• About us
  • Contact us
  • Disclaimer
Tuesday, April 7, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಂಭ್ರಮ

Coastal Times by Coastal Times
November 24, 2022
in ಕರಾವಳಿ
ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಂಭ್ರಮ
54
VIEWS
WhatsappTelegramShare on FacebookShare on Twitter

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ 16 ಶಾಖೆಗಳನ್ನು ಹೊಂದಿದ್ದು, 31 ಮಾರ್ಚ್ 2022 ರಂದು ದಾಖಲೆಯ 1.60% ಎನ್.ಪಿ.ಎ. ಹಾಗೂ 8.27 ಕೋಟಿ ಲಾಭವನ್ನು ದಾಖಲಿಸಿದ ಕರಾವಳಿಯ ಮುಂಚೂಣಿಯ ಸಹಕಾರಿ ಲಿಮಿಟೆಡ್ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಎಂ.ಸಿ.ಸಿ. ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವವವನ್ನು ಆಚರಿಸುತ್ತಿದ್ದು, ಭಾನುವಾರ ದಿನಾಂಕ 27 ನವೆಂಬರ್ 2022 ರಂದು ನಗರದ ಮಿಲಾಗ್ರಿಸ್ ಕಾಲೇಜು ಮೈದಾನದಲ್ಲಿ ಶತಮಾನೋತ್ತರ ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿದೆ. ಸಮಾರಂಭಕ್ಕೆ ಮಂಗಳೂರು ಮತ್ತು ಉಡುಪಿ ಉಭಯ ಧರ್ಮಪ್ರಾಂತ್ಯಗಳ ಧರ್ಮಾಧ್ಯಕ್ಷರುಗಳಾದ ಅತೀ ವಂದನೀಯ ಡಾ| ಪೀಟರ್ ಪಾವ್ ಸಲ್ದಾನ್ಹಾ ಮತ್ತು ಅತೀ ವಂದನೀಯ ಡಾ| ಜೆರಾಲ್ಡ್ ಐಸಾಕ್ ಲೋಬೊ, ಸ್ಥಳೀಯ ಶಾಸಕರಾದ ಮಾನ್ಯ ವೇದವ್ಯಾಸ ಕಾಮತ್‌ ಮತ್ತು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಮಹಾದಾನಿ ಡಾ| ರೊನಾಲ್ಡ್ ಕೊಲಾಸೊ ಉಪಸ್ಥಿತರಿರುವರು. ಕಾರ್ಯಕ್ರಮ ಸಂಜೆ 5.45 ಕ್ಕೆ ಆರಂಭಗೊಂಡು, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಹಭೋಜನದೊಂದಿಗೆ ಸಮಾಪ್ತವಾಗುವುದು.

ಈ ಉತ್ಸವದ ಸಂದರ್ಭದಲ್ಲಿ ಸಮಾಜದ ಅಶಕ್ತ ವರ್ಗದವರ ಚಿಕಿತ್ಸೆಗೆ, ಉನ್ನತ ಶಿಕ್ಷಣಕ್ಕೆ, ವಸತಿ ಮತ್ತು ಹೆಣ್ಣುಮಕ್ಕಳ ಮದುವೆಯ ವೆಚ್ಚಕ್ಕೆ ಸಹಾಯಹಸ್ತ ನೀಡಲಾಗುವುದು. ಅಶಕ್ತರಿಗೆ ನೀಡುವ ದೇಣಿಗೆಯ ಕಾರ್ಯಕ್ರಮವು ಶನಿವಾರ, ನವೆಂಬರ್ 26ರಂದು ಮಧ್ಯಾಹ್ನ 3.30ಕ್ಕೆ ಬ್ಯಾಂಕಿನ ಹಂಪನ್‌ಕಟ್ಟೆಯ ಪ್ರಧಾನ ಕಛೇರಿಯ ಪಿ.ಎಫ್.ಎಕ್ಸ್ ಸಲ್ದಾನ್ಹಾ ಸ್ಮಾರಕ ಸಭಾಂಗಣದಲ್ಲಿ ಗಣ್ಯರ ಸಮಕ್ಷಮ ನಡೆಯಲಿರುವುದು.

