ಮಂಗಳೂರು: ನವಚೇತನ ಕೇರ್ ಸೆಂಟರ್, ನರ ಸಂಬಂತ, ಮಾನಸಿಕ ಕಾಯಿಲೆ , ಕ್ಯಾನ್ಸರ್‌ನಂತಹ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಮನೆಯ ಹೊರಗೆ ಕಡಿಮೆ ವೆಚ್ಚದ ಆರೈಕೆ ವ್ಯವಸ್ಥೆಯ ಕುರಿತಂತೆ ಜಾಗೃತಿ ನಡೆಸುತ್ತಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ದೈಗೋಳಿಯಲ್ಲಿರುವ ಶ್ರೀ ಸಾಯಿ ನಿಕೇತನ ಆಶ್ರಮದಲ್ಲಿ 18ಹಾಸಿಗೆ ಸಾಮರ್ಥ್ಯದ ಸೌಲಭ್ಯವೊಂದನ್ನು ಸ್ಥಾಪಿಸಲಾಗಿದ್ದು, ಇದರ ಉದ್ಘಾಟನೆಯು ನವೆಂಬರ್ 23, 2025ರ ಭಾನುವಾರ ಅಪರಾಹ್ನ 2ಗಂಟೆಗೆ ನಡೆಯಲಿದೆ.ನರಸಂಬಂತ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ಕಲ್ಪಿಸಲು ಇಂತಹ ಒಂದು ಯೋಜನೆಯನ್ನು ರೂಪಿಸಲಾಗಿದೆ.
ಕೈಗೆಟಕುವ ವೆಚ್ಚದಲ್ಲಿ ಹಿತಕಾರಿ ಸೌಲಭ್ಯಗಳ ಅಪೇಕ್ಷೆ ಮತ್ತು ಮನೆಯಲ್ಲಿ ಸಂಕೀರ್ಣವಾದ ವೈದ್ಯಕೀಯ ಅಗತ್ಯಗಳನ್ನು ನಿರ್ವಹಿಸುವಲ್ಲಿ ಕುಟುಂಬಗಳು ಒದ್ದಾಡುತ್ತಿರುವ ಹಿನ್ನೆಲೆಯಲ್ಲಿ ರೋಗಿಗಳಿಗೆ ಮನೆಯಿಂದ ಹೊರಗೆ ಮನೆ ವಾತಾವರಣದಲ್ಲಿ ಸೂಕ್ತ ಆರೈಕೆ ಮೂಲಕ ಚೇತರಿಕೆಗೆ ನೆರವಾಗುವ ವ್ಯವಸ್ಥೆಗಳಿಗೆ ಇಂದು ಬೇಡಿಕೆಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸುಸ್ಥಿರ ವೈದ್ಯಕೀಯ ಕಾಳಜಿಯ ಅಗತ್ಯವಿರುವ ರೋಗಿಗಳಿಗೆ ಗುಣಮಟ್ಟದ ಜೀವನ, ಸುರಕ್ಷತೆ, ಘನತೆಗಳನ್ನು ಖಾತ್ರಿಪಡಿಸುವ ಇಂತಹ ಒಂದು ಕಾಳಜಿ ಕೇಂದ್ರದ ಅಗತ್ಯ ಇರುವುದನ್ನು ಮನಗಂಡು, ಬೆಂಗಳೂರಿನ ಭಟ್ ಬಯೋಟೆಕ್ ಇಂಡಿಯಾ (ಪ್ರೈ)ಲಿಮಿಟೆಡ್ ಸಂಸ್ಥೆಯ ಸಹಸಂಸ್ಥೆಯಾದ ನವಚೇತನ ಕೇರ್ ಸೆಂಟರ್ ಇಂತಹ ಯೋಜನೆಯನ್ನು ರೂಪಿಸಿದೆ .