ಮಂಗಳೂರು, ಸೆಪ್ಟೆಂಬರ್ 22: ವಿದೇಶದಲ್ಲಿ ಉದ್ಯೋಗ ಮಾಡಬೇಕೆನ್ನುವುದು ಹಲವು ಜನರ ಕನಸಾಗಿರುತ್ತದೆ. ಆದರೆ ವಿದೇಶದ ಉದ್ಯೋಗದ ಮಾಹಿತಿ, ಅರ್ಜಿ ಸಲ್ಲಿಸಬೇಕಾದ ವಿಧಾನ ತಿಳಿಯದೇ ಹಲವು ಜನರು ತಮ್ಮ ಕನಸನ್ನು ನನಸು ಮಾಡಲಾಗದೇ ಹಾಗೆಯೇ ಹಿಂದೆ ಉಳಿದುಬಿಡುತ್ತಾರೆ. ಆದರೆ ಈ ಬಾರಿ ವಿದೇಶದಲ್ಲಿ ಉದ್ಯೋಗ ಮಾಡಬೇಕು ಎನ್ನುವರರಿಗೆ ಕರ್ನಾಟಕ ಕೌಶಲ್ಯಾಭಿವೃಧ್ಧಿ ನಿಗಮ ಉತ್ತಮ ಅವಕಾಶವನ್ನು ನೀಡಿದೆ. ದುಬೈ, ಯುಕೆ, ಜಪಾನ್, ರೊಮೇನಿಯ ದೇಶಗಳಲ್ಲಿ ಉದ್ಯೋಗಾವಕಾಶದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅದರಲ್ಲೂ ನರ್ಸಿಂಗ್ ವಿಧ್ಯಾಭ್ಯಾಸ ಪೂರ್ಣಗೊಳಿಸಿದವರಿಗೆ ಅವಕಾಶ ಹುಡುಕಿಕೊಂಡು ಬಂದಿದ್ದು, ಕೈತುಂಬಾ ಸಂಬಳದ ಉದ್ಯೋಗದ ಮಾಹಿತಿಯನ್ನು ನೀಡಿದೆ. ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ (ಕೆಎಸ್‍ಡಿಸಿ) ಉದಯೋನ್ಮುಖ ಯೋಜನೆಯಾದ ಅಂತರಾಷ್ಟ್ರೀಯ ವಲಸೆ ಕೇಂದ್ರ-ಕರ್ನಾಟಕದ ಮುಖಾಂತರ ವಿದೇಶಗಳಲ್ಲಿ ಉದ್ಯೋಗಾವಕಾಶಳು ಇದ್ದು, ಆಸಕ್ತರು ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.
ದುಬೈ: ಟೈಲ್ಸ್ ಮೇಸನ್ಸ್ , ಬ್ಲಾಕ್ ಮೇಸನ್ಸ್, ಹಾಗೂ ಮಾರ್ಬಲ್ ಮೇಸನ್ಸ್ 100 ಖಾಲಿ ಹುದ್ದೆಗಳಿಗೆ 18 ರಿಂದ 32 ವರ್ಷದೊಳಗಿನ ವಯೋಮಿತಿ ಉಳ್ಳವರು ಅಥವಾ 2 ವರ್ಷಕ್ಕಿಂತ ಹೆಚ್ಚು ಅನುಭವವುಳ್ಳ ಕಾರ್ಮಿಕರು ಬೇಕಾಗಿದ್ದಾರೆ.
ಯು.ಕೆ: ಐ.ಇ.ಎಲ್.ಟಿ.ಎಸ್-ಬ್ಯಾಂಡ್ 7 ಅಥವಾ ಒ.ಇ.ಟಿ ಗ್ರೇಡ್ ಬಿಯೊಂದಿಗೆ ಬಿ.ಎಸ್ಸಿ ನರ್ಸಿಂಗ್, ಜಿ.ಎನ್.ಎಂ, ಪಿ.ಬಿ.ಬಿ.ಎಸ್ಸಿ ನರ್ಸಿಂಗ್ ಪದವಿ ಪಡೆದಿರುವ 6 ತಿಂಗಳಿಗಿಂತ ಹೆಚ್ಚು ಅನುಭವವುಳ್ಳ 50 ವರ್ಷದೊಳಗಿನ ಅಭ್ಯರ್ಥಿಗಳಿಗೆ ನರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ತಿಂಗಳಿಗೆ 2 ಲಕ್ಷ ರೂಪಾಯಿ ವೇತನ ಹಾಗೂ ಮೊದಲ 3 ತಿಂಗಳವರೆಗೆ ಉಚಿತ ವಸತಿ ನೀಡಲಾಗುತ್ತದೆ.
