• About us
  • Contact us
  • Disclaimer
Tuesday, July 1, 2025
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ಮಾರ್ಟ್ ಯುವಕ, ಹೆಣವಾದ ಎರಡು ಮಕ್ಕಳ ತಾಯಿ: ಲಾಂಗ್​ ಡ್ರೈವ್ ಕೊಲೆ ರಹಸ್ಯ ಬಯಲು!

Coastal Times by Coastal Times
June 25, 2025
in ಕೋಸ್ಟಾಲ್ ಟೈಮ್ಸ್ ವಿಶೇಷ
ಫೇಸ್​ಬುಕ್​ನಲ್ಲಿ ಪರಿಚಯವಾದ ಸ್ಮಾರ್ಟ್ ಯುವಕ, ಹೆಣವಾದ ಎರಡು ಮಕ್ಕಳ ತಾಯಿ: ಲಾಂಗ್​ ಡ್ರೈವ್ ಕೊಲೆ ರಹಸ್ಯ ಬಯಲು!
167
VIEWS
WhatsappTelegramShare on FacebookShare on Twitter

ಮಂಡ್ಯ, ಜೂನ್ 25: ಫೇಸ್​ಬುಕ್​ನಲ್ಲಿ ಪರಿಚಯವಾದ ಗೃಹಿಣಿಯನ್ನು ಯುವಕನೊಬ್ಬ ಹತ್ಯೆ ಮಾಡಿರುವ ಘಟನೆ ಕೆ.ಆರ್​.​ ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದ ಗೃಹಿಣಿ ಕೊಲೆಯಾಗಿದ್ದಾರೆ. ಕರೋಟಿ ಗ್ರಾಮದ ಪುನೀತ್​ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದ ಹೊಸಕೊಪ್ಪಲಿನ ನಿವಾಸಿ ಪ್ರೀತಿಗೆ ಸುಂದರ ಕುಟುಂಬವಿದ್ದು, ಮುದ್ದಾದ ಎರಡು ಮಕ್ಕಳು ಸಹ ಇದ್ದಾರೆ. ಈಕೆಯ ಗಂಡ ಆಟೋ‌ ಡ್ರೈವರ್, ಈಕೆ ಗಾರ್ಮೆಂಟ್ಸ್‌ಗೆ ಕೆಲಸಕ್ಕೆ ಹೋಗುತ್ತಿದ್ದಳು. ಈಕೆ ಯಾವಾಗಲೂ ಫೇಸ್‌ಬುಕ್‌ನಲ್ಲಿ ಚಾಟ್ ಮಾಡುವ ಹವ್ಯಾಸ ಸಹ ಇತ್ತು. ಈ ಪ್ರೀತಿ ಕಳೆದ ಗುರುವಾರ ರಾತ್ರಿ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಕರೋಠಿ ಗ್ರಾಮ ಪುನೀತ್ ಎಂಬ ಯುವಕನಿಗೆ ಫೇಸ್‌ಬುಕ್‌‌ನಲ್ಲಿ ರಿಕ್ವೆಸ್ಟ್ ಕಳಿಸಿದ್ದಳು. ತನ್ನ ಅಕೌಂಟ್‌ಗೆ ರಿಕ್ವೆಸ್ಟ್ ಬಂದ್ದದ್ದೆ ತಡ ಈ ಪುನೀತ್ ಅಕ್ಸೇಪ್ಟ್ ಮಾಡಿದ್ದ.ಇದಾದ ನಂತರ ಪ್ರೀತಿ ಪುನೀತನಿಗೆ ಹಾಯ್ ಎಂದು ಮೆಸೇಜ್ ಮಾಡಿದ್ದಾಳೆ. ಇದಕ್ಕೆ ಪ್ರತಿಯಾಗಿ ಪುನೀತ್ ರಿಪ್ಲೇ ಮಾಡಿದ್ದ. ಬಳಿಕ ಇಬ್ಬರು ಪರಸ್ಪರ ರಾತ್ರಿ ಇಡೀ ಮೆಸೆಜ್ ಮಾಡಿದ್ದು, ಶುಕ್ರವಾರ ಬೆಳಗ್ಗೆ ಪ್ರೀತಿ ಪುನೀತ್ ಜೊತೆ ಪೋನ್ ನಂಬರ್ ಎಕ್ಸ್ ಚೆಂಜ್ ಮಾಡಿದ್ದಾಳೆ. ಬಳಿಕ ಒಂದೇ ದಿನದಲ್ಲಿ ಮಾತುಕತೆ ನಡೆದಿದೆ.

