ಸುರತ್ಕಲ್ : ಮೂರು ವರ್ಷದ ಹಿಂದೆ ಪಿಕಪ್ ಡ್ರೈವರ್ ಆಗಿದ್ದ ವಹಾಬ್ ಕುಲಾಯಿ ನ್ಯೂ ಶೈನ್ ಎಂಟರ್ ಪ್ರೈಸಸ್ ನ ಮಾಲಕರಾದ ನಾಸಿರ್ ಮತ್ತು ಖುರೇಷಿ ಎಂಬವ ಎರಡು ವರ್ಷದ ಹಿಂದೆ ಆಬ್ದುಲ್ ವಹಾಬ್ ಕುಳಾಯಿ ಜೊತೆ ವಫಾ ಸಂಸ್ಥೆಯಲ್ಲಿ ಪಾಲುದಾರಗಿದ್ದರು, ಈ ಮೂವರ ಮಧ್ಯೆ ವ್ಯಾವಹಾರದಲ್ಲಿ ಭಿನ್ನಾಭಿಪ್ರಾಯ ಬಂದ ಕಾರಣ ಇಬ್ಬರು ಪ್ರತ್ಯಕವಾದರು ನಂತರ ವಹಾಬ್ ವಫಾವನ್ನು ಮುಂದುವರಿಸಿದ ನಂತರ ನಾಸಿರ್ ಮತ್ತು ಖುರೇಷಿ ನ್ಯೂ ಶೈನ್ ಆರಂಭಿಸಿದರು, ವಹಾಬ್ ಸಿಸನ್ -5ರಲ್ಲಿ 8,000 ಮಂದಿ ಲಕ್ಕಿ ಸ್ಕೀಮ್ ಗೆ ಸೇರಿದ್ದರು ಅದರಲ್ಲಿ ಬಂಪರ್ ಬಹುಮಾನ 4 ಬೆಡ್ ರೋಮಿನ 4 ಮನೆ, ಸಿಸನ್ -6ರಲ್ಲಿ 7,000 ಮಂದಿ ಸೇರಿದ್ದರು ಇದರಲ್ಲಿ ಬಂಪರ್ ಬಹುಮಾನ 2 ಬೆಡ್ ರೂಮಿನ 11ಮನೆ, ಹಾಗೂ ಸೀಸನ್- 7 ಇದರಲ್ಲಿ 6,000 ಮಂದಿ ಸೇರಿದ್ದು ಇದರಲ್ಲಿ ಬಂಪರ್ ಬಹುಮಾನ 2 ಬೆಡ್ ರೂಮಿನ 2 ಮನೆ ಘೋಷಿಸಿದ್ದ, ಡ್ರಾದಲ್ಲಿ ಮನೆಯ ಬಹುಮಾನ ವಿಜೇತರನ್ನು ಕರೆಸಿ ಅವರ ಕೈಗೆ ಪ್ಲಾಸ್ಟಿಕ್ ಕೀ ಕೊಟ್ಟು ವೀಡಿಯೋ ಮಾಡಿ ಅವರಿಗೆ ಕೇಕ್ ತಿನ್ನಿಸಿ 6ತಿಂಗಳ ಆಗ್ರಿಮೆಂಟ್ ಮಾಡಿ ಕಳುಹಿಸುತ್ತಾರೆ, ಸೀಸನ್ 5ರ ಬಾಕಿ ಉಳಿದ ಸರಿ ಸುಮಾರು 7,000 ಜನರಿಗೆ ಕೊನೆಯಲ್ಲಿ ಕೊಡಬೇಕಾದ 20ಸಾವಿರ ಮೌಲ್ಯದ ಬಂಗಾರ ಡ್ರಾ ಮುಗಿದು 2 ತಿಂಗಳಾದರೂ ಇನ್ನೂ ಗ್ರಾಹಕರ ಕೈ ಸೇರಿಲ್ಲ.