ಜಪಾನ್: ಎಸ್‌ಎಸ್ಎಲ್‌ಸಿ, ಐ.ಟಿ.ಐ, ಡಿಪ್ಲೋಮಾ, ಬಿ.ಎಸ್ಸಿ, ಎಂ.ಎಸ್ಸಿ ನರ್ಸಿಂಗ್, ಯಾವುದೇ ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅವಿಯೇಶನ್, ಎಲೆಕ್ಟ್ರಿಕ್, ಕೃಷಿ, ನರ್ಸಿಂಗ್ ಕೇರ್, ಎಲೆಕ್ಟ್ರಾನಿಕ್ಸ್ ಮತ್ತು ಇನ್‍ಫಾರ್ಮೇಶನ್, ಶಿಪ್ ಬಿಲ್ಡಿಂಗ್ ಮತ್ತು ಶಿಪ್ ಮೆಷಿನರಿ ಇಂಡಸ್ಟ್ರಿ, ಇಂಡಸ್ಟ್ರಿಯಲ್ ಮೆಷಿನರಿ, ಮೆಷಿನ್ ಪಾಟ್ರ್ಸ್, ಟೂಲಿಂಗ್ ಇಂಡಸ್ಟ್ರಿ ವಲಯಗಳಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ.
ರೊಮೇನಿಯ: ಎಲೆಕ್ಟ್ರಿಷಿಯನ್ ಅಸೆಂಬ್ಲರ್, ಲಾಕ್ಸ್‌ಮಿತ್ಸ್ ಇನ್‍ಸ್ಟಾಲರ್ಸ್, ಎಲೆಕ್ಟ್ರಿಕ್ ಎ.ಆರ್.ಸಿ ವೆಲ್ಡರ್, ಮ್ಯಾನ್ಯುಯಲ್ ವೆಲ್ಡರ್ ವಿತ್‍ಗ್ಯಾಸ್ ಫ್ಲೇಮ್, ಕಾಪೆರೆಂಟರಿ ಫಾರ್ ಕಟ್ಟಿಂಗ್ ಎಂಡ್ ಸೀಜಿಂಗ್, ಮೆಕಾನಿಕಲ್ ಕಾಪೆರೆಂಟರಿ ಮಿಲ್ಲಿಂಗ್ ಎಂಡ್ ಡ್ರಿಲ್ಲಿಂಗ್, ಯೂನಿವರ್ಸಲ್ ಲೇತ್ ಮಷಿನ್ ಆಪರೇಟರ್, ಓವರ್‌ಹೆಡ್ ಕ್ರೇನ್ ಆಪರೇಟರ್, ಪ್ಲಂಬರ್ (ಸ್ಯಾನಿಟರಿ ವೇರ್/ಗ್ಯಾಸ್ ಲೈನ್), ಕಾಪೆರೆಂಟರ್ ಮಿಲ್ಲಿಂಗ್ ಮಷಿನ್, ಕಾಪೆರೆಂಟರ್ ಜನರಲ್ (ಟ್ರೇನ್‍ಕ್ಯಾರೇಜಸ್), ಪ್ಲಂಬರ್ (ಪೈಪ್‍ಲೈನ್), ರೆಫ್ರಿಜರೇಶನ್ ಇನ್‍ಸ್ಟಾಲರ್, ವೆಲ್ಡರ್ ಎ.ಆರ್.ಸಿ, ಲೇತ್ ಮೆಷಿನ್ ಆಪರೇಟರ್, ಯೂನಿವರ್ಸಲ್ ಮಿಲ್ಲಿಂಗ್ ಮಷಿನ್ ಆಪರೇಟರ್, ಮೆಕಾನಿಕಲ್ ಡಿಸೈನ್ ಇಂಜಿನಿಯರ್ ಮುಂತಾದ ಹುದ್ದೆಗಳಿಗೆ ಪದವಿಗೆ ಅನುಸಾರವಾಗಿ ಉದ್ಯೋಗಾವಕಶಗಳಿವೆ. ಆಸಕ್ತರು ಮಂಗಳೂರು ನಗರದ ಉರ್ವ ಮಾರುಕಟ್ಟೆ ಕಟ್ಟಡದ 2ನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃಧ್ಧಿ ಕಚೇರಿ ಅಥವಾ ಮೊಬೈಲ್ ಸಂಖ್ಯೆ; 9110248485 ಮೂಲಕ ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post