ನಿರ್ಗತಿಕರು, ಹಿರಿಯ ನಾಗರಿಕರು, ಸೌಲಭ್ಯ ವಂಚಿತರು ಮತ್ತು ಮಾನಸಿಕ ಅಸ್ವಸ್ಥರ ಸೇವೆಯಲ್ಲಿ ಖ್ಯಾತಿಗಳಿಸಿರುವ ದೈಗೋಳಿಯ ಶ್ರೀ ಸಾಯಿ ಸೇವಾ ಪ್ರತಿಷ್ಠಾನಮ್‌ನ ಸಹಯೋಗದಲ್ಲಿ ಅದು ಇಂತಹ ಒಂದು ವಿಶಿಷ್ಟ ಯೋಜನೆಯನ್ನು ರೂಪಿಸಿದೆ.ಹಿರಿಯ ನಾಗರಿಕರಿಗೆ ಎದುರಾಗುವಂತಹ ಆರೋಗ್ಯ ಸಂಬಂ ಸಮಸ್ಯೆಗಳಿಗೆ ನೆರವಾಗುವುದು ನವಚೇತನದ ಕಾಳಜಿಯಾಗಿದೆ.ಭಟ್ ಬಯೋಟೆಕ್ ಈಗಾಗಲೇ ಪುತ್ತೂರಿನ ಶಾಂತಿಗೋಡಿನ ಬಳಿ ಹಿರಿಯ ನಾಗರಿಕರಿಗಾಗಿ ವಿಶಿಷ್ಟವಾದ ನವಚೇತನ ರಿಟಾಯರ್‌ಮೆಂಟ್ ಟೌನ್‌ಶಿಪ್ ಸ್ಥಾಪಿಸಿ ಹಿರಿಯ ನಾಗರಿಕರಿಗೆ ಉತ್ತಮ ಜೀವನವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿರುವ ಸಂಸ್ಥೆಯಾಗಿದೆ.
ಈ ಕೇಂದ್ರದಲ್ಲಿ ಈಗ ಹೆಚ್ಚಿನ ಕುಟುಂಬಗಳಿಗೆ ಇಂತಹ ಸೌಲಭ್ಯ ಪಡೆಯುವ ಅವಕಾಶವಿದೆ. 24*7ವೈದ್ಯಕೀಯ ಮೇಲ್ವಿಚಾರಣೆ, ಪಿಸಿಯೋಥೆರಪಿ,ವೃತ್ತಿಪರ ಥೆರಪಿ, ವೈಯಕ್ತಿಕ ಆರೈಕೆಗಳಂತಹ ಅಗತ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.ನವಚೇತನ ಕೇರ್ ಸೆಂಟರ್ ರೋಗಿಗಳ ದೈಹಿಕ ಚೇತರಿಕೆಗಷ್ಟೇ ಬೆಂಬಲವಾಗಿರದೆ, ಅವರಿಗೆ ಮಾನಸಿಕ , ಭಾವನಾತ್ಮಕ ಚೈತನ್ಯ ತುಂಬಿ ಸಮಗ್ರ ನೆಲೆಯಲ್ಲಿ ಅವರ ಯೋಗಕ್ಷೇಮಕ್ಕೆ ನೆರವಾಗುತ್ತದೆ.
ಯಾಕಾಗಿ ಈ ಸೇವೆ ?
