• About us
  • Contact us
  • Disclaimer
Saturday, March 14, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಶತಮಾನೋತ್ಸವ ಸಮಾರೋಪ ಸಮಾರಂಭ

Coastal Times by Coastal Times
January 22, 2026
in ಕರಾವಳಿ
ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಶತಮಾನೋತ್ಸವ ಸಮಾರೋಪ ಸಮಾರಂಭ
37
VIEWS
WhatsappTelegramShare on FacebookShare on Twitter

ಮಂಗಳೂರು: ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಇದೇ 2026ರ ಜನವರಿ 25ರ ಭಾನುವಾರದಂದು ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್ ಸಭಾಂಗಣದಲ್ಲಿ ಶತಮಾನೋತ್ಸವ ಸಮಾರೋಪ ಸಮಾರಂಭ ನೆರವೇರಲಿದೆ.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದು ಎಸ್.ಎಸ್.ವಿ.ಪಿ. ಅಂತರಾಷ್ಟ್ರೀಯ ಅಧ್ಯಕ್ಷ ರಾದ ಶ್ರೀ ಯುವಾನ್ ಮ್ಯಾನುಯೆಲ್ ಬ್ಯುರ್ಗೊ ಗೊಮೆಜ್ ಅವರು ಸ್ಪೇಯ್ನ್ ದೇಶದಿಂದ ಬಂದು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಗೌರವ ಅತಿಥಿಗಳಾಗಿ ಮಂಗಳೂರು ಧರ್ಮ ಪ್ರಾಂತ್ಯ ದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜ, ಎಸ್. ಎಸ್. ವಿ. ಪಿ. ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಶ್ರೀ ಜೂಡ್ ಮಂಗಳರಾಜ್ ಹಾಗೂ ಅಂತಾರಾಷ್ಟ್ರೀಯ ಓಂಬುಡ್ಸ್ಮನ್ ಶ್ರೀ ಜೋಸೆಫ್ ಪಾಂಡಿಯನ್ ಅವರು ಉಪಸ್ಥಿತಲಿರುವರು.

ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಶ್ರೀ ಐವನ್ ಡಿಸೋಜ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾವುಸ್ಟಿನ್ ಲೂಕಾಸ್ ಲೋಬೊ, ಮತ್ತು ಖ್ಯಾತ ಉದ್ಯಮಿ – ದಾನಿ ಶ್ರೀ ಜೋಸೆಫ್ ಎಲಿಯಾಸ್ ಮಿನೇಜಸ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಜೊತೆಗೆ ಎಸ್.ಎಸ್.ವಿ.ಪಿ. ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಯಾಗು ಮಾಣಿಕ್ಯಂ, ಆಶಾ ವಾಜ್ ಮತ್ತು ಯುವ ಪ್ರತಿನಿಧಿ ಅಲಿಸ್ಟರ್ ನಜರೆತ್ ಅವರು ವೇದಿಕೆಯಲ್ಲಿ ಉಪಸ್ಥಿತಲಿರುವರು.

ವಿಶ್ವದ ಅತಿ ದೊಡ್ಡ ಕ್ಯಾಥೊಲಿಕ್ ಸಮಾನ ಮನಸ್ಕ ಸೇವಾ ಸಂಸ್ಥೆಯಾದ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನ ಬೆಂದೂರ್ ಚರ್ಚ್ ನಲ್ಲಿ 1926ರಲ್ಲಿ ಜನವರಿ 10 ರಂದು ಅಸ್ತಿತ್ವಕ್ಕೆ ಬಂತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕದ ಸ್ಥಾಪನೆಯಾಯಿತು. ನಂತರ 1926 ಇಸವಿಯ ಮೇ ತಿಂಗಳಲ್ಲಿ ಇನ್ನೂ ಎರಡು ಘಟಕಗಳು ರೊಸಾರಿಯೊ ಕೆಥಡ್ರಾಲ್ ಮತ್ತು ಬಿಜೈ ಚರ್ಚ್ ನಲ್ಲಿ ಅಸ್ತಿತ್ವಕ್ಕೆ ಬಂದವು.

