ಮಂಗಳೂರು : ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ವಿರುದ್ಧ ಹೋರಾಟದ ಫೋಟೋವನ್ನು ಟ್ರೋಲ್ ಮಾಡಲಾಗುತ್ತಿದೆ. ಇದಕ್ಕೆ ಹೆದರಿ ಟೋಲ್ ಗೇಟ್ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಟೋಲ್ ಗೇಟ್ ವಿರುದ್ಧ ಹೋರಾಟ ಮಾಡಿದ ಫೋಟೋ ಹಾಕಿ ನನ್ನನ್ನು ಕಾಂತಾರ 2, ನಾಗವಲ್ಲಿ ಎಂದು ಟ್ರೋಲ್ ಮಾಡಲಾಗುತ್ತಿದೆ. ದುರ್ಜನರಿಗೆ ನಾನು ಕಾಂತಾರ 3 ಕೂಡ ಆಗುತ್ತೇನೆ, ನಾಗವಲ್ಲಿಯುೂ ಆಗುತ್ತೇನೆ ಎಂದರು.
ಕೆ ಆರ್ ಶೆಟ್ಟಿ ಅಡ್ಯಾರ್ ಪದವು ಎಂಬಾತ ನನ್ನ ಫೋಟೋ ಹಾಕಿ ಇದಕ್ಕೊಂದು ಟೈಟಲ್ ಕೊಡಿ ಪ್ರೆಂಡ್ಸ್ ಎಂದು ಹಾಕಿದ್ದರು. ಇದಕ್ಕೆ ಸ್ಥಳೀಯ ವೆಬ್ ಸೈಟ್ವೊಂದರ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬಾತ ಅಸಭ್ಯವಾಗಿ ಕಮೆಂಟ್ ಮಾಡಿದ್ದಾನೆ. ಅದೇ ರೀತಿ ಇನ್ನೂ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಇವರೆಲ್ಲರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ತಿಳಿಸಿದರು.

ಟ್ರೋಲ್ ವಿಡಿಯೋ ಕಾರಣಕ್ಕೆ ನನಗೇನು ಅಸಹ್ಯ ಆಗಿಲ್ಲ. ಲಂಚದ ಅಥವಾ ಮಂಚದ ವಿಡಿಯೋ ಅಲ್ಲ. ಹಾಲಪ್ಪ, ರೇಣುಕಾಚಾರ್ಯ, ಜಾರಕಿಹೊಳಿಯವರು ಮಂಚದ ವಿಡಿಯೋದಲ್ಲಿದ್ದು, ನಾಚಿಕೆ ಇಲ್ಲದೆ ಚುನಾವಣೆ ಎದುರಿಸುತ್ತಿದ್ದಾರೆ. ಅಂಥವಳು ನಾನೇನು ಅಲ್ಲ. ಸುರತ್ಕಲ್ ಟೋಲ್ ಗೇಟ್ನದ್ದು ಕಾಂತಾರ 2 ಆಗಿರಬಹುದು. ಹಿಂದೊಮ್ಮೆ ಹೆಣ್ಮಕ್ಕಳ ಮೇಲೆ ಕಿರುಕುಳ ಕೊಟ್ಟವನಿಗೆ ಹೊಡೆದಿದ್ದೆ ಅದು ಕಾಂತಾರ-3, ಸುರತ್ಕಲ್ ನಲ್ಲಿ ಅರ್ಧಕ್ಕೆ ಎದ್ದು ನಿಂತ ಬಿಲ್ಡಿಂಗ್ ಇದೆ, ಅದನ್ನು ಹಾಗೆಯೇ ಬಿಟ್ಟು ಬಿಟ್ಟಿದ್ದಾರೆ. ಅದರ ವಿಡಿಯೋ ಬರಲಿದೆ, ಅದು ಕಾಂತಾರ -4. ಎಂಆರ್ ಪಿಎಲ್ ನಲ್ಲಿ ಕೆಲಸ ಕೊಡದೆ ವಂಚಿಸುತ್ತಿದ್ದಾರಲ್ಲಾ ಇವರು, ಅದು ಕಾಂತಾರ-5. ಸಿನಿಮಾದ ನಾಗವಲ್ಲಿ ಅಂತ ಹೇಳ್ತಾರಲ್ಲಾ, ನಾನು ರಿಯಲ್ ನಾಗವಲ್ಲಿ. ಸಿನಿಮಾದ ನಾಗವಲ್ಲಿ ಅಲ್ಲ. ಇವರ ಟ್ರೋಲ್ ಗೆಲ್ಲ ಕ್ಯಾರ್ ಮಾಡೋದಿಲ್ಲ. ರಾತ್ರಿ ನನ್ನ ಮನೆಗೆ ಪೊಲೀಸರು ಹೊಕ್ಕರೂ, ತಲವಾರು ಹಿಡಿದು ಬಂದರೆಂದು ನಾನು ಹೇಳೋದಿಲ್ಲ ಎಂದು ಕಿಚಾಯಿಸಿದರು.
ಈ ಹಿಂದೆ ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದವರಿಗೆ ಅವರ ಮನೆಗೆ ರಾತ್ರಿ 12 ಗಂಟೆಗೆ ಹೋಗಿ ನಾಗವಲ್ಲಿ ತರಹ ಭೇಟಿ ಕೊಟ್ಟು ಅವರಿಂದ ಕ್ಷಮೆ ಯಾಚಿಸಿದ್ದೇನೆ. ಅದರಂತೆ ಇವರಿಗೂ ಕೂಡ ಪಾಠ ಕಲಿಸುತ್ತೇನೆ ಎಂದು ಎಚ್ಚರಿಸಿದರು.
Discover more from Coastal Times Kannada
Subscribe to get the latest posts sent to your email.







Discussion about this post