ಆಸ್ಪತ್ರೆಯಲ್ಲಿ ಉಳಿದು ಚೇತರಿಸಿಕೊಳ್ಳುವ ಅಥವಾ ದೀರ್ಘ ಕಾಲೀನ ಕಾಯಿಲೆಗಳ ನಿರ್ವಹಣೆಯಿಂದು ಒಂದು ಸವಾಲಿನ ಸಮಸ್ಯೆಯಾಗಿದೆ.ವೇಗದ ಜೀವನಶೈಲಿ, ಹೆಚ್ಚಿನ ಸಂಚಾರ ದಟ್ಟಣೆ, ಮನೆಯ ವಾತಾವರಣದಲ್ಲಿ ಸೂಕ್ತ ರೀತಿಯ ಆರೋಗ್ಯ ಆರೈಕೆಯು ರೋಗಿಯ ಚೇತರಿಕೆಯನ್ನು ಕ್ಷಿಪ್ರಗೊಳಿಸುವುದಾದರೂ ಅದಕ್ಕಿರುವ ಅವಕಾಶಗಳ ಸೀಮಿತತೆ ಇತ್ಯಾದಿ ಸಂಕಷ್ಟಗಳ ಹಿನ್ನೆಲೆಯಲ್ಲಿ ಸಾಮಾಜಿಕ ಕಳಕಳಿಯಿಂದ ನವಚೇತನ ಕೇರ್ ಸೆಂಟರ್‌ನ್ನು ಸ್ಥಾಪಿಸಲಾಗಿದೆ.ಇಲ್ಲಿ 24ಗಂಟೆಗಳ ಕಾಲ ಪ್ರೀತಿಯಿಂದ ನಿಮಗೆ ಕೇರ್ ಟೇಕರ್ ಸೇವೆಯನ್ನು ಒದಗಿಸುವುದು ನಮ್ಮ ಕಾಳಜಿಯಾಗಿದೆ. ವಿಶೇಷವಾಗಿ ಅವರಿಗೆ ಅಗತ್ಯವಿರುವ ಮೂಲಸೌಕರ್ಯಗಳು ಮತ್ತು ಸೇವೆಗಳನ್ನು ಒದಗಿಸುವ ಮೂಲಕ , ಈ ಪ್ರದೇಶದಾದ್ಯಂತ ಇರುವ ನರ ಮತ್ತು ದೀರ್ಘಕಾಲೀನ ಕಾಯಿಲೆಗಳ ಸಮಸ್ಯೆ ಹೊಂದಿರುವ ಜನರಿಗೆ ಗುಣಮಟ್ಟದ ದೀರ್ಘಕಾಲೀನ ಆರೈಕೆ ಆಯ್ಕೆಗಳಲ್ಲಿನ ಕೊರತೆ ನೀಗಿ ನೆರವಾಗಲು ಅಪೇಕ್ಷಿಸಿದೆ.
ವಿಶೇಷವಾಗಿ ಬುದಿಟಛಿ ಮಾಂದ್ಯತೆ, ಅಲ್ಜೇಮರ್,ಪಾರ್ಶ್ವವಾಯುನಂತಹ ಸಾಂಕ್ರಾಮಿಕವಲ್ಲದ ನರ ಸಂಬಂ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗುವುದು ಇದರ ಉದ್ದೇಶವಾಗಿದೆ.ಭಾರತದಲ್ಲಿ ಇಂದು 60 ರ ಮೇಲಿನ ವಯೋಮಾನದ ಶೇ.7.4ರಷ್ಟು ಮಂದಿ ನಾಗರಿಕರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ .ಇದೇ ರೀತಿ ಶೇ.3.69ಮಿಲಿಯ ಅಲ್ಜೀಮರ್ ಕಾಯಿಲೆ ಪೀಡಿತರಿದ್ದಾರೆ.14.6ಲಕ್ಷ ಕ್ಯಾನ್ಸರ್ ಪ್ರಕರಣಗಳಿವೆ.ಇಂತಹ ಸನ್ನಿವೇಶದಲ್ಲಿ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳಲ್ಲಿ , ಮನೆಗಳಿಂದ ಹೊರಗಡೆ ರೋಗಿಗಳ ಸಮರ್ಪಕ ಆರೈಕೆ ಮಾಡುವ ಹಿತಕರವಾದ ಮತ್ತು ವೃತ್ತಿಪರತೆ ಹೊಂದಿರುವ ಸೂಕ್ತ ಸೌಲಭ್ಯಗಳ ಅಗತ್ಯವಿರುವುದನ್ನು ಮನಗಂಡು ನವಚೇತನ ಕೇರ್ ಸೆಂಟರ್ ಇಂತಹ ಒಂದು ಸೌಕರ್ಯವನ್ನು ಕಲ್ಪಿಸಿಕೊಟ್ಟಿದೆ.ಈ ನಿಟ್ಟಿನಲ್ಲಿ ದಕ್ಷವಾಗಿರುವ ಮತ್ತು ಸಹಾನುಭೂತಿಯಿಂದ ಕೂಡಿದ ಅತ್ಯುತ್ತಮ ತರಬೇತಿ ಪಡೆದ ದಾದಿಯರು ಗುಣಮಟ್ಟದ ಸಮರ್ಪಿತ ಸೇವೆಯನ್ನು ಒದಗಿಸಲಿದ್ದಾರೆ.
