
ಮಂಗಳೂರು: ನಗರದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಯುವತಿ ಜತೆ ತೆರಳುತ್ತಿದ್ದ ಅನ್ಯ ಕೋಮಿನ ಯುವಕನ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ನಗರದ ನಂತೂರು ಸರ್ಕಲ್ ಬಳಿ ಕಾರ್ಕಳದಿಂದ ಯುವತಿ ಜತೆ ಅನ್ಯಕೋಮಿನ ಯುವಕ ಬಸ್‌ನಲ್ಲಿ ಗುರುವಾರ ಬರುತ್ತಿದ್ದಾಗ, ಬಜರಂಗದಳ ಕಾರ್ಯಕರ್ತರು ಯುವಕನನ್ನು ಹಿಡಿದು ಥಳಿಸಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಯುವಕ, ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಬಸ್ಸಿನಲ್ಲಿ ರಶೀಮ್ ಅವರು ಯುವತಿಯೊಬ್ಬರ ಜೊತೆ ಪ್ರಯಾಣಿಸುತ್ತಿದ್ದರು. ‘ಬಸ್ ನಂತೂರು ಜಂಕ್ಷನ್ ತಲುಪಿದಾಗ ನಾಲ್ಕೈದು ಯುವಕರು ಬಸ್ಸಿನೊಳಗೆ ನುಗ್ಗಿ ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದರು. ಬಸ್‌ನಿಂದ ಕೆಳಗೆ ಇಳಿಸಿ ದೊಣ್ಣೆ ಮತ್ತು ಬೆತ್ತದಿಂದ ಹಲ್ಲೆ ನಡೆಸಿದರು. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದರು‘ ಎಂದು ಸೈಯದ್ ರಶೀಮ್ ಉಮರ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ಎಡಿಜಿಪಿ (ಕಾನೂನು ಸುವ್ಯವಸ್ಥೆ) ಅಲೋಕ್ ಕುಮಾರ್, ‘ಈ ಘಟನೆಗೆ ಸಂಬಂಧಿಸಿ ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ

Appropriate action is being taken regarding this incident https://t.co/z5fSTqS7Mo
— alok kumar (@alokkumar6994) November 25, 2022

Discover more from Coastal Times Kannada
Subscribe to get the latest posts sent to your email.








Discussion about this post