ಮಂಗಳೂರು : ಜಿಲ್ಲೆಯಲ್ಲಿ ಇಂದಿನಿಂದ ಕರಾವಳಿ ಉತ್ಸವ ಆರಂಭವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದೆ. ಈ ಮೂಲಕ ಕುಡ್ಲದ ಸೌಂದರ್ಯವನ್ನು ಬಾನಂಗಳದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ನಗರದಲ್ಲಿ ಇಂದಿನಿಂದ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಇಂದಿನಿಂದ 9 ದಿನಗಳ ಕಾಲ ಇರುವ ಈ ಹೆಲಿಟೂರಿಸಂ ನಗರದ ಸೌಂದರ್ಯವನ್ನು ಬಾನಂಗಳದಿಂದ ನೋಡುವ ಅವಕಾಶವನ್ನು ಒದಗಿಸುತ್ತಿದೆ. ತುಂಬಿ ಏರ್ ಟ್ಯಾಕ್ಸ್ ಕಂಪೆನಿಯ ಸಹಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಹೆಲಿಟೂರಿಸಂ ಅನ್ನು ಆಯೋಜಿಸಿದೆ.
ಸ್ವತಃ ದ. ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಎಸ್ಪಿ ಯತೀಶ್ ಸೇರಿದಂತೆ ಅಧಿಕಾರಿಗಳು ದ. ಕ ಜಿಲ್ಲೆಯ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ಮಹಾಲಿಂಗ ನಾಯ್ಕರೊಂದಿಗೆ ಹೆಲಿಕಾಪ್ಟರ್‌ನಲ್ಲಿ ರೌಂಡ್ ಹೊಡೆದು ನಗರದ ಸೌಂದರ್ಯವನ್ನು ಮೇಲಿನಿಂದ ಕಣ್ತುಂಬಿಕೊಂಡರು.
ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಹೆಲಿಟೂರಿಸಂ ಸಕ್ಸಸ್ ಆದಲ್ಲಿ ಮುಂದಕ್ಕೆ ಇದನ್ನು ಮತ್ತಷ್ಟು ವಿಸ್ತರಿಸುವ ಚಿಂತನೆ ಇದೆ. ಕೊಲ್ಲೂರು ಸೇರಿದಂತೆ ಪ್ರವಾಸಿ ತಾಣಗಳಾದ ಬೇಲೂರು -ಹಳೇಬೀಡು, ಬೇಕಲ್ ಫೋರ್ಟ್‌ಗಳಲ್ಲಿ ಹೆಲಿಟೂರಿಸಂ ಅಳವಡಿಸುವ ಬಗ್ಗೆ ಪ್ರಸ್ತಾಪಗಳಿದ್ದು ಪ್ರವಾಸಿಗರ ಆಸಕ್ತಿ ಅಳವಡಿಸಬಹುದಾಗಿದೆ ಎಂದರು.
ಈ ಬಗ್ಗೆ ಮಾತನಾಡಿದ ತುಂಬಿ ಏರ್ ಟ್ಯಾಕ್ಸ್ನ ಪ್ರತಿನಿಧಿ ಸುಹೈಲ್ ಅವರು, ‘ಇವತ್ತಿನಿಂದ ಹೊಸ ವರ್ಷದವರೆಗೆ ಹೆಲಿ ಟೂರಿಸಂ ಇರಲಿದೆ. 6 ರಿಂದ 7 ನಿಮಿಷದ ರೈಡ್ಗೆ ರೂ. 4500 ದರ ನಿಗದಿಪಡಿಸಲಾಗಿದೆ’ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.
Discussion about this post