ಹೈದರಾಬಾದ್, ಮಾ27: ಹೈದರಾಬಾದ್ ನ್ಯಾಯಾಲಯವು ಬುಧವಾರ 2023ರ ಜೂನ್‌ನಲ್ಲಿ ತನ್ನ ಪ್ರೇಯಸಿಯಾದ ಕಿರುತೆರೆ ನಟಿಯನ್ನು ಕೊಂದಿದ್ದಕ್ಕಾಗಿ 36 ವರ್ಷದ ಅರ್ಚಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು 10 ಲಕ್ಷ ರೂ. ದಂಡ ವಿಧಿಸಿತು. ಅರ್ಚಕ ವೆಂಕಟ ಸಾಯಿ ಸೂರ್ಯ ಕೃಷ್ಣನಿಗೆ 2023ರಲ್ಲಿ ತಾನು ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆಯ ಕೊಲೆಗಾಗಿ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ಹಾಳು ಮಾಡಿದ್ದಕ್ಕಾಗಿ ನ್ಯಾಯಾಲಯವು ಹೆಚ್ಚುವರಿಯಾಗಿ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಸಾಯಿಕೃಷ್ಣ ನಿಗೆ ಮೊದಲೇ ಮದುವೆಯಾಗಿತ್ತು ಆದರೂ ಸರೂರ್‌ನಗರ ನಿವಾಸಿಯಾಗಿರುವ ಅಪ್ಸರಾ ಎಂಬಾಕೆಯ ಜೊತೆ ಪ್ರೀತಿ ಪ್ರೇಮದ ನಾಟಕವಾಡಿ ಆಕೆಯನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ, ಅಲ್ಲದೆ ಮದುವೆಯಾಗುವುದಾಗಿಯೂ ಆಕೆಗೆ ಮಾತು ಕೊಟ್ಟಿದ್ದ ಈ ನಂಬಿಕೆಯಲ್ಲಿ ಆತನ ಪ್ರೀತಿಗೆ ಬಿದ್ದಿದ್ದಳು ಇತ್ತ ದಿನ ಕಳೆದಂತೆ ಆಕೆ ಮದುವೆಯ ಪ್ರಸ್ತಾಪ ಮಾಡಲು ಶುರು ಮಾಡಿದ್ದಾಳೆ ಇದರಿಂದ ಕೋಪಗೊಂಡ ಆತ ಹೇಗಾದರೂ ಮಾಡಿ ಆಕೆಯನ್ನು ಕೊಲೆ ಮಾಡಬೇಕು ಎಂದು ಪ್ಲಾನ್ ಮಾಡಿದ್ದ, ಅದಕ್ಕೆ ಸರಿಯಾಗಿ ಆಕೆಗೆ ಕೊಯಮತ್ತೂರಿನಲ್ಲಿ ಕೆಲಸವಿದ್ದ ಕಾರಣ ಅಲ್ಲಿಗೆ ತೆರಳಬೇಕಿತ್ತು ಇದನ್ನೇ ಬಂಡವಾಳ ಮಾಡಿಕೊಂಡ ಸಾಯಿಕೃಷ್ಣ ಆಕೆಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವ ಪ್ಲಾನ್ ಮಾಡಿದ್ದಾನೆ. ಜೂನ್ 3, 2023 ರಂದು ಅಪ್ಸರ ಮನೆಯವರಿಗೆ ವಿಚಾರ ತಿಳಿಸಿ ಇಬ್ಬರೂ ರಾತ್ರಿ 8:15 ರ ಸುಮಾರಿಗೆ ಸರೂರ್‌ನಗರದಿಂದ ಕಾರಿನಲ್ಲಿ ಹೊರಟಿದ್ದಾರೆ ಇದಾದ ಬಳಿಕ ರಾತ್ರಿ 10 ಗಂಟೆಗೆ ಶಂಶಾಬಾದ್ ನಲ್ಲಿರುವ ರಾಲ್ಲಗುಡಾದ ಹೋಟೆಲ್‌ನಲ್ಲಿ ಊಟ ಮಾಡಿದ್ದಾರೆ ಈ ವೇಳೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ನಿಲ್ಲಿಸಿದ್ದಾರೆ ಈ ಸಮಯದಲ್ಲಿ ಸಾಯಿ ಕೃಷ್ಣ ಕಾರಿನಿಂದ ಇಳಿದು ರಸ್ತೆ ಪಕ್ಕದಲ್ಲಿದ್ದ ಕಲ್ಲೊಂದನ್ನು ತಂದು ಕಾರಿನಲ್ಲಿ ಇರಿಸಿದ್ದಾನೆ.