ಡಾ.ಶ್ಯಾಮ್ ಭಟ್ ಬಗ್ಗೆ…
ಈ ಸೌಲಭ್ಯವನ್ನು ಕಲ್ಪಿಸುವ ನವಚೇತನ ಕೇರ್ ಸೆಂಟರ್‌ನ ಸಂಸ್ಥಾಪಕರಾದ ಡಾ.ಶ್ಯಾಮ್ ಭಟ್ ಅವರು ಬೆಂಗಳೂರಿನ ಭಟ್ ಬಯೋಟೆಕ್ ಸಂಸ್ಥೆಯ ಚೇರ್‌ಮನ್ ಆಗಿದ್ದಾರೆ.ಅವರು ಅಮೆರಿಕದಲ್ಲಿ ಎಚ್‌ಐವಿ ಕ್ಷೇತ್ರದಲ್ಲಿ ನಡೆಸಿರುವ ಅತ್ಯಂತ ಮಹತ್ವದ ಸಂಶೋಧನೆಯಿಂದಾಗಿ ಖ್ಯಾತರಾಗಿದ್ದಾರೆ.ಮೂಲತಃ ಕಾಸರಗೋಡು ಜಿಲ್ಲೆಯವರಾಗಿದ್ದಾರೆ.ಅಮೆರಿಕದಲ್ಲಿ ವಿಜ್ಞಾನಿಯಾಗಿ ಸ್ವದೇಶ ಪ್ರೇಮದಿಂದ ವಾಪಸಾಗಿ ದೇಶದಲ್ಲಿನ ಬಡಜನರಿಗೆ ಕಡಿಮೆ ವೆಚ್ಚದಲ್ಲಿ ರೋಗಪತ್ತೆ ಸಾಧನಗಳು ಲಭಿಸುವಂತಾಗಬೇಕು ಎಂಬ ಕಾಳಜಿಯಿಂದ ಬೆಂಗಳೂರಿನಲ್ಲಿ ಭಟ್ ಬಯೋಟೆಕ್ ಸಂಸ್ಥೆಯನ್ನು ಸ್ಥಾಪಿಸಿದವರು. ಕೊರೋನಾ ಪಿಡುಗಿನ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಗೆ ಕಾನ್ಸೆಂಟ್ರೇಟರ್ ಸೇರಿದಂತೆ ಅಗತ್ಯ ಸಾಧನಗಳನ್ನು ಉಚಿತವಾಗಿ ಒದಗಿಸಿ ಅಪಾರ ಮಾನವೀಯ ಕಾಳಜಿ ತೋರಿದ್ದರು.ಪುತ್ತೂರಿನಲ್ಲಿ ಹಿರಿಯ ನಾಗರಿಕರಿಗಾಗಿ ನವಚೇತನ ವಸತಿ ಸಮುಚ್ಚಯ ಸೌಲಭ್ಯವನ್ನು ಕಲ್ಪಿಸಿಕೊಟ್ಟಿರುವ ಅವರು ಇದೀಗ ದೈಗೋಳಿಯ ಸಾಯಿ ನಿಕೇತನದಲ್ಲಿ ಇಂತಹ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಮಾಜದಲ್ಲಿನ ಸಂಕಷ್ಟಪೀಡಿತರ ನೆರವಿಗೆ ಮುಂದಾಗಿದ್ದಾರೆ.
