ಮಂಗಳೂರು, ನ.24 : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟಿರುವುದಾಗಿ ಹೇಳಿ ಆರೋಪಿಸಿ ದೂರು ನೀಡಿ ಸ್ವತಃ ಬಂಧನಕ್ಕೊಳಗಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಕಡೆಗೂ ಜಾಮೀನು ಸಿಕ್ಕಿದೆ.
ಅನಾಮಿಕನಾಗಿ ಬಂದಿದ್ದ ಚಿನ್ನಯ್ಯನ ಹೇಳಿಕೆಯಂತೆ ಧರ್ಮಸ್ಥಳದಲ್ಲಿ ಆತ ತೋರಿಸಿದ್ದ ಜಾಗದಲ್ಲಿ ಅಗೆದು ಎಸ್‌ಐಟಿ ತಂಡ ಶೋಧ ಕಾರ್ಯ ನಡೆಸಿತ್ತು. ಬಳಿಕ ಇದು ಧರ್ಮಸ್ಥಳ ವಿರುದ್ಧ ನಡೆದ ಷಡ್ಯಂತ್ರ ಎಂಬ ನೆಲೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬಂಧಿಸಿ ಜೈಲಿಗಟ್ಟಿದ್ದರು.
ಕಳೆದ ಆಗಸ್ಟ್ ನಲ್ಲಿ ಬಂಧನವಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಮೂರು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ ಚಿನ್ನಯ್ಯನಿಗೆ ಷರತ್ತಿನ ಜಾಮೀನು ನೀಡಿದೆ. ದೂರುದಾರನಾಗಿ ಬಂದಿದ್ದ ಚಿನ್ನಯ್ಯನನ್ನ ಪೊಲೀಸರು ಉಲ್ಟಾ ಕೇಸು ಹಾಕಿ, ಅರೆಸ್ಟ್ ಮಾಡಿದ್ದರು. ಇದೀಗ ಮೂರು ತಿಂಗಳ ಜೈಲು ವಾಸದ ಬಳಿಕ ಜಾಮೀನು ನೀಡಲಾಗಿದೆ. ಜಾಮೀನು ಪಡೆದು ತಪ್ಪಿಸಿಕೊಳ್ಳುವಂತಿಲ್ಲ, ಯಾವುದೇ ಕ್ಷಣದಲ್ಲಿ ಕರೆದಾಗ ಹಾಜರಾಗಬೇಕು, ಒಂದು ಲಕ್ಷ ಬಾಂಡ್ ಇಡೋದು ಸೇರಿ ಒಟ್ಟು 12 ಷರತ್ತುಗಳನ್ನು ವಿಧಿಸಿ ಚಿನ್ನಯ್ಯನಿಗೆ ಜಾಮೀನು ಮಂಜೂರು ಮಾಡಿದೆ. ಚಿನ್ನಯ್ಯ ಈಗ ಶಿವಮೊಗ್ಗ ಜೈಲಿನಲ್ಲಿದ್ದಾನೆ.
ಚಿನ್ನಯ್ಯನಿಗೆ ಕೋರ್ಟ್ ಹಾಕಿರುವ ಷರತ್ತುಗಳು
- ಮುಂದೆ ಇದೇ ರೀತಿಯ ಅಪರಾಧಕ್ಕೆ ಕೈ ಹಾಕಬಾರದು
- ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಓಡಿಹೋಗುವುದು, ಸ್ಥಳ ಬಿಟ್ಟು ಮರೆಮಾಡಿಕೊಳ್ಳುವುದು ಬೇಡ
- Prosecution witnesses ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವ ಕೆಲಸ ಮಾಡಬಾರದು
- ಕೇಸಿಗೆ ಸಂಬಂಧಿಸಿದ ದಾಖಲೆ ಅಥವಾ ಪುರಾವೆಗಳನ್ನು ಅಳಿಸುವುದು / ನಾಶಗೊಳಿಸುವುದು ಬೇಡ
- IO (Investigating Officer) ಕರೆ ಮಾಡಿದಾಗ ಹಾಜರಾಗಬೇಕು, ತನಿಖೆಗೆ ತೊಂದರೆ ಕೊಡಬಾರದು
- ಕೋರ್ಟ್ ದಿನಾಂಕಗಳಿಗೆ ತಪ್ಪದೇ ಹಾಜರಾಗಬೇಕು. ಕೋರ್ಟ್ ಮನ್ನಿಸಿದಾಗ ಮಾತ್ರ ಹಾಜರಾಗದೇ ಇರಬಹುದು
- ಚಿನ್ನಯ್ಯ ಹಾಗೂ ಜಾಮೀನಾದರೂ ಕೂಡ ಆಧಾರ್, ಮತದಾರರ ಗುರುತಿನ ಚೀಟಿಯ ಪುರಾವೆ ಕೊಡಬೇಕು
- ವಿಳಾಸದಲ್ಲಿ ಬದಲಾವಣೆ ಬಂದರೆ ಕೋರ್ಟ್‌ಗೆ ತಿಳಿಸಬೇಕು
- ಮೊಬೈಲ್ ನಂಬರ್ / ವಾಟ್ಸ್ಯಾಪ್ / ಇಮೇಲ್ ಮಾಹಿತಿ ಕೊಡಬೇಕು
- Court jurisdictionnನಿಂದ ಹೊರಗೆ ಹೋಗಬಾರದು
- ಕೇಸ್ ಬಗ್ಗೆ ಮಾಧ್ಯಮಕ್ಕೆ ಮಾತನಾಡಬಾರದು
- ಬೇಲ್ ಮೇಲೆ ಬಿಡುಗಡೆ ಆದ ನಂತರ ಬದಲಿ ದಿನಗಳಲ್ಲಿ (ದಿನ ಬಿಟ್ಟು ದಿನ) ಪೊಲೀಸ್ ಠಾಣೆಗೆ ಹಾಜರಾಗಬೇಕು
Discover more from Coastal Times Kannada
Subscribe to get the latest posts sent to your email.







Discussion about this post