ಇದಾಗಿ ಆಕೆ‌ ಮೀಟ್ ಮಾಡುವಂತೆ ಪುನೀತ್​ ಗೆ ಹೇಳಿದ್ದಾಳೆ. ಆಕೆ ಕರೆದದ್ದೆ ತಡ ಪುನೀತ ಓಕೆ ಎಂದು ಭಾನುವಾರ ಬೆಳಗ್ಗೆ ತನ್ನ ಸ್ನೇಹಿತನ ಕಾರು ತೆಗೆದುಕೊಂಡು ಹಾಸನಕ್ಕೆ ಹೋಗಿದ್ದಾನೆ. ಅತ್ತ ಪ್ರೀತಿ ತನ್ನ ಮನೆಯವರಿಗೆ ಸ್ನೇಹಿತೆಯ ಮಗಳ ಶಾಸ್ತ್ರ ಇದೆ ಅಲ್ಲಿಗೆ ಹೋಗ್ತೀನಿ ಎಂದು ಮನೆಯಿಂದ ಬಂದಿದ್ದಾಳೆ. ನಂತರ ಪುನೀತನ ಕಾರು ಹತ್ತಿ ನನ್ನ ಎಲ್ಲಿಗಾದರೂ ದೂರ ಕರೆದುಕೊಂಡು ಹೋಗು ಲಾಂಗ್ ಡ್ರೈವ್ ಹೋಗಿ ಬರೋಣಾ ಎಂದು ಹೇಳಿದ್ದಾಳೆ. ಅವಳು ಹೇಳಿದನ್ನು ಕೇಳಿ ಪುನೀತ್, ಕೆಆರ್‌ಎಸ್ ಕಡೆಗೆ ಕಾರನ್ನು ಡ್ರೈವ್ ಮಾಡಿದ್ದಾನೆ. ಬಳಿಕ ಅಲ್ಲಿ ಒಂದು ಲಾಡ್ಜ್‌ನಲ್ಲಿ ಬುಕ್ ಮಾಡಿಕೊಂಡು ತಮ್ಮ ಕಾಮದ ಬಯಕೆಯನ್ನು ತೀರಿಸಿಕೊಂಡಿದ್ದಾರೆ. ಆಕೆ‌ ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ಆದ್ರೆ ಪುನೀತ್ ಒಪ್ಪದೆ ಲಾಡ್ಜ್​ ನಿಂದ ಇಬ್ಬರು ಬಂದಿದ್ದಾರೆ.

ಇಷ್ಟಕ್ಕೆ ಬಿಡದ ಆಕೆ ವಾಪಸ್ಸು ಹೋಗದೆ ಯಾರು ಇಲ್ಲದ ಸ್ಥಳಕ್ಕೆ ಕರೆದೋಗುವಂತೆ ಒತ್ತಾಯಿಸಿದ್ದಾಳೆ. ಈಗ ಪುನೀತ್ ಕೆ.ಆರ್.ಪೇಟೆಯ ಕತ್ತರಘಟ್ಟ ಅರಣ್ಯ ಪ್ರದೇಶಕ್ಕೆ ಕರೆದೋಗಿದ್ದಾನೆ. ಆ ವೇಳೆಯೂ ಸಹ ಪ್ರೀತಿ ಲೈಂಗಿಕ ಕ್ರಿಯೆ ಒತ್ತಾಯಿಸಿದ್ದಾಳೆ.ಆದರೂ ಪುನೀತ್ ಒಪ್ಪಿಲ್ಲ. ಇದಕ್ಕೆ ಪ್ರೀತಿ, ಪುನೀತನಿಗೆ ರೇಗಿಸಿದ್ದಾಳೆ. ಇದರಿಂದ ಕೋಪಗೊಂಡ ಪುನೀತ್ ಆಕೆಗೆ ಕಪಾಳ‌ ಬಾರಿಸಿದ್ದಾನೆ. ಈ ವೇಳೆ ಆಕೆ ಪ್ರಜ್ಞೆ ತಪ್ಪಿದ್ದರಿಂದ ಗಾಬರಿಗೊಂಡು ಆಕೆಯನ್ನ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ. ಹಾಗೂ ಸಾಕ್ಷಿ ನಾಶಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ” ಎಂದು ಅವರು ತಿಳಿಸಿದರು. ಒಟ್ಟಾರೆ ಸುಂದರ ಯುವಕನ ಹಿಂದೆ ಬಿದ್ದವಳು ಮಸಣ ಸೇರಿದ್ದು ಮಾತ್ರ ವಿಪರ್ಯಾಸ.

