ಮಂಗಳೂರು : ಫ್ಯಾಷನ್ ರನ್ ವೇ ಇಂಟರ್ ನ್ಯಾಷನಲ್ ವತಿಯಿಂದ ವಿಯೇಟ್ನಾಂನಲ್ಲಿ ಆ.13-17 ರ ವರಗೆ ಆಯೋಜಿಸಲ್ಪಟ್ಟ ಅಂತಾರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಮಂಗಳೂರಿನ ಕುಲಶೇಖರದ 8 ವರ್ಷ ದ ಬಾಲಪ್ರತಿಭೆ ರುಶಭ್ ರಾವ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
ರುಶಭ್ ರಾವ್ ಅವರು ಸ್ಪರ್ಧೆಯ ಪ್ರಿನ್ಸ್ ಕೆಟಗರಿಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಸೂಪರ್ ಟ್ಯಾಲೆಂಟ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಮೇ ತಿಂಗಳಲ್ಲಿ ಗೋವಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಇಂಟರ್ ನ್ಯಾಷನಲ್ ಮೋಡೆಲ್ ಫ್ಯಾಷನ್ ಶೋ ಕಾಂಪಿಟೀಶನ್ ನಲ್ಲಿ ಪ್ರಿನ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು.
ಮಂಗಳೂರು ಕುಲಶೇಖರ ಮೂಲದ, 8 ವರ್ಷದ ಬಾಲಪ್ರತಿಭೆ ರುಶಭ್ ರಾವ್, ಅಂತರಾಷ್ಟ್ರೀಯ ಫ್ಯಾಷನ್ ಮತ್ತು ಪ್ರತಿಭಾ ವೇದಿಕೆಯಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದಾನೆ. ಬಿಜೈಯ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿರುವ ಈ ಬಾಲಕ ತನ್ನ ಕಿರಿಯ ವಯಸ್ಸಿನಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾನೆ. 4ನೇ ವಯಸ್ಸಿನಲ್ಲೇ ನೃತ್ಯವನ್ನು ಕಲಿಯಲು ಪ್ರಾರಂಭಿಸಿದ ರುಶಭ್, ಆರ್ಯನ್ಸ್ ಡ್ಯಾನ್ಸ್ ಸ್ಟುಡಿಯೋಗೆ ಸೇರಿ ನವೀನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದ.
Discover more from Coastal Times Kannada
Subscribe to get the latest posts sent to your email.
Discussion about this post