ಉಳ್ಳಾಲ : ಸೋಮೇಶ್ವರ ಉಚ್ಚಿಲದಲ್ಲಿ ಕಿಯಾಝ ಗಾರ್ಡನ್ ಕಾಮಗಾರಿಯನ್ನು ಧಾರ್ಮಿಕ ಮುಂದಾಳು ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು, ಬಳಿಕ ಮಾತನಾಡಿದವರು ದೊಡ್ಡ ಯೋಜನೆ ಅನುಷ್ಠಾನಗೊಳಿಸಲು ಎಲ್ಲರನ್ನು ಒಗ್ಗೂಡಿಸುವುದು ಪ್ರಕೃತಿ ನಿಯಮ. ಉಚ್ಚಿಲದಲ್ಲಿ ನಿರ್ಮಾಣಗೊಳ್ಳಲಿರುವ ಕೆಯಿಯಾಂಞ ವೆಂಚರ್ಸ್ ಪ್ರೈ.ಲಿ ಇದರ ಕೆಯಿಯಾಂಙ ಗಾರ್ಡನ್ ಯೋಜನೆ ವಿಶ್ವಕ್ಕೆ ತಲುಪುವಂತಾಗಲಿ ಎಂದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ , ಯೋಜನೆ ಅಧ್ಯಕ್ಷರಾಗಿರುವ ಕರೀಂ ಬದ್ಧತೆಯ ಜತೆಗೆ ಯೋಜನೆಯನ್ನು ರೂಪಿಸಿದ್ದಾರೆ. ಎಲ್ಲರೂ ಅವರೊಂದಿಗೆ ಕೈಗೂಡಿಸುವಲ್ಲಿ ಯಶಸ್ವಿಯಾಗುವಿರಿ ಎಂದರು.
ಹೈಕೋರ್ಟ್ ವಕೀಲರಾದ ಮುಝಾಫರ್ ಮಾತನಾಡಿ, ಈ ಭಾಗದಲ್ಲಿ 2000 ದ ದಶಕದಲ್ಲಿ ಹುಟ್ಟಿದ ವ್ಯಕ್ತಿ ಉಚ್ಚಿಲ ಪ್ರದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವುದು ಶ್ಲಾಘನೀಯ. ಈವರೆಗೂ ಎಲ್ಲರೂ ವಿದೇಶ ಹೋಗಿ ಕೆಲಸವನ್ನು ಮಾಡಿಕೊಂಡು ಬದುಕುವವರು. ಆದರೆ ಇದೀಗ ಬದಲಾವಣೆಯಾಗಿದೆ. ತಂತ್ರಿಯವರ ಆಶಿರ್ವಾದದ ಜತೆಗೆ ಯೋಜಕರಿಗೆ ಸಹಕಾರ, ಹುರಿದುಂಬಿಸುವ ಕೆಲಸ ಎಲ್ಲರಿಂದ ಆಗಲಿ ಎಂದರು.
ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್ ಶುಭಹಾರೈಸಿದರು. ಶಾಸಕ ಯು.ಟಿ ಖಾದರ್ ಕಿಯಾಂಝ ವೆಂಚರ್ ಕುರಿತ ಬುಕ್ಲೆಟ್ ಅನ್ನು ಬಿಡುಗಡೆಗೊಳಿಸಿದರು.
ಯೋಜನೆ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ , ಕೆ-ಇನೋವೇಷನ್ ಪ್ರಾಜೆಕ್ಟ್ ನಡಿ ಕೆಯಿಯಾಂಝ ಕಮರ್ಷಿಯಲ್ ಸೆಂಟರ್, ಅಡ್ವೆಂಚರ್ಸ್, ಕಿಂಡರ್ ಗಾರ್ಡನ್ ಹಾಗೂ ವಾಟರ್ ಪಾರ್ಕ್, ಓಪನ್ ಗಾರ್ಡನ್, ಸ್ಪೋರ್ಟ್ ಸಿಟಿ, ಅಕ್ವೇರಿಯಂ, ವಿಲ್ಲಾಸ್, ಪೂಲ್ ಹೌಸ್, ಪ್ಯಾಲೇಸ್, ಹಾಗ್ ಸ್ಟ್ರೀಟ್, ಏವಿಯರೀಸ್, ಪಿಟ್ಸ್ಟಾಪ್, ಫಿಟ್ನೆಸ್ ಸೆಂಟರ್, ಹೆಲಿಪ್ಯಾಡ್, ಆಯುರ್ವೇದ ಸೆಂಟರ್, ಉಚ್ಚಿಲ ಹಲವು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ . ಸಂಸ್ಥೆಯ ಎಲ್ಲಾ ಷೇರುದಾರರ ಸಹಕಾರದ ಜೊತೆಗೆ ದೇಶದ ಜನತೆಗೆ ಆಕರ್ಷಿಸುವ ಯೋಜನೆ ಉಚ್ಚಿಲದಲ್ಲಿ ನಿರ್ಮಾಣವಾಗಲಿದೆ ಎಂದರು.
ಈ ವೇಳೆ ಹಿರಿಯರಾದ ಅಬ್ದುಲ್ ರಹಿಮಾನ್, ಉಳ್ಳಾಲ ಠಾಣಾಧಿಕಾರಿ ಸಂದೀಪ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್, ಜನಾಬ್ ಅಹಮ್ಮದ್ ಬಾವಾ, ಶ್ರೀ ದೂಮಾವತಿ ಕ್ಷೇತ್ರದ ಅಧ್ಯಕ್ಷ ರಾಘವ ಉಚ್ಚಿಲ್ , ಸೌದಿ ಅರೆಬಿಯಾದ ಸರ್ಫರಾಜ್ ನವಾಝ್, ಉದ್ಯಮಿ ಹರ್ಷಾದ್ , ಉಚ್ಚಿಲ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಕರೀಂ ಮುಂತಾದವರು ಉಪಸ್ಥಿತರಿದ್ದರು. ಸಾಹಿಲ್ ಸಾಹೇಬ್ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post