ಜನರ ಹಣದಲ್ಲಿ ಕಾಟಿಪಳ್ಳದಲ್ಲಿ ಸುಮಾರು 2 ಕೋಟಿ ಬೆಲೆ ಬಾಳುವ ಮನೆ ನಿರ್ಮಾಣವಾಗುತ್ತಿದ್ದು, ಆತನಲ್ಲಿ 45 ಲಕ್ಷ ಬೆಲೆಬಾಳುವ ಎರಡು ಕಾರುಗಳಿವೆ, ಕೃಷ್ಣಾಪುರದಲ್ಲಿ ವಫಾ ಗೋಲ್ಡ್ & ಡೈಮಂಡ್ ಮಳಿಗೆ ಆಗಸ್ಟ್ 15 ರಂದು ತೆರೆದಿರುತ್ತಾನೆ ಆಗಸ್ಟ್ 16 ನಂತರ ಬಂದ್ ಆಗಿದೆ, ಸ್ಕಿಂ ನಿಂದ ಬಂದ ಹಣದಲ್ಲಿ ಕುಂಜತ್ತೂರಿನಲ್ಲಿ ಫರ್ನಿಚರ್ ಫ್ಯಾಕ್ಟರಿ , ಬಜಪೆಯಲ್ಲಿ ಫರ್ನಿಚರ್ ಶೋ ರೋಮ್, ಕಾಪು ಉಚ್ಚಿಲದಲ್ಲಿ ಫರ್ನಿಚರ್ ಶೋ ರೋಮ್, , ಮೂಡಬಿದ್ರೆಯಲ್ಲಿ ಬ್ರಾಂಚ್, ಅಡ್ಡೂರ್ ಅಲ್ಲಿ ಬ್ರಾಂಚ್, ಜೋ ಕಟ್ಟೆ ಬ್ರಾಂಚ್, ಪೈವಳಿಕೆ (ಕೇರಳ) ಬ್ರಾಂಚ್ ಇದೆಲ್ಲದಕ್ಕೂ ಜನರ ಹಣವನ್ನು ವಿನಿಯೋಗಿಸಲಾಗಿದೆ.
ಸೀಸನ್ ಒಂದರಿಂದ ಶುರುಮಾಡಿ ಸೀಸನ್ 5 ರವರೆಗೆ ಗ್ರಾಹಕರಿ ಸರಿಯಾಗಿ ಬಹುಮಾನ ಪಾವತಿರಿಸಬಹುದು ಇಲ್ಲದೆ ಇರಬಹುದು, ಸೀಸನ್ 5ರ ಹಣವನ್ನು ಸ್ಕಿಂ ಮುಗಿದರು ಗ್ರಾಹಕರಿಗೆ ತಲುಪಬೇಕಾದ ವಸ್ತುಗಳು ತಲುಪಲಿಲ್ಲ. ಸೀಸನ್- 6 ಮತ್ತು 7ನೇ ಡ್ರಾವನ್ನು ಬಜಪೆಯಿಂದ ಕೇರಳದ ಪೈವಳಿಕೆಗೆ ಸ್ಥಳಾಂತರಿಸಿರುತ್ತಾರೆ. ಸೀಸನ್- 5ರ ವಿಜೇತರಿಗೆ ಬಹುಮಾನ ಕೊಡಲು ಹಣ ಹೊಂದಿಸಲಾಗದೆ ವಿದೇಶಕ್ಕೆ ಪರಾರಿಯಾದ ವಹಾಬ್ ಕುಳಾಯಿ ವಿದೇಶದಲ್ಲಿ ಕುಳಿತು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಮಾಡಿ ಗ್ರಾಹಕರಿಗೆ ಮಂಕುಬೂದಿ ಎರಚುತ್ತಿದ್ದಾನೆ.
Discover more from Coastal Times Kannada
Subscribe to get the latest posts sent to your email.
Discussion about this post