ಮಂಗಳೂರು : ಹಗಲು ರಾತ್ರಿ ನಿದ್ದೆ ಇಲ್ಲದೆ, ಸತತ 7 ದಿನಗಳ ಕಾಲ ಭರತನಾಟ್ಯ ಪ್ರದರ್ಶನ ನೀಡಿದ ರೆಮೋನ ಪಿರೇರಾಗೆ ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ʼಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼನ ಪ್ರಮಾಣ ಪತ್ರವನ್ನು ಭಾರತದ ಪ್ರಮುಖರಾದ ಡಾ.ಮನೀಷ್ ವಿಶ್ನೋಯಿ ಸೋಮವಾರ ಹಸ್ತಾಂತರಿಸಿದರು.
ಜು. 21ರಂದು ಬೆಳಗ್ಗೆ 10.30ರಿಂದ ಸಂತ ಅಲೋಶಿಯಸ್ ಕಾಲೇಜಿನ ರಾಬರ್ಟ್ ಸಿಕ್ವೆರಾ ಹಾಲ್‌ನಲ್ಲಿ ಭರತನಾಟ್ಯ ಪ್ರದರ್ಶನ ಆರಂಭಿಸಿದ್ದ ರೆಮೋನಾ ಅವರು ಜು. 28ರ ವರೆಗೆ ನಿರಂತರವಾಗಿ ನಾಟ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯದ ವಿವಿಧ ಪ್ರಕಾರಗಳಾದ ಅಲೆರಿಪ್ಪು, ಜತಿಸ್ವರಂ, ಶಬ್ದಂ, ವರ್ಣಂ, ಪದಂ, ತಿಲ್ಲಾನಗಳ ಜತೆಗೆ ಸೆಮಿಕ್ಲಾಸಿಕ್, ದೇವರ ನಾಮಗಳಿಗೆ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. 61 ಪದ್ಯವನ್ನು 3 ಗಂಟೆಗಳಿಗೊಂದರಂತೆ ಜೋಡಿಸಲಾಗುತಿತ್ತು.
ಲಾತೂರ್‌ನ 16 ವರ್ಷದ ಸುಧೀರ್ ಜಗಪತ್ ಅವರು 2023ರಲ್ಲಿ 127 ಗಂಟೆಗಳ ಕಾಲ ನಿರಂತರ ನೃತ್ಯ ಪ್ರದರ್ಶನ ನೀಡಿರುವುದು ಈವರೆಗಿನ ದಾಖಲೆ. ರೆಮೋನಾ ಪಿರೇರಾ ಅವರು ಈ ದಾಖಲೆಯನ್ನು ಜು.26 ರ ಸಂಜೆಯೇ ಮುರಿದಿದ್ದು ಸೋಮವಾರ ಮಧ್ಯಾಹ್ನದವರೆಗೆ ಭರತನಾಟ್ಯ ಪ್ರದರ್ಶನವನ್ನು ಮುಂದುವರೆಸಿದ್ದರು. ಪ್ರತೀ 3 ಗಂಟೆಗೆ 15 ನಿಮಿಷ ಮಾತ್ರ ಬಿಡುವು ಇರುತ್ತಿತ್ತು. ರೆಮೋನಾ ಅವರ ಸಾಧನೆಗೆ ಜನಪ್ರತಿನಿಧಿಗಳು ಸೇರಿದಂತೆ ಗಣ್ಯರು, ಸಾರ್ವಜನಿಕರು ಅಭಿನಂದಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post