ಮಂಗಳೂರು, ಫೆ.26: ಅಮೆರಿಕನ್ ಕಮೊಡಿಟೀಸ್‌ನಲ್ಲಿ ಆನ್‌ಲೈನ್ ಮೂಲಕ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದು ಎಂದು ನಂಬಿಸಿ ಹಿರಿಯ ವ್ಯಕ್ತಿಗೆ 1.77 ಕೋಟಿ ರೂ. ವಂಚಿಸಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ವ್ಯಕ್ತಿಗೆ 2025ರ ಡಿಸೆಂಬರ್ 24ರಂದು ಯಾರೋ ಅಪರಿಚಿತರು +447902527164 ನೇ ನಂಬ್ರದಿಂದ ಕರೆ ಮಾಡಿದ್ದಾರೆ. ಈ ವೇಳೆ Shoib ghauri from Ventrade ನಿಂದ ಕರೆ ಮಾಡುವುದಾಗಿ ಹೇಳಿ ಆನ್ ಲೈನ್ ನಲ್ಲಿ ಅಮೆರಿಕನ್ ಷೇರಿನ ಮೇಲೆ ಇನ್ವೆಸ್ಟ್ ಮಾಡಿದರೆ ಅಧಿಕ ಲಾಭ ಬರುವುದಾಗಿ ತಿಳಿಸಿದ್ದಾರೆ. ಬಳಿಕ ಆನ್‌ಲೈನ್ ಅಮೆರಿಕನ್ ಕಮೊಡಿಟೀಸ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುವುದಾಗಿ ನಂಬಿಸಿದ್ದ. ನೀವು ಭಾರತೀಯ ರೂಪಾಯಿಯಲ್ಲಿ ನಮಗೆ ಹಣ ವರ್ಗಾಯಿಸಿದರೆ ನಾವು ಅದನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ಹೂಡಿಕೆ ಮಾಡುವುದಾಗಿ ತಿಳಿಸಿದ್ದ.
ನಂತರ ವೃದ್ದರ ಮೊಬೈಲ್ ಗೆ ಈ-ಮೇಲ್(shoaib.ghauri@ventratrade.com, aahan.shah@ventratrade.com), ವಾಟ್ಸಾಪ್ (+447902527164) ಹಾಗೂ ಫೋನ್ ಕರೆಯ (+447441930793, +447441958382) ಮೂಲಕ ಮಾತುಕತೆ ನಡೆಸಿದ್ದಾರೆ. ನಂಬಿಕೆ ಬರಲು ಮೊದಲು ಅಜ್ಜ ಹೂಡಿದ ಹಣಕ್ಕೆ ಸ್ವಲ್ಪಮಟ್ಟಿಗೆ ಲಾಭವನ್ನು ಹಿಂತಿರುಗಿಸಿದ್ದಾರೆ. ಇದನ್ನು ನಂಬಿದ ವ್ಯಕ್ತಿ ಹೆಚ್ಚಿನ ಲಾಭ ಪಡೆಯುವ ಉದ್ದೇಶದಿಂದ ಅವರು ಹೇಳಿದ್ದನ್ನು ನಂಬಿದ್ದು ಜನವರಿ 05ರಿಂದ ಫೆ.2ರ ವರೆಗೆ ಅವರೇ ತಿಳಿಸಿದ ಬ್ಯಾಂಕ್ ಖಾತೆಗಳಿಗೆ RTGS & NEFT& IMPS ಮೂಲಕ ಒಟ್ಟು 1,77,64,668.22/- ಹಣವನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post