ಉಡುಪಿ, ಫೆ 25: ಉಡುಪಿ ಜಿಲ್ಲೆಯ ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟ್ ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮನ್ ಹಾರ್ಬರ್ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್ನಲ್ಲಿ ಮೂವರು ತಮಿಳುನಾಡು ಮೂಲದ ಮೀನುಗಾರರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಮಿಳುನಾಡು ನಿವಾಸಿಗಳೆನ್ನಲಾದ ಜೇಮ್ಸ್ ಫ್ರಾಂಕ್ಲಿನ್(50), ರಾಬಿನ್ ಸ್ಟನ್(50), ಡಿರೋಸ್ ಅಲೊ#àನ್ಸ್ (38) ಎಂದು ಗುರುತಿಸಲಾಗಿದೆ. ಆರೋಪಿಗಳಿಗೆ ಫೆ. 27ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದ ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.
ಫೆ. 17ರಂದು ಒಮಾನ್ ದೇಶದ ದುಕಮ್ ಮೀನುಗಾರಿಕಾ ಬಂದರಿನಿಂದ ಹೊರಟ ಈ ಬೋಟ್ ಕಾರವಾರ ಮೂಲಕ ಮಲ್ಪೆ ಸೈಂಟ್ ಮೇರಿಸ್ ದ್ವೀಪದ ಕಡೆಗೆ ಬರುತ್ತಿತ್ತು. ಈ ಬಗ್ಗೆ ಮಲ್ಪೆಯ ಕರಾವಳಿ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯ ಮೇರೆಗೆ ಮಲ್ಪೆ ಠಾಣೆಯ ಅಧಿಕಾರಿ ಹಾಗೂ ಸಿಬಂದಿ ಫೆ. 23ರಂದು ಸೈಂಟ್ ಮೇರಿಸ್ ದ್ವೀಪದ ಪರಿಸರದಲ್ಲಿ ತಪಾಸಣೆ ನಡೆಸಿ, ಮಂಗಳೂರು ಕೋಸ್ಟ್‌ಗಾರ್ಡ್ ಅಧಿಕಾರಿ ಹಾಗೂ ಸಿಬಂದಿಯ ಸಹಕಾರದೊಂದಿಗೆ ಬೋಟನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಓಮನ್ ಮೂಲದ ಬೋಟಿನಲ್ಲಿ ಮೀನುಗಾರಿಕಾ ಕೆಲಸ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಡಕ್ಕೆ ವೇತನ, ಆಹಾರ ನೀಡದೆ ಸತಾಯಿಸುತ್ತಿದ್ದ ಓಮನ್ ಬೋಟ್ ಮಾಲಕ ಪಾಸ್‌ಪೋರ್ಟ್ ವಶಕ್ಕೆ ಪಡೆದಿದ್ದ. ಮಾತ್ರವಲ್ಲದೆ ಬೋಟ್ ಮಾಲಕ ನೀಡುತ್ತಿರುವ ಚಿತ್ರಹಿಂಸೆ, ಪ್ರಾಣಭಯದಿಂದ ಓಮನ್ ಹಾರ್ಬರ್ ನಿಂದ ತಪ್ಪಿಸಿಕೊಂಡು ಬಂದಿದ್ದ ಮೀನುಗಾರರು ಸಮುದ್ರ ಮಾರ್ಗದಲ್ಲಿ 4 ಸಾವಿರ ಕಿ.ಮೀ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಅದರಲ್ಲಿದ್ದವರು ಪರದಾಡಿದ್ದಾರೆ. ಬಳಿಕ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರಿಗೆ ವಿದೇಶಿ ಬೋಟ್ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳೀಯ ಮೀನುಗಾರರು ನೀಡಿದ ಮಾಹಿತಿಯ ಮೇರೆಗೆ ಮಾಹಿತಿಯಿಂದ ಬೋಟ್ ಹಾಗೂ ಮೀನುಗಾರರನ್ನ ವಶಕ್ಕೆ ಪಡೆದ ಅಮರ್ಥ್ಯ ಕೋಸ್ಟ್ ಗಾರ್ಡ್ ಪರಿಶೀಲನೆ ನಡೆಸುತ್ತಿದೆ, ಕೋಸ್ಟ್ ಗಾರ್ಡ್ ಶಿಪ್ ಸದ್ಯ ವಿದೇಶಿ ಹಡಗು ಹಾಗೂ ಮೀನುಗಾರರ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಪಾಸ್ ಪೋರ್ಟ್ ಇಲ್ಲದೆ ವಿದೇಶಿ ಹಡಗಿನಲ್ಲಿ ಗಡಿ ದಾಟಿದ ಹಿನ್ನಲೆ ಪ್ರಕರಣ ದಾಖಲಿಸಲಾಗಿದೆ.
ಕೋಸ್ಟ್‌ಗಾರ್ಡ್‌ನವರು ಮಂಗಳೂರು ಸಿಎಸ್‌ಪಿ ಅವರಿಗೆ ಬೋಟ್ ಅನ್ನು ಹಸ್ತಾಂತರಿಸಿದ್ದು ಇದೀಗ ಬೋಟು ಮಂಗಳೂರು ಹಳೆ ಬಂದರಿನಲ್ಲಿ ಇರಿಸಲಾಗಿದೆ. ಪ್ರಧಾನ ಕೋಸ್ಟ್ ಗಾರ್ಡ್ ಅಧಿಕಾರಿ ಸುಖೀಂದರ್ ಸಿಂಗ್ ಲಿಖೀತ ದೂರು ನೀಡಿದ್ದು ಅದರಂತೆ ಮಲ್ಪೆ ಕರಾವಳಿ ಕವಾಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post