ಶತಮಾನೋತ್ತರ ದಶಮಾನೋತ್ಸವದ ಸಂದರ್ಭದಲ್ಲಿ 7.60% ಬಡ್ಡಿದರದಲ್ಲಿ ವಿಶೇಷ ನಿರಖು ಠೇವಣಿ ಯೋಜನೆಯನ್ನು ಪರಿಚಯಿಸಿದ್ದು, ಸೀಮಿತ ಯೋಜನೆಯ ಲಾಭವನ್ನು ಗ್ರಾಹಕರು ಪಡೆದುಕೊಳ್ಳಬೇಕು. ಇತರ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳಿಗೆ ಇರುವಂತೆ ಎಂಸಿಸಿ ಬ್ಯಾಂಕಿನಲ್ಲಿ ಗ್ರಾಹಕರ ಐದು ಲಕ್ಷದವರೆಗಿನ ಠೇವಣಿಗೆ ಡೆಪೊಸಿಟ್ ಇನ್ನು ರೆನ್ಸ್ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್ (ಡಿಐಜಿಸಿ) ಇದರಿಂದ ವಿಮಾ ಸೌಲಭ್ಯವಿರುವುದರಿಂದ ಗ್ರಾಹಕರು ನಿಶ್ಚಿಂತೆಯಿಂದ ಎಂಸಿಸಿ ಬ್ಯಾಂಕಿನಲ್ಲಿ ಠೇವಣಿ ವ್ಯವಹಾರ ಮಾಡಬಹುದು. ವಿದ್ಯಾ ಭವಿಷ್ಯ ವಿದ್ಯಾರ್ಥಿ ಉಳಿತಾಯ ಖಾತೆಗೆ ಎಂಸಿಸಿ ಬ್ಯಾಂಕಿನಲ್ಲಿ 5.00% ಬಡ್ಡಿಯನ್ನು ನೀಡಲಾಗುತ್ತದೆ. ಇದರ ಜೊತೆಗೆ ಎಂಸಿಸಿ ಬ್ಯಾಂಕಿನಲ್ಲಿ ಸ್ಪರ್ಧಾತ್ಮಕ ದರದಲ್ಲಿ ಚಿನ್ನಾಭರಣ ಸಾಲ, ಶಿಕ್ಷಣ ಸಾಲ, ವಾಹನ ಸಾಲ, ಲಾಕರ್ ಸೌಲಭ್ಯಗಳು ಲಭ್ಯವಿವೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು: ಅನಿಲ್ ಲೋಬೊ ಅಧ್ಯಕ್ಷರು ನಿರ್ದೆಶಕರು, ಜೆರಾಲ್ಡ್ ಜೂಡ್ ಡಿಸಿಲ್ವ ಉಪಾಧ್ಯಕ್ಷರು, ಸುನಿಲ್‌ ಮಿನೇಜಸ್ ಮಹಾಪ್ರಬಂಧಕರು. ಆಂಡ್ರ ಡಿಸೋಜ, ಮಾರ್ಸೆಲ್ ಎಮ್. ಡಿಸೋಜ, ಜೋಸೆಫ್ ಅನಿಲ್ ಪತ್ರಾವೊ, ಹೆರಾಲ್ಡ್ ಮೊಂತೇರೊ, ಎಲ್‌ರೋಯ್ ಕೆ. ಕ್ರಾಸ್ಟ ,ಜೆ.ಪಿ. ರೊಡ್ರಿಗಸ್,  ಡೇವಿಡ್ ಡಿಸೋಜ ,ರೋಶನ್ ಡಿಸೋಜ , ಡಾ| ಜೆರಾಲ್ಡ್ ಪಿಂಟೊ ,ಐರಿನ್ ರೆಬೆಲ್ಲೊ , ಡಾ| ಫ್ರೀಡಾ ಡಿಸೋಜ, ಸಿ.ಜಿ.ಪಿಂಟೊ ,ಸುಶಾಂತ್ ಸಲ್ದಾನ್ಹಾ , ಫೆಲಿಕ್ಸ್ ಡಿಕ್ರೂಜ್ , ಆಲ್ವಿನ್ ಪಿ. ಮೊಂತೇರೊ ,ಶರ್ಮಿಳಾ ಮಿನೇಜಸ್.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಸುರತ್ಕಲ್‌ ಟೋಲ್ ಗೇಟ್ ತೆರವು: 3 ದಿನಗಳಲ್ಲಿ ಆದೇಶ ಜಿಲ್ಲಾಧಿಕಾರಿ

Next Post

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂದ್ರಮಂಡಲ ರಥೋತ್ಸವ , ಬೆಳಗಿದ ಲಕ್ಷ ದೀಪ

Related Posts

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!
ಕರಾವಳಿ

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

April 7, 2026
59
ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ
ಕರಾವಳಿ

ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ

April 7, 2026
14
Next Post
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂದ್ರಮಂಡಲ ರಥೋತ್ಸವ , ಬೆಳಗಿದ ಲಕ್ಷ ದೀಪ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂದ್ರಮಂಡಲ ರಥೋತ್ಸವ , ಬೆಳಗಿದ ಲಕ್ಷ ದೀಪ

Discussion about this post

Recent News

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

April 7, 2026
59
ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ

ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ

April 7, 2026
14
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

ಬಾವಿಗೆ ಬಿದ್ದು ಮೂರು ದಿನ ಮೃತ್ಯುವಿನೊಡನೆ ಹೋರಾಟ: ಗ್ಯಾಸ್ ಸಿಲಿಂಡರ್ ನೆಪದಲ್ಲಿ ವೃದ್ಧನಿಗೆ ಸಿಕ್ಕಿತು ಮರುಜನ್ಮ!

April 7, 2026
ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ

ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆಯ ಅಂಗವಾಗಿ ರಿಯಾಯಿತಿ ದರದಲ್ಲಿ ವಿಶೇಷ ಆರೋಗ್ಯ ಕಾರ್ಡ್‌ ಘೋಷಿಸಿದ ಇಂಡಿಯಾನಾ ಆಸ್ಪತ್ರೆ

April 7, 2026
ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ದಾಖಲೆಯ ಆರ್ಥಿಕ ವ್ಯವಹಾರ; 131.14 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್

April 5, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d