ನವದೆಹಲಿ : ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಲ್ಲಿರುವ ಭಾರತೀಯರಿಗೆ ಶೀಘ್ರವಾಗಿ ದೇಶ ತೊರೆಯುವಂತೆ ಮತ್ತೊಮ್ಮೆ ಮನವಿ ಜತೆ ಸೂಚನೆಯನ್ನೂ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಹಗೆತನದ ದೃಷ್ಟಿಯಿಂದ ರಾಯಭಾರ ಕಚೇರಿ ಈ ಸಲಹೆಯನ್ನು ನೀಡಿದೆ. ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟ ನಂತರ ಈ ಸಲಹೆ ನೀಡಲಾಗಿದೆ. ಕಳೆದ ವಾರವಷ್ಟೇ ಉಕ್ರೇನ್‌ನಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ನಂತರ ಇದೇ ರೀತಿಯ ಸಲಹೆಯನ್ನು ನೀಡಲಾಗಿತ್ತು. ಅದಾದ ನಂತರ ಒಂದು ವಾರದಲ್ಲಿ ಎರಡನೇ ಬಾರಿ ಹೊಸ ಸಲಹೆಯನ್ನು ಹೊರಡಿಸಲಾಗಿದೆ.
“ಅಕ್ಟೋಬರ್ 19 ರಂದು ರಾಯಭಾರ ಕಚೇರಿ ನೀಡಿದ ಸಲಹೆಯ ಮುಂದುವರಿಕೆಯಾಗಿ, ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ತಕ್ಷಣವೇ ಉಕ್ರೇನ್ ತೊರೆಯುವಂತೆ ಸೂಚಿಸಲಾಗಿದೆ,” ಎಂದು ರಾಯಭಾರ ಕಚೇರಿ ತಿಳಿಸಿದೆ.
ಉಕ್ರೇನ್ನನ್ನು ವಶಪಡಿಸಿಕೊಳ್ಳುವುದಕ್ಕಾಗಿ ‘ಅಣ್ವಸ್ತ್ರ’ ಬಳಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದ ಬೆನ್ನೆಲ್ಲೇ ಈ ಸಲಹೆಯನ್ನು ನೀಡಲಾಗಿದೆ. ಭಾರತೀಯ ನಾಗರಿಕರು ಗಡಿಗೆ ಪ್ರಯಾಣಿಸಲು ಬೇಕಾಗುವ ಯಾವುದೇ ಸಹಾಯಕ್ಕಾಗಿ ಸಂಪರ್ಕಿಸಬಹುದಾದ ಕೆಲವು ಸಂಖ್ಯೆಗಳನ್ನು ರಾಯಭಾರ ಕಚೇರಿ ಹಂಚಿಕೊಂಡಿದೆ. ಇತ್ತೀಚಿನ ವಾರಗಳಲ್ಲಿ, ರಷ್ಯಾವು ಉಕ್ರೇನಿಯನ್ನ ನಗರಗಳ ಮೇಲೆ ಬಾಂಬ್ ದಾಳಿ ಮಾಡಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪೂರ್ವ ಯುರೋಪಿಯನ್ ರಾಷ್ಟ್ರದಲ್ಲಿ ಹೋರಾಡಲು ಮಾರ್ಷಲಾ ಲಾ ಜಾರಿ ಘೋಷಣೆ ಮಾಡಿದಾಗಿನಿಂದಲೂ ದಾಳಿಗಳು ತೀವ್ರಗೊಂಡಿವೆ. ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ದೇಶವು ತ್ವರಿತಗೊಳಿಸಬೇಕಾಗಿದೆ ಎಂದು ಪುಟಿನ್ ಹೇಳಿದ್ದಾರೆ.
Advisory to Indian Nationals in Ukraine@MEAIndia @DDNewslive @DDNational @PIB_India @IndianDiplomacy @eoiromania @IndiainPoland @IndiaInHungary @IndiaInSlovakia pic.twitter.com/kFR3qJKlJR
— India in Ukraine (@IndiainUkraine) October 25, 2022
ಈ ಹಿಂದಿನ ಸಲಹೆಯ ಮೇರೆಗೆ ಕೆಲವು ಭಾರತೀಯ ಪ್ರಜೆಗಳು ಈಗಾಗಲೇ ಉಕ್ರೇನ್ ಅನ್ನು ತೊರೆದಿದ್ದಾರೆ. ದೇಶದಿಂದ ನಿರ್ಗಮಿಸಲು ಉಕ್ರೇನಿಯನ್ ಗಡಿಗೆ ಪ್ರಯಾಣಿಸಲು ಯಾವುದೇ ಮಾರ್ಗದರ್ಶನ ಅಥವಾ ಸಹಾಯಕ್ಕಾಗಿ ಭಾರತೀಯ ಪ್ರಜೆಗಳನ್ನು ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post