ಮಂಗಳೂರು, ಫೆ.23: ಹೂಡಿಕೆ ಮಾಡಿ ಹೆಚ್ಚಿನ ಲಾಭಗಳಿಸಬಹುದು ಎಂದು ಆಮಿಷವೊಡ್ಡಿ ಮಹಿಳೆಯೊಬ್ಬರಿಗೆ 19,06,166 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಯ ಮೊಬೈಲ್‌ಗೆ ಹೂಡಿಕೆ ಅವಕಾಶಗಳ ಜಾಹೀರಾತು ಸಂದೇಶಗಳು ಬಂದಿದ್ದು, ಹೆಚ್ಚಿನ ಲಾಭದ ಭರವಸೆ ನೀಡಲಾಗಿತ್ತು. ಅದನ್ನು ನಂಬಿದ ಮಹಿಳೆ ಸಂಬಂಧಿತ ವೆಬ್‌ಸೈಟ್ ಹುಡುಕಿದ್ದು, ಅಲ್ಲಿಂದ APK ಫೈಲ್ ಡೌನ್‌ಲೋಡ್ ಮಾಡಿದ್ದಾರೆ. ಬಳಿಕ, ತನ್ನ ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ನೋಂದಣಿ ಮಾಡಿಕೊಂಡು ಹೂಡಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಅಪ್ಲಿಕೇಶನ್‌ನಲ್ಲಿ ವಿವಿಧ ಕಂಪನಿಗಳ ವಿವರಗಳು ಹಾಗೂ ಹೆಚ್ಚಿನ ಲಾಭದ ಭರವಸೆ ತೋರಿಸಲಾಗುತ್ತಿದ್ದು, ದೊಡ್ಡ ಮೊತ್ತ ಹೂಡಿಕೆ ಮಾಡಲು ಪ್ರೇರೇಪಿಸಲಾಗಿತ್ತು.
ಅಪ್ಲಿಕೇಶನ್‌ನಲ್ಲಿ ಕನಿಷ್ಠ ರೂ.1 ಲಕ್ಷ ಹೂಡಿಕೆ ಕಡ್ಡಾಯವೆಂದು ತಿಳಿಸಲಾಗಿದ್ದು, ಗರಿಷ್ಠ ಮಿತಿಗೆ ಯಾವುದೇ ನಿರ್ಬಂಧ ಇರಲಿಲ್ಲ. ಈ ಷರತ್ತಿನಡಿ ಮಹಿಳೆ ಜನವರಿ 2024ರಿಂದ ಹಂತ ಹಂತವಾಗಿ ಒಟ್ಟು 19,06,166 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ.
ಪ್ರಾರಂಭಿಕ ಹಂತದಲ್ಲಿ ಗರಿಷ್ಠ ರೂ.1 ಲಕ್ಷದ ವರೆಗೆ ಲಾಭ ಬಂದಿದ್ದು, ಇದರಿಂದ ಹೂಡಿಕೆ ನೈಜವೆಂಬ ಭ್ರಮೆ ಮೂಡಿತ್ತು. ಇದರಿಂದ ಮಹಿಳೆ ಮತ್ತಷ್ಟು ಹಣ ಹೂಡಿಕೆ ಮಾಡುತ್ತಾ ಬಂದಿದ್ದಾರೆ. ಆದರೆ ನಂತರ ತಮ್ಮ ಬ್ಯಾಂಕ್ ಖಾತೆ ಬ್ಲಾಕ್ ಮಾಡಿರುವುದು ಗಮನಕ್ಕೆ ಬಂದಿದೆ. ಬ್ಯಾಂಕ್ ಸಂಪರ್ಕಿಸಿದಾಗ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದು, ಮಂಗಳೂರು ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post