ಕೋಲ್ಕತಾ, ಮೇ 24: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನ್ವರ್ ಹತ್ಯೆಗೂ ಮುನ್ನ ಅವರು ಹನಿಟ್ರ್ಯಾಪ್‌ಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಶಿಲಾಂತಿ ರೆಹಮಾನ್ ಎಂಬ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಲಾಗಿದೆ. ಮುಖ ಆರೋಪಿ ಅಖ್ತರುಝಾಮಾನ್ ಶಾಹಿನ್ ಅವರ ಗೆಳತಿ ಎಂದು ಬಾಂಗ್ಲಾದೇಶ ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ.
ಅಮೆರಿಕದ ಪ್ರಜೆಯಾಗಿರುವ ಅಖ್ತರುಜ್ಜಮಾನ್ ಅವರು ಅವಾಮಿ ಲೀಗ್ ಸಂಸದರ ಸ್ನೇಹಿತರಾಗಿದ್ದರು. ಕೋಲ್ಕತ್ತಾದ ನ್ಯೂ ಟೌನ್ ಪ್ರದೇಶದಲ್ಲಿ ಅಖ್ತರುಝಾಮಾನ್ ಅವರ ಬಾಡಿಗೆ ನಿವಾಸದಲ್ಲಿ ಸಂಸದರನ್ನು ಹತ್ಯೆ ಮಾಡಲಾಗಿದೆ. ಅನ್ವರುಲ್ ಹತ್ಯೆಯಾದಾಗ ಶಿಲಾಂತಿ ಕೋಲ್ಕತ್ತಾದಲ್ಲಿ ಇದ್ದಳು ಮತ್ತು ಮೇ 15 ರಂದು ಮುಖ್ಯ ಶಂಕಿತ ಕೊಲೆಗಾರ ಅಮಾನುಲ್ಲಾ ಅಮನ್ ಜೊತೆಗೆ ಢಾಕಾಗೆ ಮರಳಿದ್ದಾಳೆ.
ಅನ್ವರುಲ್ ನನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಕರೆತರಲು ಶಿಲಾಂತಿಯನ್ನು ಅಖ್ತರುಜ್ಜಮಾನ್ ಹನಿ ಟ್ರ್ಯಾಪ್ ಆಗಿ ಬಳಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಪರಾಧದ ಉದ್ದೇಶವನ್ನು ಪೊಲೀಸರು ಇನ್ನೂ ಔಪಚಾರಿಕವಾಗಿ ಘೋಷಿಸದಿದ್ದರೂ, ಹಣಕಾಸಿನ ವಿಚಾರದಲ್ಲೇ ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ.
ಮೋಹಕ್ಕೆ ಬಿದ್ದಿದ್ದ ಸಂಸದ; ಕೊಲೆಯಾದ ಸಂಸದ ಅನ್ವರುಲ್ ಅಜೀಂ ಹನಿಟ್ರ್ಯಾಪ್‌ಗೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಮೇ 13ರಂದು ಬಾಂಗ್ಲಾದೇಶದ ಶಿಲಾಂತಿ ರಹಮಾನ್ ಎಂಬ ಯುವತಿ ಸಂಸದ ಅನ್ವರುಲ್ ಅಜೀಂ ಜೊತೆ ಕೋಲ್ಕತ್ತಾಗೆ ಆಗಮಿಸಿದ್ದರು. ಶಿಲಾಂತಿಯನ್ನು ಹನಿಟ್ರ್ಯಾಪ್‌ಗೆ ಬಳಸಿಕೊಂಡು ಮತ್ತಿಬ್ಬರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶಿಲಾಂತಿ ಮೋಹಕ್ಕೆ ಬಿದ್ದಿದ್ದ ಸಂಸದ ಅನ್ವರುಲ್ ಅಜೀಂ ಕೋಲ್ಕತ್ತಾಗೆ ಆಗಮಿಸಿದ್ದ ಎನ್ನಲಾಗಿದೆ. ಕೋಲ್ಕತ್ತದ ನ್ಯೂ ಟೌನ್ ಫ್ಲಾಟ್‌ಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಅವರ ಹಿಂದೆ ಇದೆ ಫ್ಲಾಟ್‌ಗೆ ವ್ಯಕ್ತಿಯೊಬ್ಬ ಹೋಗಿದ್ದ. ಮಾರನೇ ದಿನ ಅನಾರ್ ಅವರು ಹೊರಗೆ ಬರುವುದು ಸಿಸಿಟಿವಿಯಲ್ಲಿ ಕಂಡಿಲ್ಲ. ನಂತರ ಮಹಿಳೆ ಹಾಗೂ ಆ ವ್ಯಕ್ತಿ ಅಷ್ಟೇ ದೊಡ್ಡ ಬ್ಯಾಗ್ ಸಮೇತ ಹೊರಗೆ ಬಂದಿರುವುದು ಕಂಡಿದೆ ಎಂದು ಪೊಲೀಸರು ವಿವರಿಸಿದ್ದಾರೆ.
ಇದೀಗ ಹನಿ ಟ್ರ್ಯಾಪ್ ಮಾಡಲು ಬಳಸಿದ್ದ ಮಹಿಳೆಯನ್ನು ಢಾಕಾದಲ್ಲಿ ಬಂಧಿಸಲಾಗಿದೆ. ಮುಖ ಆರೋಪಿ ಅಖ್ತರುಝಾಮಾನ್ ಶಾಹಿನ್ ನ ಗೆಳತಿ ಎಂದು ಬಾಂಗ್ಲಾದೇಶ ಪೊಲೀಸ್ ಮೂಲಗಳು ಇಂಡಿಯಾ ಟುಡೇಗೆ ಸುದ್ದಿ ಸಂಸ್ಥೆಗೆ ತಿಳಿಸಿವೆ.
ಈ ತಿಂಗಳ ಆರಂಭದಲ್ಲಿ ವೈದ್ಯಕೀಯ ಚಿಕಿತ್ಸೆಗೆಂದು ಭಾರತಕ್ಕೆ ಬಂದಿದ್ದ ಬಾಂಗ್ಲಾದೇಶ ಸಂಸದ ಅನ್ವರುಲ್ ಅಜೀಂ ಅನಾರ್ ಕೋಲ್ಕತ್ತಾದ ನ್ಯೂಟೌನ್ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರ ಪಕ್ಷದ ಸದಸ್ಯರಾದ ಅನಾರ್ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಅನಾರ್ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು, ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಡೆಪ್ಯುಟಿ ಹೈಕಮಿಷನ್ನ ಹಿರಿಯ ಅಧಿಕಾರಿಗಳ ಪ್ರಕಾರ, ಹಸೀನಾ ಅವರ ಪಕ್ಷದಿಂದ ಮೂರು ಬಾರಿ ಸಂಸದರಾಗಿದ್ದ ಅನಾರ್ ಕೋಲ್ಕತ್ತಾಗೆ ಆಗಮಿಸಿದ ಒಂದು ದಿನದ ನಂತರ ನಾಪತ್ತೆಯಾಗಿದ್ದರು. ವೈದ್ಯಕೀಯ ಚಿಕಿತ್ಸೆಗೆಂದು ಕೋಲ್ಕತ್ತಾಗೆ ಬಂದಿದ್ದರು, ನಗರದ ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ್ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮೇ 13ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ಹಿಂದಿರುಗಿ ಬಂದಿರಲಿಲ್ಲ.
Discover more from Coastal Times Kannada
Subscribe to get the latest posts sent to your email.
Discussion about this post