ಮಂಗಳೂರು, ಆಗಸ್ಟ್ 26: ರೋಹನ್ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಆತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ *ರೋಹನ್ ಸಿಟಿ’ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಈ ಸಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಸಮಾಜದ ಆಯ್ದ ಸೇವಾ ನಿರತ ವ್ಯಕ್ತಿಗಳಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಶಿಕ್ಷಕರು, ಪೊಲೀಸರು, ಯೋಧರು ಮತ್ತು ಪತ್ರಕರ್ತರಿಗೆ ಫ್ಲಾಟುಗಳ ಬೆಲೆಗಳ ಮೇಲೆ ಶೇಕಡಾ 10% ರ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಈ ಯೋಜನೆಯು ಸಪ್ಟೆಂಬರ್ 01ರಂದು ಆರಂಭಗೊಂಡು, ಸೀಮಿತ ಅವಧಿಯವರೆಗೆ ಮಾತ್ರ ಇರುವುದು ಎಂದು ರೋಹನ್ ಕಾರ್ಪೊರೇಶನ್ ಸಂಸ್ಥೆಯ ಮುಖ್ಯಸ್ಥ ರೋಹನ್ ಮೊಂತೇರೊ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
‘ರೋಹನ್ ಸಿಟಿ’ ಇದುವರೆಗಿನ ರೋಹನ್ ಕಾರ್ಪೊರೇಶನ್ ಇದರ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್,6 ಬಿಎಚ್‌ಕೆ, 4 ಬಿಎಚ್‌ಕೆ, 1405 ರಿಂದ 1900 ಚದರ ಅಡಿ 3 ಬಿಎಚ್‌ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‌ಕೆ ಮತ್ತು 700 ರಿಂದ 815 ಚದರ ಅಡಿ 1 ಬಿಎಚ್‌ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ.
ವಸತಿ ಪ್ರದೇಶದ ಜತೆಗೆ,284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆ ಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ.
ಮಂಗಳೂರು ನಗರದಲ್ಲಿಯೇ ಸುರಕ್ಷೆಗೆ ಹಾಗೂ ಎಲ್ಲಾ ಅನುಕೂಲಗಳಿಗೆ ಹೆಸರಾದ ಪ್ರದೇಶ ಬಿಜೈ. ಹಲವಾರು ದೇವಸ್ಥಾನಗಳಿಗೆ, ಪ್ರಖ್ಯಾತ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್, ಕದ್ರಿ ಪಾರ್ಕ್, ಕರ್ನಾಟಕ ಪಾಲಿಟೆಕ್ನಿಕ್‌ಗೆ ಇದು ನೆಲೆವೀಡು. ನಗರದ ಹೃದಯ ಭಾಗದಲ್ಲಿದ್ದರೂ ಸ್ವಚ್ಛ ಪರಿಸರ, ಶಾಂತ ವಾತಾವರಣಕ್ಕೆ ಇನ್ನೊಂದು ಹೆಸರು ಬಿಜೈ. ವಿವಿಧ ಧರ್ಮಗಳ ಜನರು ಇಲ್ಲಿ ಅನ್ಯೋನ್ಯವಾಗಿ ಭ್ರಾತೃತ್ವದಿಂದ ಬದುಕುತ್ತಿರುವ ಬಿಜೈ, ಕಲೆ, ಸಂಸ್ಕೃತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಸೈಂಟ್ ಅಲೋಶಿಯಸ್ ಕಾಲೇಜು, ಲೂರ್ಡ್ಸ್ ಸೆಂಟ್ರಲ್ ಸ್ಕೂಲ್, ಎಸ್.ಡಿ.