ಮಂಗಳೂರು ; 2012 ರಲ್ಲಿ ಮಂಗಳೂರು, ಬೆಂಗಳೂರು ನಗರದಲ್ಲಿ ಆರಂಭಗೊಂಡಿದ್ದ ನೋವಿಗೋ ಸೊಲ್ಯುಶನ್ಸ್ ಎನ್ನುವ ಹೆಸರಾಂತ ಐಟಿ ಕಂಪನಿಯಾಗಿದ್ದು ಈಗ ಮಂಗಳೂರು ನಗರದ ಫರ್ ನಲ್ಲಿ ಏ.23ರಂದು ಸಂಜೆ 5 ಗಂಟೆಗೆ ಹೊಸ ಶಾಖೆ ಉದ್ಘಾಟನೆಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಇನ್ಫೋಸಿಸ್ ಬಿಪಿಎಮ್ ಲಿ. ಸಿಇಒ & ಎಂ.ಡಿ, ಎಕ್ಸಿಕ್ಯೂಟೀವ್ ಉಪಾಧ್ಯಕ್ಷರಾದ ಅನಂತ ರಾಧಾಕೃಷ್ಣನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ವಿವಿಧ ಗಣ್ಯರು ಉಪಸ್ಥಿತರಿರಲಿದ್ದಾರೆ.
ಮಂಗಳೂರಿನಲ್ಲಿ ನೋವಿಗೋ ಸೊಲ್ಯುಶನ್ಸ್ ಕಂಪನಿ ಪ್ರಬಲವಾಗಿ ಬೆಳೆಯುತ್ತಿದ್ದು ಮೂರು ವರ್ಷಗಳಲ್ಲಿ ಅನಿಯಮಿತ ಸಾಧನೆ ದಾಖಲಿಸಿದೆ. ದುಬೈ, ಯುಎಇ, ಯುಕೆ, ಸಿಂಗಾಪುರದಲ್ಲಿ ಶಾಖೆ ಹೊಂದಿದ್ದು ಡಲ್ಲಾಸ್ ಟೆಕ್ಸಾಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ಮಂಗಳೂರು, ಬೆಂಗಳೂರು, ಚೆನ್ನೈ ಮತ್ತು ಕೊಚ್ಚಿಯಲ್ಲಿ ಶಾಖೆ ವಿಸ್ತರಿಸುತ್ತಿದ್ದು, ಮುಂದಿನ ವರ್ಷದಲ್ಲಿ ಕೆನಡಾ, ಕತಾರ್, ನೆದರ್‌ಲ್ಯಾಂಡ್ಸ್ ದೇಶದಲ್ಲಿ ಹೊಸ ಶಾಖೆಯು ಕಾರ್ಯಾಚರಿಸಲಿದೆ. 2025ರ ವೇಳೆಗೆ 1,500ಕ್ಕೂ ಹೆಚ್ಚು ಉದ್ಯೋಗ ದೊರಕಿಸುವ ಯೋಜನೆ ಹೊಂದಿದೆ. ಪ್ರಸ್ತುತ 700ಕ್ಕೂ ಅಧಿಕ ಐಟಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಮಂಗಳೂರು ನಗರದ ಫಳ್ನೀರ್ ನಲ್ಲಿ ಕರುಣಾ ಫ್ರೆಡ್ ಸೆಂಟರಿನ ಐದನೇ ಮಹಡಿಯಲ್ಲಿ ಹೊಸ ಶಾಖೆ ಆರಂಭಿಸುತ್ತಿದೆ. ಮಂಗಳೂರಿನ ಪ್ರವೀಣ್ ಕುಮಾರ್ ಕಲ್ಯಾವಿ, ನೊವಿಗೋ ಸೊಲ್ಯುಶನ್ಸ್ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಆಗಿದ್ದು, ಚೀಫ್ ಟೆಕ್ನಲಜಿ ಅಫೀಸರ್ ಮತ್ತು ಸಹ ಸಂಸ್ಥಾಪಕರಾಗಿರುವ ಮೊಹಮ್ಮದ್ ಹನೀಫ್, ಚೀಫ್ ಆಪರೇಟಿಂಗ್ ಆಫೀಸರ್ ಮತ್ತು ಸಹ ಸಂಸ್ಥಾಪಕರಾಗಿರುವ ಮೊಹಮ್ಮದ್ ಜರೋದ್, ಚೀಫ್ ಕಸ್ಟೋಮರ್ ಆಫೀಸರ್ ಮತ್ತು ಸಹ ಸಂಸ್ಥಾಪಕರಾದ ಶಿಹಾಬ್ ಕಲಂದರ್ ಅವರು ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ : ಪ್ರವೀಣ್ ಕುಮಾರ್ ಕಲ್ಬಾವಿ – ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಮೊಹಮ್ಮದ್ ಹನೀಫ್ – ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ, ಮೊಹಮ್ಮದ್ ಜರೂದ್ – ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿಹಾಬ್ ಕಲಂದರ್ – ಸಹ-ಸಂಸ್ಥಾಪಕ ಮತ್ತು ಮುಖ್ಯ ಗ್ರಾಹಕ ಅಧಿಕಾರಿ.
Discover more from Coastal Times Kannada
Subscribe to get the latest posts sent to your email.
Discussion about this post