ಮಹಾರಾಷ್ಟ್ರ : ಪಾಲ್ಘರ್ ಜಿಲ್ಲೆಯಲ್ಲಿ ಮೂರೂವರೆ ವರ್ಷದ ಬಾಲಕನನ್ನು ಅಪಹರಿಸಿದ ಆರೋಪದ ಮೇಲೆ ಕಿರುತರೆ ನಟಿ ಶಬ್ರೀನ್ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ. ಪ್ರಿಯಕರನಿಗಾಗಿ ಪುಟ್ಟ ಬಾಲಕನನ್ನು ಅಪಹರಿಸಿ ಅಂದರ್ ಆದ ನಟಿ ‘ಕ್ರೈಮ್ ಪೆಟ್ರೋಲ್’ ಎಂಬ ಕ್ರೈಮ್ ಶೋನಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಶಬ್ರೀನ್ ನಿಜ ಜೀವನದಲ್ಲಿ ಅಪರಾಧ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಪಾಲ್ಘರ್ ಜಿಲ್ಲೆಯ ವಾಲಿವ್‌ನಲ್ಲಿ ತನ್ನ ಪ್ರಿಯಕರನ ಮೂರೂವರೆ ವರ್ಷದ ಸಂಬಂಧಿಯನ್ನು ಅಪಹರಿಸಿ ಅಂದರ್ ಆಗಿದ್ದಾರೆ.
ಪ್ರೀತಿಗಾಗಿ ಬಾಲಕನ ಕಿಡ್ನಾಪ್! : ನಟಿ ಶಬ್ರೀನ್ ಬಾಲಕನ ಚಿಕ್ಕಪ್ಪ ಬ್ರಿಜೇಶ್ ಸಿಂಗ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ, ಬ್ರಿಜೇಶ್ ಅವರ ಕುಟುಂಬವು ಶಬ್ರೀನ್ ಜೊತೆಗಿನ ಮದುವೆಗೆ ವಿರೋಧ ವ್ಯಕ್ತಪಡಿಸಿತ್ತು. ಅಪಹರಣ ಮಾಡಿ ಕುಟುಂಬವನ್ನು ಬ್ಲ್ಯಾಕ್‌ಮೇಲೆ ಮಾಡಲು ಹೀಗೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಬಂಧನವನ್ನು ಖಚಿತಪಡಿಸಿದ ಹಿರಿಯ ಅಧಿಕಾರಿ ಜಯರಾಜ್ ರಣವಾನೆ, ಶಬ್ರೀನ್ ಅವರು ಬ್ರಿಜೇಶ್‌ನೊಂದಿಗೆ ಪ್ರೀತಿಯಲ್ಲಿದ್ದರು ಶಬ್ರೀನ್ ಮತ್ತು ಬ್ರಿಜೇಶ್ ಹಲವಾರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದಿದ್ದಾರೆ.
ಆದರೆ ಜಾತಿ ಮತ್ತು ಧರ್ಮದ ಭಿನ್ನಾಭಿಪ್ರಾಯಗಳಿಂದಾಗಿ ಬ್ರಿಜೇಶ್ ಅವರ ಕುಟುಂಬವು ಅವರ ಪ್ರೀತಿಯನ್ನು ಒಪ್ಪಲಿಲ್ಲ ಮಾತ್ರವಲ್ಲ ಮದುವೆಗೂ ನಿರಾಕರಿಸಿತ್ತು. ಶಬ್ರೀನ್ ಎಷ್ಟೇ ಪ್ರಯತ್ನಿಸಿದ್ರೂ ಕುಟುಂಬ ಈಕೆಯನ್ನು ವಿರೋಧಿಸುತ್ತಲೇ ಇತ್ತು. ಕೊನೆಗೆ ಕಠಿಣ ಕ್ರಮಗಳ ಭಾಗವಾಗಿ ನಟಿ ಶಬ್ರೀನ್ ಕಿಡ್ನ್ಯಾಪ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಬಾಲಕ ಪ್ರಿನ್ಸ್ ಅನ್ನು ಶಬ್ರೀನ್ ಅಪಹರಿಸಿದ್ದೇಗೆ? : ಘಟನೆ ನಡೆದ ದಿನದಂದು ಶಬ್ರೀನ್ ಬೆಳಗ್ಗೆ 11 ಗಂಟೆ ಸುಮಾರಿಗೆ ಬ್ರಿಜೇಶ್ ಅವರ ಸಂಬಂಧಿ ಪ್ರಿನ್ಸ್‌ನ ಶಾಲೆಗೆ ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾಳೆ. ಮಗು ಕೂಡ ಅವಳನ್ನು ಗುರುತಿಸಿದ್ದು, ಅವಳೊಟ್ಟಿಗೆ ಹೋಗಿದೆ ಎಂದು ಮಹಾರಾಷ್ಟ್ರದ ವಾಲೀವ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನದ ವೇಳೆಗೆ ಪ್ರಿನ್ಸ್ ಮನೆಗೆ ಹಿಂತಿರುಗದಿದ್ದಾಗ, ಅವನ ಕುಟುಂಬವು ಆತಂಕದಲ್ಲಿ ಶಾಲೆಯಲ್ಲಿ ವಿಚಾರಿಸಿದೆ ಮತ್ತು ಅವನು ತನ್ನನ್ನು ವೈದ್ಯರ ಬಳಿಗೆ ಕರೆದೊಯ್ಯುತ್ತಿರುವುದಾಗಿ ಹೇಳಿಕೊಂಡು ಮಹಿಳೆಯೊಬ್ಬರು ಬಂದಿದ್ದರು, ಮಗು ಕೂಡ ಅವರನ್ನು ಗುರುತಿಸಿ ಅವರ ಜೊತೆ ಹೋಯಿತು ಎಂದು ಶಿಕ್ಷಕರು ತಿಳಿಸಿದ್ದಾರೆ. ತಕ್ಷಣ ಕುಟುಂಬದವರು ವಾಲೀವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ತಕ್ಷಣ ಕ್ರಮ ತೆಗೆದುಕೊಂಡು ವಾಲೀವ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಶಬ್ರೀನ್ ಮಗುವನ್ನು ಆಟೋ ರಿಕ್ಷಾದಲ್ಲಿ ಇನ್ನೊಬ್ಬ ಮಹಿಳೆಯೊಂದಿಗೆ ಕರೆದುಕೊಂಡು ಹೋಗುತ್ತಿರುವುದು ಕಂಡು ಕೊಂಡರು.
ಆಟೋ ಚಾಲಕನನ್ನು ವಿಚಾರಣೆಗೊಳಪಡಿಸಿದ ಪೊಲೀಸರು ಶಬ್ರೀನ್‌ನನ್ನು ನೈಗಾಂವ್‌ನಲ್ಲಿ ಡ್ರಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆಕೆಯ ಮೊಬೈಲ್ ಫೋನ್ ಸ್ಥಳವನ್ನು ಪತ್ತೆಹಚ್ಚಿ ಬಾಂದ್ರಾದಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಿನ್ಸ್‌ನನ್ನು ಆಕೆ ನೈಗಾಂವ್‌ನ ಫ್ಲಾಟ್‌ನಲ್ಲಿ ಇರಿಸಿದ್ದಾಗಿ ಹೇಳಿಕೊಂಡಿದ್ದಾಳೆ. ಪುಟ್ಟ ಬಾಲಕನನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಮಗು ಕ್ಷೇಮವಾಗಿದೆ. ಶಬ್ರೀನ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಬ್ರಿಜೇಶ್ ಭಾಗಿಯಾಗಿರುವ ಬಗ್ಗೆ ತನಿಖೆಗಳು ನಡೆಯುತ್ತಿದ್ದು, ನಟಿ ಶಬ್ರೀನ್ ಜೊತೆ ಆಟೋದಲ್ಲಿ ತೆರಳಿದ ಇನ್ನೋರ್ವ ಅಪರಿಚಿತ ಮಹಿಳಾ ಸಹಚರಿಗಾಗಿ ಹುಡುಕಾಟ ನಡೆಯುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post