ಉಳ್ಳಾಲ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ಸ್ ಟೇಬಲ್ ಆಗಿದ್ದ ವಾಸುದೇವ ಚೌಹಾಣ್ ಅವರನ್ನು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅಮಾನತು ಮಾಡಿದ್ದಾರೆ.
ಇತ್ತೀಚೆಗೆ ತಲಪಾಡಿ ಗಡಿಭಾಗದಲ್ಲಿ ಜೂಜಾಟ ನಡೆಸುತ್ತಿದ್ದ ತಂಡವನ್ನು ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ ಈ ಬಗ್ಗೆ ಉಳ್ಳಾಲ ಎಸ್ ಬಿ ಆಗಿದ್ದ ವಾಸುದೇವ್ ಗೆ ಮಾಹಿತಿಗಳಿದ್ದವು. ಅಲ್ಲದೆ, ಆರೋಪಿಗಳ ಜೊತೆ ವಾಸುದೇವ ಶಾಮೀಲಾಗಿದ್ದ ಎನ್ನುವ ಆರೋಪಗಳಿದ್ದವು. ಈ ಬಗ್ಗೆ ಖಚಿತ ಮಾಹಿತಿಗಳನ್ನು ಹೊಂದಿದ್ದ ಎಸಿಪಿ ಧನ್ಯಾ ನಾಯಕ್ ತಲಪಾಡಿ ಗಡಿಭಾಗದ ತಚ್ಚಣಿ ಎಂಬಲ್ಲಿಗೆ ದಾಳಿ ನಡೆಸಿದ್ದರು.
ದಾಳಿ ವೇಳೆ, ಪ್ರಮುಖ ಆರೋಪಿಯಾಗಿದ್ದ ತಲಪಾಡಿ ಗ್ರಾಪಂ ಸದಸ್ಯ ಪರಾರಿಯಾಗಿದ್ದ. ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ವೇಳೆ, ಕಾನ್ಸ್ ಟೇಬಲ್ ವಾಸುದೇವ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಮತ್ತು ಅವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಎಸಿಪಿ ನೇರವಾಗಿ ಪೊಲೀಸ್ ಕಮಿಷನರಿಗೆ ವರದಿ ಕೊಟ್ಟಿದ್ದರು. ಇಲಾಖಾ ತನಿಖೆ ಬಾಕಿಯಿರಿಸಿ ಪೊಲೀಸ್ ಕಮಿಷನರ್ ವಾಸುದೇವ ಅವರನ್ನು ಅಮಾನತು ಮಾಡಿದ್ದಾರೆ. ಪ್ರತಿ ಠಾಣೆಯ ವ್ಯಾಪ್ತಿಯಲ್ಲೂ ದಿನವಹಿ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಠಾಣಾಧಿಕಾರಿಗಳಿಗೆ ವರದಿ ಕೊಡಲು ಒಬ್ಬರು ಅಥವಾ ಇಬ್ಬರು ಸಿಬಂದಿ ಇರುತ್ತಾರೆ. ಠಾಣೆಯ ವ್ಯಾಪ್ತಿಯಲ್ಲಿ ಏನೇ ಕಿತಾಪತಿ ಆದರೂ, ಎಡವಟ್ಟು ನಡೆದರೂ ಅದಕ್ಕೆ ಅದೇ ಸಿಬಂದಿಯನ್ನು ಹೊಣೆ ಮಾಡಲಾಗುತ್ತದೆ.
Discover more from Coastal Times Kannada
Subscribe to get the latest posts sent to your email.
Discussion about this post