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಪ್ರಮುಖ ಸೇವಾ ಕೆಲಸವೆಂದರೆ ಬಡವರು ಮತ್ತು ನಿರ್ಗತಿಕರನ್ನು ಭೇಟಿಯಾಗುವುದು ಮತ್ತು ಅವರಿಗೆ ಅಗತ್ಯದ ನೆರವನ್ನು ವಿತರಿಸುವುದು. ಹೀಗೆ ನೆರವನ್ನು ನೀಡುವಾಗ ಗೌಪ್ಯತೆಯನ್ನು ಕಾಪಾಡಿ ಕೊಳ್ಳಲಾಗುತ್ತದೆ.

ಪ್ರಸ್ತುತ ಮಂಗಳೂರು ಕೇಂದ್ರಿಯ ಸಮಿತಿಯ ಅಧೀನದಲ್ಲಿ 111 ಘಟಕಗಳಿದ್ದು ಪ್ರತೀ ಘಟಕವು ತಮ್ಮ ಪರಿಸರದಲ್ಲಿ ಕನಿಷ್ಠ 5 ಕುಟುಂಬಗಳನ್ನು ದತ್ತು ಪಡೆದು ಅವರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತದೆ. ಹೀಗೆ ಪ್ರಸ್ತುತ 623 ದತ್ತು ಕುಟುಂಬಗಳಿದ್ದು 1765 ಕುಟುಂಬದ ಸದಸ್ಯರನ್ನು ಹೊಂದಿದೆ.

ಎಲ್ಲಾ 111 ಘಟಕಗಳು ಮತ್ತು 2 ಯುವ ಘಟಕಗಳಲ್ಲಿ ಒಟ್ಟು1618 ಸದಸ್ಯ ಬಲ ಹೊಂದಿರುವ ಎಸ್.ಎಸ್.ವಿ.ಪಿ. ಬಡವರ ಸೇವೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ತೊಡಗಿಸಿಕೊಂಡಿದೆ.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು ಮತ್ತು ತುಂಬೆ ಇವರ ಸಹಯೋಗದೊಂದಿಗೆ ದತ್ತು ಪಡೆದ ಕುಟುಂಬಗಳ ಸದಸ್ಯರಿಗೆ ಉಚಿತ ವೈದ್ಯಕೀಯ ಮತ್ತು ಡಯಾಲಿಸಿಸ್ ಆರೈಕೆಯನ್ನು ಒದಗಿಸುವ ಮಹತ್ತರವಾದ ಯೋಜನೆ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಶತಮಾನೋತ್ಸವದ ಸವಿನೆನಪಿಗಾಗಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಎರಡು ಮಹತ್ತರ ಯೋಜನೆಗಳನ್ನು ರೂಪಿಸಿದೆ.
‘ಶಿಕಪ್’ ಎಸ್.ಎಸ್.ವಿ.ಪಿ.ಯ ದತ್ತು ಕುಟುಂಬಗಳ ಸುಮಾರು 405 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು.
‘ಆಸ್ರೊ ’ – ನೂರು ಕುಟುಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ.

ಸಮಾರೋಪ ಕಾರ್ಯಕ್ರಮದಂದು ಶ್ರೀ ಜೋಸೆಫ್ ಇ ಮಿನೇಜಸ್ ಇವರ ಟ್ರಿನಿಟಿ ಮೆಡಿಕೇರ್ ಸರ್ವಿಸಸ್ ಟ್ರಸ್ಟ್ ಉಡುಪಿ ಇವರ ಸಹಾಯದೊಂದಿಗೆ ಕಿಡ್ನಿ ವೈಫಲ್ಯತೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಹಾಗೂ ಡಯಾಲಿಸಿಸ್ ವೆಚ್ಚವನ್ನು ಭರಿಸಲು ನೆರವಾಗುವ SSVP-TRINITY KIDNEY CARE PROJECT ಪ್ರಾರಂಭವಾಗಲಿದೆ.

ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಇತಿಹಾಸ: 1833 ಇಸವಿಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ನ 22 ವರ್ಷದ ವಂದನೀಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ 6 ಒಡನಾಡಿಗಳು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ 158 ದೇಶಗಳಲ್ಲಿ ಹರಡಿದೆ. 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು ಹತ್ತು ಲಕ್ಷಕ್ಕೂ ಮಿಕ್ಕಿ ಸ್ವಯಂಸೇವಕರು ದೀನ ದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 1863 ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಗೊಂಡು, ಪ್ರಸ್ತುತ 7225 ಘಟಕಗಳು ಮತ್ತು 65546 ಸದಸ್ಯರನ್ನು ಹೊಂದಿದೆ.

ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು .ಜ್ಯೋ ಕುವೆಲ್ಲೊ , ಅಧ್ಯಕ್ಷರು, ಸೆಂಟ್ರಲ್ ಕೌನ್ಸಿಲ್ ; ಲಿಗೊರಿ ಫೆರ್ನಾಂಡಿಸ್, ಕಾರ್ಯದರ್ಶಿ, ಸೆಂಟ್ರಲ್ ಕೌನ್ಸಿಲ್; ಕ್ಲೆರೆನ್ಸ್ ಮಚಾದೊ ,ಕೋಶಾಧಿಕಾರಿ, ಸೆಂಟ್ರಲ್ ಕೌನ್ಸಿಲ್; ಶ್ರೀಮತಿ ಫಿಲೋಮಿನಾ ಮಿನೆಜೆಸ್ , ಸಂಚಾಲಕಿ, ಶತಮಾನೋತ್ಸವ ಆಚರಣೆ ಸಮಿತಿ; ಹಾಗೂ ಲೊಯ್ಡ್ ರೇಗೊ , ಸಂಚಾಲಕರು, ಮಾಧ್ಯಮ ಸಮಿತಿ

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ರೀಲ್ಸ್‌ ಲೈಕ್‌ಗೋಸ್ಕರ ಯುವಕನ ಜೀವವನ್ನೇ ತೆಗೆದ ಯುವತಿ ಶಿಂಜಿತಾ ಮುಸ್ತಫಾ ಕೊನೆಗೂ ಅರೆಸ್ಟ್‌

Next Post

ಪುತ್ತೂರು ಯುವತಿಗೆ ಮಗು ಕರುಣಿಸಿದ ಪ್ರಕರಣ ; ಜ.31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ

Related Posts

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು
ಕರಾವಳಿ

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು

March 14, 2026
18
ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ
ಕರಾವಳಿ

ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

March 14, 2026
10
Next Post
ಪುತ್ತೂರು ಯುವತಿಗೆ ಮಗು ಕರುಣಿಸಿದ ಪ್ರಕರಣ ; ಜ.31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ

ಪುತ್ತೂರು ಯುವತಿಗೆ ಮಗು ಕರುಣಿಸಿದ ಪ್ರಕರಣ ; ಜ.31ರೊಳಗೆ ಮದುವೆ ನಡೆಯದಿದ್ದರೆ ಫೆ.7ರಂದು ಮಗುವಿಗೆ ನಾಮಕರಣ: ಪ್ರತಿಭಾ ಕುಳಾಯಿ

Discussion about this post

Recent News

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು

March 14, 2026
18
ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

March 14, 2026
10
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು

ಶಿರಾಡಿ: ಕೆಎಸ್ಸಾರ್ಟಿಸಿ ಬಸ್‌ ಮತ್ತು ಕಾರು ಮುಖಾಮುಖಿಯಾಗಿ ಢಿಕ್ಕಿ ಮೂರು ಮಂದಿ ಸ್ಥಳದಲ್ಲೇ ಮೃತ್ಯು

March 14, 2026
ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

ಸುರತ್ಕಲ್; ಬಿಲ್ ಕಟ್ಟದ ನೆಪದಲ್ಲಿ ಕೊರಗ ಸಮುದಾಯಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಿ ಅನ್ಯಾಯ: ತಾ.ಪಂ. ಕಾರ್ಯನಿರ್ವಣಾಧಿಕಾರಿ ಭೇಟಿ

March 14, 2026
ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

ಸುರತ್ಕಲ್ ಗ್ಯಾರೇಜ್ ನಿಂದ ವಾಹನಗಳ ಬಿಡಿಭಾಗ ಕಳ್ಳತನ ಪ್ರಕರಣ; ಓರ್ವ ಆರೋಪಿ ಸೆರೆ

March 13, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d