ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಕಿಸ್ಸಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಿಸ್ಸಿಂಗ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಿಸ್ಸಿಂಗ್ ಸ್ಪರ್ಧೆ ಮಾಡಿದ್ದು, ವಿಡಿಯೋ ಮಾಡಿದ ವಿದ್ಯಾರ್ಥಿಯ ಬಂಧನ ಮಾಡಲಾಗಿದೆ. ಕಿಸ್ಸಿಂಗ್‌ನಲ್ಲಿ ತೊಡಗಿದ್ದ ವಿದ್ಯಾರ್ಥಿಗಳು ಪಿಯುಸಿ ಶಿಕ್ಷಣ ಪಡೆಯುತ್ತಿದ್ದರು ಎನ್ನಲಾಗಿದೆ. ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳ ಎದುರೇ ಕಿಸ್ ಮಾಡಿರುವುದು ಭಾರೀ ಸಂಚಲನ ಮೂಡಿಸಿದೆ. ಪಂದ್ಯದ ನಿಯಮದಂತೇ ವಿದ್ಯಾರ್ಥಿ, ವಿದ್ಯಾರ್ಥಿನಿ ಎಲ್ಲರ ಎದುರೇ ಚುಂಬನ ಮಾಡಿದ್ದು, ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಪ್ರತಿಷ್ಠಿತ ಖಾಸಗಿ ಕಾಲೇಜಿನ ಕಿಸ್ಸಿಂಗ್ ಸ್ಪರ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಲವರ ಆಕ್ರೋಶಕ್ಕೂ ಕಾರಣವಾಗಿದೆ.
ಮಾಹಿತಿ ಪ್ರಕಾರ, ಟ್ರುತ್ ಅಂಡ್ ಡೇರ್ ಅನ್ನುವ ಗೇಮ್ ಆಡುವ ನೆಪದಲ್ಲಿ ಬಾವುಟಗುಡ್ಡೆಯ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಒಂದೇ ಕಾಲೇಜಿನ ಕೆಲವು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸೇರಿದ್ದರು. ಗೇಮ್ ನಲ್ಲಿ ಸೋತವರು ಹುಡುಗ- ಹುಡುಗಿಗೆ ಬಹಿರಂಗ ಕಿಸ್ ಕೊಡಬೇಕೆಂಬ ಷರತ್ತು ಇದ್ದುದರಿಂದ ಹುಡುಗ ಕಿಸ್ ಕೊಟ್ಟಿದ್ದಾನೆ. ಈ ದೃಶ್ಯವನ್ನು ಇನ್ನೊಬ್ಬ ವಿದ್ಯಾರ್ಥಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ವಾರದ ಹಿಂದೆ ತರಗತಿ ಒಳಗಿನ ಗ್ರೂಪಲ್ಲಿ ಶೇರ್ ಮಾಡಿದ್ದಾನೆ. ಈ ಬಗ್ಗೆ ತರಗತಿಯ ಉಪನ್ಯಾಸಕರು ಗಮನಿಸಿ, ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಯಾರೆಲ್ಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರನ್ನು ಗುರುತಿಸಿ ಕಾಲೇಜಿನ ಶಿಸ್ತು ಸಮಿತಿ ಅಮಾನತು ಮಾಡಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಮಂಗಳೂರು ಪೊಲೀಸರು ವಿಡಿಯೋದಲ್ಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ. ಅಲ್ಲದೇ ಈ ಚುಂಬನ ಸ್ಪರ್ಧೆಯ ವೇಳೆ ವಿದ್ಯಾರ್ಥಿಗಳು ಮಾದಕವಸ್ತು ಸೇವಿಸಿರುವ ಬಗ್ಗೆಯೂ ಪೊಲೀಸರ ತನಿಖೆ ನಡೆಸಲಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಕೇವಲ ಕಿಸ್ಸಿಂಗ್ ಅಲ್ಲದೇ ವಿದ್ಯಾರ್ಥಿಗಳ ಕಾಮಪುರಾಣ ಬಯಲಾಗಿದ್ದು, ಕಾಲೇಜು ಬಿಟ್ಟು ಕಿಸ್ಸಿಂಗ್ ಸ್ಪರ್ಧೆ ನಂತರ ದೈಹಿಕ ಸಂಪರ್ಕಕ್ಕೂ ಒಳಗಾಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಗಳ ಮೇಲೆ ಪೋಕ್ಸೋ ಕೇಸ್ ಸಾಧ್ಯತೆಯಿದ್ದು, ಲೈಂಗಿಕತೆಯಲ್ಲಿ ತೊಡಗಿದ ವಿದ್ಯಾರ್ಥಿಗಳ ಬಂಧನ ಸಾಧ್ಯತೆ ಎನ್ನಲಾಗುತ್ತಿದೆ.
ಯೂನಿಫಾರ್ಮ್ನಲ್ಲಿಯೇ ವಿದ್ಯಾರ್ಥಿಗಳ ಕಿಸ್ಸಿಂಗ್: ವಿಡಿಯೋದಲ್ಲಿ ಕಾಣಿಸುವ ವಿದ್ಯಾರ್ಥಿನಿ ಯೂನಿಫಾರ್ಮ್ ಧರಿಸಿದ್ದು, ಹೀಗಾಗಿ ಪೊಲೀಸರಿಗೆ ವಿದ್ಯಾರ್ಥಿಗಳು ಯಾವ ಕಾಲಜಿನವರು ಎಂಬ ಮಾಹಿತಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳು ವಯಸ್ಕರೇ ಅಥವಾ 18 ವರ್ಷಕ್ಕಿಂತ ಕೆಳಗಿನವರೇ ಎಂಬ ಮಾಹಿತಿ ಸಹ ಖಚಿತವಾಗಿ ದೊರೆತಿಲ್ಲ ಎನ್ನಲಾಗುತ್ತಿದೆ. ಈ ವಿಡಿಯೋ ಕುರಿತು ಮಂಗಳೂರು ಪೊಲೀಸರು ಮಾಹಿತಿ ಸಂಗ್ರಹಿಸಿದ್ದು, ಸದ್ಯ ತನಿಖೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post