ಮಂಗಳೂರು: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನರವರು,‘ನಮ್ಮ ಧರ್ಮ, ನಮ್ಮ ಸಂಸ್ಕೃತಿಯೇ ಮೇಲು ಎಂದು ಪೈಪೋಟಿಗೆ ಬಿದ್ದಿರುವ ನಾವಿಂದು ಕತ್ತಲಿನಲ್ಲಿ ಇದ್ದೇವೆ. ಈ ಕತ್ತಲನ್ನು ಹೋಗಲಾಡಿಸಿ ನಾವೆಲ್ಲರು ಮನುಷ್ಯರು ಎಂಬುದನ್ನು ಅರಿತು ನಡೆದುಕೊಳ್ಳಬೇಕಾಗಿದೆ. ಮಾನವಿಯತೆಯೇ ಧರ್ಮ ಎಂದು ಅರಿತಾಗ ಪ್ರತಿಯೊಬ್ಬರ ಬದುಕೂ ಬೆಳಕಿನಂತೆ ಪ್ರಜ್ವಲಿಸುತ್ತದೆ’ ‘ಪರಸ್ಪರ ವಿಶ್ವಾಸದಿಂದ ನಡೆದುಕೊಳ್ಳುವುದು, ಒಬ್ಬರನ್ನೊಬ್ಬರು ಪ್ರಿತಿ ಗೌರವದಿಂದ ಕಾಣುವುದೂ ಬೆಳಕಿನ ಪ್ರಜ್ವಲನದ ಹಾಗೆ. ಇದುವೇ ದೀಪಾವಳಿ ಹಬ್ಬದ ಸಂದೇಶ’ ಎಂದರು.

ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ, ‘ಅಸೂಯೆ, ಕೋಪ, ಬಡತನಗಳು ಕತ್ತಲೆಯ ಸಂಕೇತ. ಸ್ನೇಹ, ಪ್ರೀತಿ, ಪರಸ್ಪರ ಸಹಕಾರಗಳು ಬೆಳಕಿನ ಸಂಕೇತ’ ಎಂದು ಹೇಳಿದರು.
ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ಅಧ್ಯಕ್ಷತೆ ವಹಿಸಿದ್ದರು. ಗೂಡು ದೀಪ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಪತ್ರಕರ್ತ ಮೊಹಮ್ಮದ್ ಆರಿಫ್, ಸುದೀಪ್ ಪೌಲ್, ಸಮಾಜ ಸೇವಕಿ ಮಂಜುಳಾ ನಾಯ್ಕ್, ಬಿಜೈ ಲಯನ್ಸ್ ಕ್ಲಬ್ ಕಾರ್ಯದರ್ಶಿ ಥಾಮಸ್ ಸೈಮನ್ ಪಾಯ್ಸ್, ಮುಖಂಡ ಆಶ್ರಫ್ ,ವಕೀಲ ಯಶವಂತ ಮರೋಳಿ, ಕಥೋಲಿಕ್ ಸಭಾ ಅಧ್ಯಕ್ಷ ಸ್ಟೇನಿ ಲೋಬೊ, ದೇವದಾಸ್ ವಿಜಯ ಅಲ್ಫ್ರೆಡ್, ಸುಶೀಲ್ ನೊರೊನ್ಹಾ, ಸ್ಟ್ಯಾನಿ ಅಲ್ವಾರಿಸ್, ಕಿಶೋರ್ ಫರ್ನಾಂಡಿಸ್ ಫ್ಲೇವಿ ಕ್ರಾಸ್ತಾ ಇದ್ದರು.

Discover more from Coastal Times Kannada
Subscribe to get the latest posts sent to your email.








Discussion about this post