ಉಳ್ಳಾಲ: ಪುತ್ತೂರು ಮೂಲದ , ಉಳ್ಳಾಲದ ಕೋಟೆಕಾರಿನ ಖಾಸಗಿ ಪಿಜಿಯಲ್ಲಿ ವಾಸ್ತವ್ಯ ಹೂಡಿ ವ್ಯಾಸಂಗ ಮಾಡುತ್ತಿದ್ದ ಪಿಎಚ್ ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಂಗಳವಾರ ಉಳ್ಳಾಲ ಠಾಣೆಗೆ ತೆರಳಿ ಠಾಣಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.
ಗಾಂಜಾ ಪ್ರಕರಣದ ಆರೋಪಿ, ಕುಖ್ಯಾತ ಡ್ರಗ್ಸ್ ಪೆಡ್ಲರ್ ಶಾರೂಕ್ ಶೇಕ್ ಎಂಬಾತ ಡ್ರಗ್ಸ್ ಹಾಗೂ ಇನ್ನಿತರ ಮೋಸದಾಟವಾಡಿ ಆಕೆಯನ್ನು ಅಪಹರಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸ್ಥಳೀಯವಾಗಿ ಇರುವ ಅನುಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮನದಟ್ಟು ಮಾಡುವ ಕಾರ್ಯವನ್ನು ಪುತ್ತಿಲರವರು ಈ ಸಂದರ್ಭ ಮಾಡಿದರು

ಎಂಎಸ್ಸಿ ಪೂರೈಸಿದ್ದ ಚೈತ್ರಾ ಹೆಬ್ಬಾರ್ ದೇರಳಕಟ್ಟೆಯ ಖಾಸಗಿ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಿದ್ದಳು. ಕೋಟೆಕಾರು ಬಳಿಯ ಮಾಡೂರಿನಲ್ಲಿ ಪಿಜಿ ಒಂದರಲ್ಲಿದ್ದ ಯುವತಿಯನ್ನು ಫೆ.17ರಂದು ರೈಲಿನಲ್ಲಿ ಈತ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದು ಇಲಾಖೆ ಈ ಕುರಿತು ತೀವ್ರ ತನಿಖೆ ನಡೆಸುತ್ತಿದ್ದು ಇನ್ನು ಕೆಲವೇ ದಿನಗಳಲ್ಲಿ ಆಕೆಯನ್ನು ಕರೆತರಲಾಗುವುದು ಎಂದು ಠಾಣಾಧಿಕಾರಿಯವರು ಪುತಿಲರಿಗೆ ಮಾಹಿತಿ ನೀಡಿದ್ದಾರೆ.
ಶಾರುಕ್ ಶೇಖ್ ಕತಾರಿನಲ್ಲಿದ್ದಾಗ ಪ್ರಕರಣವೊಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನಲಾಗಿದೆ . ಆನಂತರ ಊರಿಗೆ ಬಂದು ಕುಖ್ಯಾತ ಡ್ರಗ್ಸ್ ಪೆಡ್ಲರ್ ಆಗಿ ಹಲವು ಯುವ ಜನತೆಯನ್ನು ಡ್ರಗ್ಸ್ ಜಾಲಕ್ಕೆ ಸಿಲುಕಿಸಿದ್ದ. ಯಾವುದೇ ಉದ್ಯೋಗವಿಲ್ಲದೇ ಈತ ಗಾಂಜಾ ವ್ಯವಹಾರದ ಹಣದಲ್ಲೇ ಬದುಕುತಿದ್ದ ಎನ್ನುವ ಮಾಹಿತಿಗಳು ವಿವಿಧ ಮಾದ್ಯಮಗಳಲ್ಲಿ ಪ್ರಕಟವಾಗಿರುವುದನ್ನು ಪುತ್ತಿಲರು ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ . , ಈ ಕುಖ್ಯಾತ ಡ್ರಗ್ ಪೆಡ್ಲರ್ ಶಾರೂಕ್ ನನ್ನು ಶೀಘ್ರ ಬಂಧಿಸಿ ಈತನ ಜಾಲದ ಹಿಂದಿನ ಕಾಣದ ಕೈಗಳನ್ನು ಬಂಧಿಸಬೇಕೆಂದು ಠಾಣಾಧಿಕಾರಿಗಳನ್ನು ಒತ್ತಾಯಿಸಿದರು.

Discover more from Coastal Times Kannada
Subscribe to get the latest posts sent to your email.







Discussion about this post