ಮಂಗಳೂರು, ಡಿ 26: ಮಂಗಳೂರಿನ ಕೊಡಿಯಾಲ್ ಗುತ್ತಿನ ಅಪಾಟ್೯ಮೆಂಟ್ನಲ್ಲಿ ಮಗುವೊಂದು ಆಟವಾಡುತ್ತಾ ಮನೆಯೊಳಗಿದ್ದ ರೂಮಿಗೆ ಹೋಗಿದೆ. ಈ ವೇಳೆ ಅಚಾನಕ್ ಆಗಿ ರೂಮಿನ ಡೋರ್ ಲಾಕ್ ಮಾಡಿಕೊಂಡಿದೆ. ವಾಪಸ್ ಡೋರ್ ಅನ್ ಲಾಕ್ ಮಾಡಲು ಆಗದೆ ಮಗು ಅಳಲು ಶುರು ಮಾಡಿತ್ತು. ಮಗು ಅಳುವಿನ ಸದ್ದು ಕೇಳಿ ಬಂದಿದ್ದ ಪೋಷಕರು ರೂಮಿನ ಬಾಗಿಲು ತೆರೆಯಲು ಮುಂದಾಗಿದ್ದಾರೆ. ಆದರೆ ರೂಮಿನೊಳಗೆ ಮಗು ಡೋರ್ ಲಾಕ್ ಮಾಡಿಕೊಂಡಿತ್ತು.
ರೂಮಿನ ಡೋರ್ ಲಾಕ್ ತೆರೆಯಲು ಎಷ್ಟೇ ಪ್ರಯತ್ನಿಸಿದರೂ ಆಗದಿದ್ದಾಗ ಗಾಬರಿಗೊಂಡ ಮನೆ ಮಂದಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ತಂಡದವರು ಹಗ್ಗದ ಸಹಾಯದಿಂದ 4ನೇ ಮಹಡಿಗೆ ಇಳಿದು, ಕೋಣೆಯೊಳಗೆ ಸಿಲುಕಿದ್ದ ಮಗುವನ್ನು ರಕ್ಷಿಸಿದ್ದಾರೆ.
Discussion about this post