ಬೆಂಗಳೂರು, ಮೇ.24: ಸುಬ್ರಹ್ಮಣ್ಯಪುರದಲ್ಲಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದ ಯುವತಿ ಪ್ರಭುಧ್ಯಾ ಮೃತದೇಹ ಕತ್ತು ಕುಯ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿಂದೆ ಪ್ರಭುದ್ಯಾ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಮೃತದೇಹದ ಬಳಿ ಡೆತ್ ನೋಟ್ ಸಿಕ್ಕಿದ ಕಾರಣ ಎಲ್ಲರೂ ಆತ್ಮಹತ್ಯೆಯೆಂದೇ ಭಾವಿಸಿದ್ದರು. ಆದರೆ ಅದು ಆತ್ಮಹತ್ಯೆ ಅಲ್ಲ, ಕೊಲೆ ಅನ್ನೋದು ಸಾಬೀತಾಗಿದೆ..
ವಿದ್ಯಾರ್ಥಿನಿ ಪ್ರಬುದ್ಧ ಕೊಲೆಗೆ ಕಾರಣವಾಗಿದ್ದು ಎರಡು ಸಾವಿರ ರೂಪಾಯಿಗೆ ಶುರುವಾದ ಜಗಳ ಎನ್ನಲಾಗಿದೆ. ಪ್ರಬುದ್ಧ ಹಾಗೂ ಅಪ್ರಾಪ್ತನ ಮಧ್ಯೆ 2 ಸಾವಿರ ರೂಪಾಯಿಗೆ ಸಂಬಂಧಿಸಿದಂತೆ ನಡೆದ ಕಿರಿಕ್ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಜಗಲಾಸರ್ ಅವರು ಪ್ರಬುದ್ಧ ಕೊಲೆ ಪ್ರಕರಣದ ಬಗ್ಗೆ ಈ ಮಾಹಿತಿ ನೀಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಮೇ 15 ರಂದು 20 ವರ್ಷದ ಯುವತಿ ಕೊಲೆಯಾಗಿತ್ತು. ಕೊಲೆ ಮಾಡಿದ ಅಪ್ರಾಪ್ತ ಬೇರೆ ಯಾರೂ ಅಲ್ಲ. ಪ್ರಬುದ್ಧಳ ತಮ್ಮನ ಸ್ನೇಹಿತ. ಈತ ಆಗಾಗ ಮನೆಗೆ ಬರುತ್ತಿದ್ದ. ಅಪ್ರಾಪ್ತ ತನ್ನ ಸ್ನೇಹಿತರ ಜೊತೆ ಆಟವಾಡುವಾಗ ಕನ್ನಡಕ ಒಂದನ್ನ ಮುರಿದಿದ್ದ. ಆ ಸ್ನೇಹಿತ ಕನ್ನಡಕವನ್ನು ರಿಪೇರಿ ಮಾಡಿಸು ಎಂದು ಪಟ್ಟು ಹಿಡಿದಿದ್ದ.
ಪ್ರಬುದ್ಧ ಮನೆಗೆ ಬಂದಿದ್ದ ಅಪ್ರಾಪ್ತನು ಪ್ರಬುದ್ಧ ಪರ್ಸ್‌ನಲ್ಲಿದ್ದ ಎರಡು ಸಾವಿರ ರೂಪಾಯಿ ಕದ್ದಿದ್ದ. ಹಣವನ್ನು ಕದಿಯುವಾಗ ಯುವತಿ ನೋಡಿದ್ದು ಪ್ರಶ್ನೆ ಮಾಡಿದ್ದಳು. ಎರಡು ದಿನ ಬಿಟ್ಟು ಹಣವನ್ನು ಯುವತಿ ಅಪ್ರಾಪ್ತನ ಬಳಿ ಕೇಳುತ್ತಾಳೆ. ಅದಕ್ಕೆ ಮನೆಗೆ ಪೋಷಕರ ಬಳಿ ಹೇಳದಂತೆ ಯುವತಿಗೆ ಮನವಿ ಮಾಡಿದ್ದ. ಈ ವೇಳೆ ಕ್ಷಮಿಸಿಬಿಡು ಅಂತ ಅಪ್ರಾಪ್ತ ಕಾಲು ಹಿಡಿದುಕೊಂಡು ಬೇಡಿಕೊಂಡಿದ್ದ. ಕಾಲು ಹಿಡಿದಾಗ ಪ್ರಬುದ್ಧ ಆಯ ತಪ್ಪಿ ಬಿದ್ದಿದ್ದಾಳೆ. ಆಗ ಪ್ರಬುದ್ಧ ತಲೆಗೆ ಪೆಟ್ಟು ಬಿದ್ದು ಮೂರ್ಛೆ ಹೋಗಿದ್ದಾಳೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ಪ್ರಬುದ್ಧಳದ್ದು ಆತ್ಮಹತ್ಯೆ ಎಂದು ಬಿಂಬಿಸಲು ಅಪ್ರಾಪ್ತ ಕೈ ಕುಯ್ದಿದ್ದಾನೆ. ಇದ್ರಿಂದ ರಕ್ತಸ್ರಾವ ಆಗಿ ಪ್ರಬುದ್ಧ ಸಾವನ್ನಪ್ಪಿದ್ದಾಳೆ.
2 ಸಾವಿರ ರೂಪಾಯಿ ಕದ್ದ ವಿಷಯವನ್ನು ಪೋಷಕರಿಗೆ ಹೇಳುತ್ತಾಳೆ ಅಂತ ಅಪ್ರಾಪ್ತ ಆಕೆಯ ಮನೆಯಲ್ಲಿ ಚಾಕುವಿನಿಂದ ಕೊಲೆ ಮಾಡಿದ್ದಾನೆ. ಈ ಹಿಂದೆ ಪ್ರಬುದ್ಧ ಎರಡು ಮೂರು ಸಲ ಚಾಕುವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರಬುದ್ಧ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಷಯವನ್ನು ಯುವತಿ ತಮ್ಮ ಅಪ್ರಾಪ್ತನ ಬಳಿ ಹೇಳಿಕೊಂಡಿದ್ದ. ಅದು ಗೊತ್ತಿದ್ದು ಚಾಕುವಿನಿಂದ ಹಳೆಯ ಮಾರ್ಕ್ ಮೇಲೆ ಮತ್ತೇ ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದಾನೆ. ಸುಬ್ರಹ್ಮಣ್ಯಪುರ ಪೊಲೀಸ್‌ರಿಂದ ಅಪ್ರಾಪ್ತನನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.
Discover more from Coastal Times Kannada
Subscribe to get the latest posts sent to your email.
Discussion about this post