“ಗೃಹಿಣಿ ಕಾಣಿಯಾಗಿರುವ ಬಗ್ಗೆ ಹಾಸನದ ಪೊಲೀಸ್ ಠಾಣೆಯಲ್ಲಿ ಆಕೆಯ ಪತಿ ದೂರು ದಾಖಲಿಸಿದ್ದರು. ಮೊಬೈಲ್ ನೆಟ್​ವರ್ಕ್​ ಮಂಡ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಆಧರಿಸಿ ಕರೆ ಮಾಡಿದಾಗ ಪುನೀತ್​ ಕರೆ ಸ್ವೀಕರಿಸಿ, ಮಹಿಳೆ ಕಾರು ಬಾಡಿಗೆ ಪಡೆದು, ಮೊಬೈಲ್ ಅನ್ನು ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿದ್ದ. ಪುನೀತ್ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇದರ ನಡುವೆ ಕರೋಟಿ ಗ್ರಾಮದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಗ್ರಾಮಸ್ಥರು ಕಿಕ್ಕೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ” ಎಂದರು.

Share this:

  • Facebook
  • X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಮಂಗಳೂರು ಬಿಜೈ: ಬ್ಯೂಟಿ ಸಲೂನ್ ಅಕ್ರಮ ಚಟುವಟಿಕೆ ಆರೋಪ: ಪೊಲೀಸರ ದಾಳಿ, ವ್ಯಾಪಾರ ಪರವಾನಗಿ ರದ್ದು

Next Post

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಪ್ರಕರಣ ದಾಖಲು

Related Posts

ವಿಚಾರಣೆ ನೆಪದಲ್ಲಿ ವಕೀಲೆಗೆ ಕಿರುಕುಳ; ಬೆತ್ತಲೆಗೊಳಿಸಿ ಹಿಂಸೆ ನೀಡಿದ್ದ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ
ಕೋಸ್ಟಾಲ್ ಟೈಮ್ಸ್ ವಿಶೇಷ

ವಿಚಾರಣೆ ನೆಪದಲ್ಲಿ ವಕೀಲೆಗೆ ಕಿರುಕುಳ; ಬೆತ್ತಲೆಗೊಳಿಸಿ ಹಿಂಸೆ ನೀಡಿದ್ದ ಡಿವೈಎಸ್ಪಿ ಕನಕಲಕ್ಷ್ಮಿ ಬಂಧನ

March 15, 2025
73
ತಬಲಾ ಮಾಂತ್ರಿಕ ಜಾಕಿರ್​ ಹುಸೇನ್ ಇನ್ನಿಲ್ಲ ! ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ
ಕೋಸ್ಟಾಲ್ ಟೈಮ್ಸ್ ವಿಶೇಷ

ತಬಲಾ ಮಾಂತ್ರಿಕ ಜಾಕಿರ್​ ಹುಸೇನ್ ಇನ್ನಿಲ್ಲ ! ಅಮೆರಿಕದ ಸ್ಯಾನ್​ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನ

December 16, 2024
31
Next Post
ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಪ್ರಕರಣ ದಾಖಲು

Discussion about this post

Recent News

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

June 30, 2025
31
ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

June 28, 2025
175
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

ಬೆಂಗಳೂರು – ಉಡುಪಿ ರೈಲಿನಲ್ಲಿ ಮಹಿಳೆಯ ಪರ್ಸ್‌ನಲ್ಲಿದ್ದ 16.69 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು!

June 30, 2025
ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

ಶಮಾ ಐ ಎನ್ ಎಂ ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿದೆ

June 28, 2025
HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್

HERO VIDA VX2: ಮಾರುಕಟ್ಟೆಗೆ ಬರಲಿದೆ ‘ಹೀರೋ ವಿಡಾ ವಿಎಕ್ಸ್2’ ಎಲೆಕ್ಟ್ರಿಕ್ ಸ್ಕೂಟರ್

June 28, 2025
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d