ಕೋಜಿಕ್ಕೋಡ್ : ಕೇರಳ ಬ್ಯಾಂಡ್‌ಗೆ ದೊಡ್ಡ ಹಿನ್ನಡೆಯಾಗಿ, ತೈಕ್ಕುಡಂ ಸೇತುವೆ, ಕೋಝಿಕ್ಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರದ ‘ವರಾಹ ರೂಪಂ’ ಹಾಡಿನ ವಿರುದ್ಧದ ನಿಷೇಧವನ್ನು ತೆಗೆದುಹಾಕಿದೆ ಎಂದು ವರದಿಯಾಗಿದೆ.

ಕೇರಳ ಮೂಲದ ಮ್ಯೂಸಿಕ್ ಬ್ಯಾಂಡ್ ಥೈಕ್ಕುಡಂ ಬ್ರಿಡ್ಜ್ ಕಾಂತಾರ ತಂಡ ಕೃತಿಚೌರ್ಯ ಆರೋಪ ಮಾಡಿತ್ತು. ಕಾಂತಾರ ಚಿತ್ರದ ವರಾಹ ರೂಪಂ ಹಾಡು ತಮ್ಮ ನವರಸಂನ ನಕಲು ಎಂದು ತಿಳಿಸಿದರು. ಈ ಹಿಂದೆ ಥೈಕುಡಂ ಸೇತುವೆಯ ಪರವಾಗಿ ನ್ಯಾಯಾಲಯ ತೀರ್ಪು ನೀಡಿತ್ತು ಮತ್ತು ಹಾಡಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿತ್ತು. ಇದರಿಂದ ಕಾಂತಾರ ಸಿನಿಮಾಕ್ಕೆ ಭಾರೀ ಹಿನ್ನಡೆ ಅನ್ನುವ ರೀತಿ ಸುದ್ದಿ ಹಬ್ಬಿತ್ತು. ಆದರೆ ಥಿಯೇಟರ್ ಗಳಲ್ಲಿ ಹಾಡಿನ ಬಳಕೆಯನ್ನು ಹಿಂಪಡೆಯುವ ಗೋಜಿಗೆ ಸಿನಿಮಾ ತಂಡ ಹೋಗಿರಲಿಲ್ಲ. ಈ ನಡುವೆ, ಸಿನಿಮಾ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್ ತಂಡದ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿದ್ದರು. ಆನಂತರ, ಹೊಂಬಾಳೆ ಫಿಲಂಸ್ ತಂಡ, ರಿಷಬ್ ಶೆಟ್ಟಿ ಪರವಾಗಿ ಮತ್ತು ಸಂಗೀತ ನಿರ್ದೇಶಕ ಲೋಕನಾಥ್ ಪರವಾಗಿ ಪ್ರತ್ಯೇಕವಾಗಿ ವಕೀಲರು ಹಾಜರಾಗಿ ಹಾಡಿನ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದರು. ಅಲ್ಲದೆ, ತೈಕ್ಕುಡಂ ಬ್ರಿಡ್ಜ್ ಎತ್ತಿದ್ದ ತಕರಾರು ಅರ್ಜಿಗೆ ಮೌಲ್ಯವೇ ಇಲ್ಲ ಅನ್ನುವ ಬಗ್ಗೆ ಸೂಕ್ತ ದಾಖಲೆ ಇಟ್ಟು ವಾದ ಮಂಡಿಸಿದ್ದರು.

ಆದರೆ, ಶುಕ್ರವಾರ ವಾದ – ಪ್ರತಿವಾದ ಆಲಿಸಿದ ನ್ಯಾಯಾಲಯವು ನ್ಯಾಯವ್ಯಾಪ್ತಿಯ ಕೊರತೆಯನ್ನು ಉಲ್ಲೇಖಿಸಿ ತೈಕ್ಕುಡಂ ಬ್ರಿಡ್ಜ್ ತಂಡದ ಮನವಿಯನ್ನು ವಜಾಗೊಳಿಸಿತು. ಕೋರ್ಟ್ ಮೆಟ್ಟಿಲೇರಿದವರಿಗೆ ತುಳುನಾಡಿನ ದೈವಗಳು ಕಾರಣಿಕವನ್ನು ತೋರಿಸಿಕೊಟ್ಟಿದೆ .
Discover more from Coastal Times Kannada
Subscribe to get the latest posts sent to your email.







Discussion about this post