ಮತ್ತೆ ರಾತ್ರಿ ಪ್ರಯಾಣ ಮುಂದುವರೆಸಿ ಜೂನ್ 4 ರಂದು ಮುಂಜಾನೆ 3:50 ರ ಸುಮಾರಿಗೆ ನರ್ಕುಡ ಎಂಬ ನಿರ್ಜನ ಪ್ರದೇಶವನ್ನು ತಲುಪಿದ್ದಾರೆ ಈ ವೇಳೆ ಅಪ್ಸರಾ ಗಾಢ ನಿದ್ರೆಗೆ ಜಾರಿದ್ದು ಇದನ್ನು ಬಂಡವಾಳವಾಗಿ ಬಳಸಿ ಕಾರಿನ ಸೀಟ್ ಬೆಲ್ಟ್ ನಿಂದ ಅಪ್ಸರಾ ಕುತ್ತಿಗೆಗೆ ಬಿಗಿದು ಕಾರಿನೊಳಗಿಟ್ಟಿದ್ದ ಕಲ್ಲಿನಿಂದ ಅಪ್ಸರಾ ತಲೆಗೆ ಹೊಡೆದಿದ್ದಾನೆ ಈ ವೇಳೆ ಅಪ್ಸರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇದಾದ ಬಳಿಕ ಆಕೆಯ ಶವವನ್ನು ಬಟ್ಟೆಯಿಂದ ಸುತ್ತಿ ಸರೂರ್‌ನಗರದಲ್ಲಿರುವ ತನ್ನ ಮನೆಗೆ ಬಂದಿದ್ದಾನೆ ಎರಡು ದಿನಗಳ ಕಾಲ ಅಪ್ಸರಾ ಶವವನ್ನು ಕಾರಿನಲ್ಲೇ ಇಟ್ಟು ತನ್ನ ಕೆಲಸವನ್ನು ಮಾಡಿಕೊಂಡಿದ್ದ ಬಳಿಕ ಎರಡು ದಿನ ಬಿಟ್ಟು ಅಪ್ಸರಾ ಶವವನ್ನು ಕವರ್‌ನಲ್ಲಿ ಸುತ್ತಿ ಸರೂರ್‌ನಗರದ ಬಂಗಾರು ಮೈಸಮ್ಮ ದೇವಸ್ಥಾನದ ಬಳಿಯ ಮ್ಯಾನ್‌ಹೋಲ್‌ಗೆ ಎಸೆದಿದ್ದಾನೆ ಇದಾದ ಬಳಿಕ ಎಲ್ಲಿ ಶವ ಕೊಳೆತು ದುರ್ನಾತ ಬೀರುತ್ತದೆ ಎಂದು ಭಾವಿಸಿ ಲಾರಿಯಲ್ಲಿ ಮಣ್ಣು ತಂದು ಮ್ಯಾನ್ ಹೋಲ್ ಗೆ ತುಂಬಿಸಿ ಸಿಮೆಂಟ್ ಹಾಕಿ ಮುಚ್ಚಿಸಿದ್ದ ನಂತರ ತಾನೇ ಹೋಗಿ ಆಕೆ ಕಾಣೆಯಾಗಿದ್ದಾಳೆಂದು ದೂರು ದಾಖಲಿಸಿದನು.
ಅನುಮಾನದಿಂದ ತಪ್ಪಿಸಿಕೊಳ್ಳುವ ಆಶಯದೊಂದಿಗೆ ಸಾಯಿ ಕೃಷ್ಣ ದಿನಚರಿ ಮುಂದುವರಿಸಿದನು. ಆದರೆ, ಕಾಣೆಯಾದ ವ್ಯಕ್ತಿಯ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರು ಅಂತಿಮವಾಗಿ ಆಕೆ ಕೊಲೆಯಾಗಿದ್ದಾಳೆಂಬುದಕ್ಕೆ ಸಾಕ್ಷಿಗಳನ್ನು ಪತ್ತೆಹಚ್ಚಿದರು. ಸಾಯಿ ಕೃಷ್ಣ ಅಪರಾಧವನ್ನು ಹೇಗೆ ನಡೆಸುವುದು ಮತ್ತು ಶವವನ್ನು ಹೇಗೆ ವಿಲೇವಾರಿ ಮಾಡುವುದು ಎಂಬುದರ ಕುರಿತು ಗೂಗಲ್‌ನಲ್ಲಿ ಹುಡುಕಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಪೊಲೀಸರು ಸಾಯಿ ಕೃಷ್ಣನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಪೂರ್ವಯೋಜಿತ ಕೊಲೆ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸಿದ್ದಕ್ಕಾಗಿ ನ್ಯಾಯಾಲಯವು ಬಲವಾದ ಪುರಾವೆಗಳನ್ನು ಕಂಡುಕೊಂಡಿತು. ಇದು ಬುಧವಾರದ ಜೀವಾವಧಿ ಶಿಕ್ಷೆಗೆ ಕಾರಣವಾಯಿತು.
Discover more from Coastal Times Kannada
Subscribe to get the latest posts sent to your email.
Discussion about this post