ಎಮ್ ಲಾ ಕಾಲೇಜು, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಕಾಲ್ನಡಿಗೆಯ ದೂರದಲ್ಲಿವೆ. ತುರ್ತು ಅಗತ್ಯದ ಕಾಲಕ್ಕೆ ಹಲವಾರು ಆಸ್ಪತ್ರೆಗಳು ಹತ್ತಿರದಲ್ಲಿವೆ. ವಿಮಾನ ನಿಲ್ದಾಣ 10 ಕಿಮೀ ದೂರದಲ್ಲಿದ್ದು ಉತ್ತಮ ರಸ್ತೆ ಸಂಪರ್ಕ ಹೊಂದಿದೆ. ಈ ಯೋಜನೆಗೆ ಎಲ್ಲಾ ಆಧುನಿಕ ಸವಲತ್ತುಗಳನ್ನು ಸಜ್ಜುಗೊಳಿಸಲಾಗಿದೆ. ಕಣ್ಗಾವಲು ಮತ್ತು ರಕ್ಷಣಾ ವ್ಯವಸ್ಥೆ, ನಿರಂತರ ಕುಡಿಯುವ ನೀರು ಮತ್ತು ವಿದ್ಯುತ್, ವಿಶಾಲ ಪಾರ್ಕಿಂಗ್, ಗಾರ್ಡನ್‌ಗಳು ಹಾಗೂ ವಾಕಿಂಗ್‌ಟ್ರ‍್ಯಾಕ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಲಾಭದಾಯಕ ವ್ಯಾಪಾರದ ಬೆಳವಣಿಗೆಗೆ ಪೂರಕವಾದ ವಾಣಿಜ್ಯ ಮಳಿಗೆಗಳನ್ನು ಹೊಂದಿದೆ.
ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು:
2 ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ
ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ
ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ
ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಸುರಿ ಸೌಲಭ್ಯಗಳು
ಪ್ರಮುಖ ನ್ಯಾಶನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ
ತ್ವರಿತ ಸಾಲ ಸೌಲಭ್ಯ ಸೇವೆ ಡೀಸೆಲ್ ಜನರೇಟರ್‌ಗಳೊಂದಿಗೆ 100% ಪವರ್ ಬ್ಯಾಕಪ್
ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ
ಅತ್ಯಾಧುನಿಕ ಭದ್ರತಾ ವ್ಯವಸ್ಥೆ
ಎಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ
ಹಸಿರುವನ, ಉದ್ಯಾನವನ, ಘನ ತ್ಯಾಜ್ಯ ಸಂಸ್ಕರಣಾ ಘಟಕ, ಸೌರ ಶಕ್ತಿ ಸಂಗ್ರಹ ಘಟಕ
ಲೈಟಿಂಗ್ ಆಟೊಮೇಷನ್ (ಮಂಗಳೂರಿನಲ್ಲಿ ಮೊದಲ ಬಾರಿಗೆ)
ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ನ ವಿಶೇಷತೆಗಳು:
ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ
ಫ್ಯಾಮಿಲಿ ರೆಸ್ಟೋರೆಂಟ್, ಕಾಫಿ ಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್ ಬಾಲ್ ಕೋರ್ಟ್, ಬಾಡ್ಮಿಂಟನ್ ಕೋರ್ಟ್
ವಿಡಿಯೋ ಗೇಮ್ಸ್ ವಲಯ, ಸುಸಜ್ಜಿತ ಜಿಮ್ ಸ್ಪಾ, ಯುನಿಸೆಕ್ಸ್ ಸಲೂನ್
ಆರ್ಯುವೇದಿಕ್ ವೆಲ್‌ನೆಸ್ ಸೆಂಟರ್, 3ಡಿ ಥಿಯೇಟರ್, ಮಲ್ಟಿ-ಪರ್ಪಸ್ ಹಾಲ್ ಸ್ವಿಮ್ಮಿಂಗ್ ಪೂಲ್, ಜಾಗಿಂಗ್ ಟ್ರ‍್ಯಾಕ್, ಸೀನಿಯರ್ ಸಿಟಿಜನ್ ಪಾರ್ಕ್, ಚಿಣ್ಣರ ಆಟದ ವಲಯ, ಸುಸಜ್ಜಿತ ಗ್ರಂಥಾಲಯ, ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845490100 / 9045607725 / 9045607724 / 9036392627 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಂತರ್‌ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post