ದೈಗೋಳಿ ಶ್ರೀ ಸಾಯಿ ನಿಕೇತನ ಆಶ್ರಮ ಮಂಜೇಶ್ವರ ತಾಲೂಕಿನ ದೈಗೋಳಿಯಲ್ಲಿ ಶ್ರೀ ಸಾಯಿ ಸೇವಾ ಪ್ರತಿಷ್ಠಾನ(ಎಸ್‌ಎಸ್‌ಎಸ್‌ಪಿ)ಯ ಆಡಳಿತ ವಿಶ್ವಸ್ಥರಾದ ಡಾ.ಉದಯ ಕುಮಾರ್ ನೂಜಿ ಮತ್ತು ಶ್ರೀಮತಿ ಡಾ.ಶಾರದಾ ಉದಯ ಕುಮಾರ್ ಅವರ ನೇತೃತ್ವದಲ್ಲಿ ನಿರ್ಗತಿಕರು, ವಯೋವೃದಟಛಿರು, ಸೌಲಭ್ಯ ವಂಚಿತರು, ಮಾನಸಿಕ ಅಸ್ವಸ್ಥರ ಸೇವೆಯಲ್ಲಿ ತೊಡಗಿದ್ದಾರೆ. ಬೀದಿಗಳಲ್ಲಿ ತಿರುಗಾಡುತ್ತಿರುವ ಅನಾಥ, ರೋಗಪೀಡಿತ, ಮಾನಸಿಕ ಕಾಯಿಲೆಗೀಡಾದ ನೂರಾರು ಮಂದಿಯನ್ನು ಕರೆ ತಂದು ಸೂಕ್ತ ಚಿಕಿತ್ಸೆ ನೀಡಿ ಪ್ರೀತಿ,ವಾತ್ಸಲ್ಯದ ಮೂಲಕ ಅವರನ್ನು ಆರೋಗ್ಯವಂತರನ್ನಾಗಿಸುತ್ತಿರುವ ಶ್ರೀ ಸಾಯಿ ನಿಕೇತನದ ಅದ್ಭುತ ಮಾನವೀಯ ಸೇವಾ ಕಾರ್ಯ ಈಗ ಸರ್ವವಿದಿತ. 280ಕ್ಕೂ ಅಕ ಮಂದಿ ಇಂತಹ ದಿಕ್ಕು ತಪ್ಪಿದ ಉತ್ತರ ಭಾರತದ ಮಾನಸಿಕ ಅಸ್ವಸ್ಥರನ್ನು ಚಿಕಿತ್ಸೆ ಕೊಡಿಸಿ ಮರಳಿ ಊರಿಗೆ ಕಳುಹಿಸಿಕೊಟ್ಟವರು
ಸುದ್ದಿಗೋಷ್ಠಿಯಲ್ಲಿ ಡಾ.ಉದಯಕುಮಾರ್ ನೂಜಿ ಮತ್ತು ಶ್ರೀಮತಿ ಡಾ.ಶಾರದಾ ಉದಯಕುಮಾರ್ ದಂಪತಿ. ಡಾ.ಶಾಮ್ ಭಟ್ , ಚೇರ್‌ಮನ್ , ಭಟ್ ಬಯೋಟೆಕ್ , ಬೆಂಗಳೂರು ನವಚೇತನ ಕೇರ್ ಸೆಂಟರ್, ದೈಗೋಳಿ, ಡಾ.ಉದಯ ಕುಮಾರ್ ನೂಜಿ ಆಡಳಿತ ವಿಶ್ವಸ್ಥರು ಸಾಯಿ ನಿಕೇತನ ಸೇವಾಶ್ರಮ, ದೈಗೋಳಿ
Discover more from Coastal Times Kannada
Subscribe to get the latest posts sent to your email.







Discussion about this post