೋಡೆ ಬರಹ ಬರೆದು ಸಿಕ್ಕಿಬಿದ್ದು ಜಾಮೀನಿನಲ್ಲಿ ಹೊರಬಂದು ತಲೆಮರೆಸಿಕೊಂಡಿದ್ದ ಶಾಕೀರ್ ಈಗ ಭಯೋತ್ಪಾದಕ ಕೃತ್ಯಕ್ಕೆ ಮುಂದಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದ ಆರೋಪಿ ಯಾರು ಎಂಬ ಬಗ್ಗೆ ಮುಂದೆ ತಿಳಿಯಲಿದೆ. ಆರೋಪಿಯ ಮುಖ ಸುಟ್ಟು ವಿರೂಪವಾಗಿದೆ. ಅವನಿಗೆ ಮಾತನಾಡಲು ಆಗುತ್ತಿಲ್ಲ. ಆತನ ಮನೆಯವರು ಬಂದು ಖಚಿತಪಡಿಸಿದರೆ ಆತನ ಗುರುತು ಸಿಗಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯಲ್ಲಿ ಅವರ ಪಾತ್ರ ಇದೆಯ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಮಂಗಳೂರು ಎಸಿಪಿ ಪರಮೇಶ್ವರ ಹೆಗಡೆ ಅವರು ಈ ಪ್ರಕರಣದ ತನಿಖಾಧಿಕಾರಿಯಾಗಿದ್ದಾರೆ. ವಿವಿಧ ತಂಡಗಳನ್ನು ರಚಿಸಲಾಗಿದೆ. ಬಹಳಷ್ಟು ಮಾಹಿತಿ ಸಿಕ್ಕಿದ್ದು, ಸಾಕ್ಷ್ಯಗಳು ನಮ್ಮ ಬಳಿ ಇವೆ. ಇವುಗಳ ಬಗ್ಗೆ ನಾಳೆ ಸ್ಪಷ್ಟನೆ ಸಿಗಬಹುದು ಎಂದು ಮಾಹಿತಿ ನೀಡಿದರು.
Discover more from Coastal Times Kannada
Subscribe to get the latest posts sent to your email.








Discussion about this post