ಮಂಗಳೂರು: ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ನಗರದ ಮಾಝ್ ಮುನೀರ್ ಅಹಮದ್ ಅವರ ತಂದೆ ಮುನೀರ್ ಅಹಮದ್ (54) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಆರ್ಯ ಸಮಾಜ ರಸ್ತೆ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರಲ್ಲಿ ವಾಸವಿದ್ದ ಮುನೀರ್ ಮಗನ ಬಂಧನವಾದ ಬಳಿಕ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿ ಕುಸಿದುಬಿದ್ದಿದ್ದರು. ಅವರನ್ನು ತಕ್ಷಣವೇ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಮಾಝ್ ಸೆ.14ರಿಂದ ಕಾಣೆಯಾಗಿದ್ದಾನೆ ಎಂದು ಮುನೀರ್ ಅವರು ಅಂಚೆ ಮೂಲಕ ನಗರದ ಕದ್ರಿ ಪೊಲೀಸ್ ಠಾಣೆಗೆ ಸೋಮವಾರ ದೂರು ನೀಡಿದ್ದರು. ಮಾಝ್‌ನನ್ನು ಶಿವಮೊಗ್ಗ ಜಿಲ್ಲೆಯ ಪೊಲೀಸರು ಮಂಗಳವಾರ ಬಂಧಿಸಿದ್ದರು. ಇದೀಗ ಮೃತಪಟ್ಟ ಮಾಝ್ ತಂದೆ ಮಗ ನಾಪತ್ತೆಯಾಗಿದ್ದಾನೆ ಎಂದು ಪುತ್ರ ಬಂಧನ ವಿಚಾರ ತಿಳಿದಿದ್ದರೂ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ ಕಾರಣಕ್ಕೆ ಹೈಕೋರ್ಟ್ 10,000 ರೂಪಾಯಿ ದಂಡ ಹಾಕಿದ ಘಟನೆ ನಿನ್ನೆಯಷ್ಟೆ ನಡೆದಿತ್ತು. ಆರೋಪಿ ಮಾಝ್ ನಗರ ಬಂದರಿನಲ್ಲಿ ಹಾಗೂ ಕೋರ್ಟ್ ರಸ್ತೆಯ ಬಳಿ ‘ಲಷ್ಕರ್ ಎ ತಯ್ಯಬಾ ಹಾಗೂ ತಾಲಿಬಾನ್ ಪರ ಗೋಡೆಬರಹ ಬರೆದ ಪ್ರಕರಣದಲ್ಲಿ 2020ರ ನವೆಂಬರ್ 27ರಂದು ಬಂಧಿತನಾಗಿದ್ದ. ಆತನಿಗೆ 2021ರ ಸೆ. 8ರಂದು ಜಾಮೀನು ಸಿಕ್ಕಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post