ಇಂಡೋನೇಷ್ಯಾದಲ್ಲಿ 22 ಅಡಿ ಉದ್ದದ ಹೆಬ್ಬಾವು 54 ವರ್ಷದ ಮಹಿಳೆಯನ್ನು ಜೀವಂತವಾಗಿ ನುಂಗಿದ ಭಯಾನಕ ಘಟನೆ ನಡೆದಿದೆ. ಮಹಿಳೆ ಶುಕ್ರವಾರ ಕೆಲ ವಸ್ತುಗಳನ್ನು ತರಲು ಕಾಡಿಗೆ ಹೋಗಿದ್ದರು. ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಹೆಬ್ಬಾವು ಪತ್ತೆಯಾಗಿದ್ದು, ಹೊಟ್ಟೆ ಉಬ್ಬಿರುವುದು ಕಂಡುಬಂದಿದೆ. ಇದಾದ ನಂತರ ಹೆಬ್ಬಾವನ್ನು ಕೊಂದು ಮಹಿಳೆಯ ಮೃತದೇಹವನ್ನು ಹೊರತೆಗೆಯಲಾಗಿದೆ.
54 ವರ್ಷದ ಮಹಿಳೆ ಜರ್ರಾ ಶುಕ್ರವಾರ ರಾತ್ರಿ ಜಂಗಲ್ ರಬ್ಬರ್ ತರಲು ಕಾಡಿಗೆ ಹೋಗಿದ್ದರು. ಆ ನಂತರ ವಾಪಸ್ ಬಂದಿರಲಿಲ್ಲ. ಸ್ಥಳೀಯರು ಹುಡುಕಾಟ ಆರಂಭಿಸಿದರೂ ಎಲ್ಲಿಯೂ ಪತ್ತೆಯಾಗಿಲ್ಲ. ನಂತರ ಕಾಡಿನಲ್ಲಿಯೇ ದೈತ್ಯ ಹೆಬ್ಬಾವು ಕಾಣಿಸಿಕೊಂಡಿತು. ಹೆಬ್ಬಾವು ಪೊದೆಗಳ ನಡುವೆ ವಿಶ್ರಾಂತಿ ಪಡೆಯುತ್ತಿತ್ತು. ಇದನ್ನು ಕಂಡು ಮಹಿಳೆಯನ್ನು ಹುಡುಕುತ್ತಿದ್ದವರಿಗೆ ಅನುಮಾನ ವ್ಯಕ್ತವಾಗಿದೆ. ಹೆಬ್ಬಾವಿನ ಹೊಟ್ಟೆ ಉಬ್ಬಿಕೊಂಡು ಮಹಿಳೆಯ ದೇಹ ಗಾತ್ರ ಹೆಬ್ಬಾವಿನ ಹೊಟ್ಟೆಯ ಹೊರಭಾಗದಲ್ಲಿ ಕಂಡು ಬರುತ್ತಿತ್ತು. ಬಳಿಕ ಗ್ರಾಮಸ್ಥರು ಜರ್ರಾಳನ್ನು ಹೆಬ್ಬಾವೇ ನುಂಗಿದೆ ಎಂದು ಅದನ್ನು ಕೊಂದು ಆಕೆಯನ್ನು ಮೇತದೇಹವನ್ನು ಹೊರ ತೆಗೆದಿದ್ದಾರೆ.
ಮಹಿಳೆ ಒಂಟಿಯಾಗಿ ಕಾಡಿಗೆ ಹೋಗಿದ್ದಳು. ಹೆಬ್ಬಾವು ಮಹಿಳೆಯನ್ನು ನುಂಗುತ್ತಿರುವುದನ್ನು ಗ್ರಾಮದಲ್ಲಿ ಯಾರೂ ನೋಡಿಲ್ಲ. ಹೆಬ್ಬಾವು ಮಹಿಳೆಯನ್ನು ಜೀವಂತವಾಗಿ ನುಂಗಿತ್ತು. ಹೆಬ್ಬಾವು ಮಹಿಳೆಯನ್ನು ಹೇಗೆ ನುಂಗುತ್ತದೆ ಎಂದು ಎಲ್ಲರಿಗೂ ಆಶ್ಚರ್ಯವಾಯಿತು. ಇದನ್ನು ಕಂಡು ಕಾಡಿನಲ್ಲಿ ಜನಸಾಗರವೇ ನೆರೆದಿತ್ತು. ಬಳಿಕ ಸ್ಥಳೀಯರು ಹೆಬ್ಬಾವನ್ನು ಕೊಂದು ಹಾಕಿದ್ದಾರೆ. ನಂತರ ಹಾವಿನ ಹೊಟ್ಟೆಯನ್ನು ಕತ್ತರಿಸಿ ಮಹಿಳೆಯ ಶವವನ್ನು ಹೊರತೆಗೆಯಲಾಯಿತು.
A female rubber plantation worker in #Jambi province #Indonesia was found dead after being swallowed by a 6-meters-long python snake.@AJEnglish @BBCNews @trtworld @Reuters @NikkeiAsia @ChannelNewsAsia @telesurenglish @France24_en https://t.co/L0Z1OhcSWY pic.twitter.com/yF13OUqw92
— Hasto Suprayogo (@HastoSuprayogo) October 25, 2022
Discover more from Coastal Times Kannada
Subscribe to get the latest posts sent to your email.
Discussion about this post