• About us
  • Contact us
  • Disclaimer
Wednesday, March 4, 2026
  • Login
Coastal Times Kannada
No Result
View All Result
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
Join to Group
  • Home
    • ಗ್ಯಾಜೆಟ್
  • ರಾಜ್ಯ
  • ರಾಷ್ಟ್ರೀಯ
  • ರಾಜಕೀಯ
  • ವಿದೇಶಿ ಸುದ್ದಿ
  • ಕರಾವಳಿ
  • ಕ್ರೈಂ ನ್ಯೂಸ್
  • ಕ್ರೀಡೆ
  • ಸಿನಿಮಾ
  • ಆರೋಗ್ಯ
  • ವೆಬ್ ಸ್ಟೊರೀಸ್
No Result
View All Result
Coastal Times Kannada
No Result
View All Result

2 ವರ್ಷದಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು : ಆಸೆ ಪೂರೈಸಿದ ಮುಸ್ಲಿಂ ಮಹಿಳೆ

Coastal Times by Coastal Times
August 28, 2022
in ರಾಷ್ಟ್ರೀಯ ಸುದ್ದಿ
2 ವರ್ಷದಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು : ಆಸೆ ಪೂರೈಸಿದ ಮುಸ್ಲಿಂ ಮಹಿಳೆ
180
VIEWS
WhatsappTelegramShare on FacebookShare on Twitter

 ತಮಿಳುನಾಡು : ಮಾನವೀಯತೆಗೆ ಧರ್ಮ ಅಥವಾ ಜಾತಿ ಯಾವುದೂ ಬೇಡ. ಒಂದೆಡೆ ಧಾರ್ಮಿಕವಾಗಿ ಜಗಳಗಳು ಹೆಚ್ಚಾಗುತ್ತಿರುವ ಈ ಸನ್ನಿವೇಶದಲ್ಲಿ ಇಂತಹ ಘಟನೆಗೆ ಪಾಠ ಹೇಳುವ ವಿಶೇಷ ಮಾನವೀಯ ಘಟನೆಯೊಂದು ಜರುಗಿದೆ. ವಿದೇಶದಲ್ಲಿ ಎರಡು ವರ್ಷಗಳಿಂದ ಹಾಗೆ ಇದ್ದ ತಂದೆಯ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಪುತ್ರರು ಕೊನೆಗೂ ಸ್ಪರ್ಶಿಸಿದ್ದಾರೆ. ಇದಕ್ಕೆ ಕಾರಣವಾದದ್ದು, ಮುಸ್ಲಿಂ ಹೆಣ್ಣುಮಗಳು. ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಮಕ್ಕಳು ಕೊನೆಗೂ ಅದಕ್ಕೆ ನಮಸ್ಕರಿಸಿದ್ದಾರೆ. ಈ ಘಟನೆ ಅರುಮಣೈ ಸಮೀಪದ ಕುಳಿಚಲ್ ಗ್ರಾಮದಲ್ಲಿ ನಡೆದಿದೆ. ಬುಕ್ಲಿನ್ ರಿಕ್ಕಿ (22), ಅಕ್ಲಿನ್ ರಘುಲ್ (20) ಎಂಬ ಇಬ್ಬರು ಯುವಕರು ಸಾವಿಗೀಡಾದ ರಾಜಕುಮಾರ್ ಅವರ ಮಕ್ಕಳು. ರಾಜುಕುಮಾರ್ ಅವರ ಪತ್ನಿ ಲತಾ ಅವರು 2012 ರಲ್ಲಿ ರಸ್ತೆ ಅಪಘಾತದಿಂದ ನಿಧನರಾಗಿದ್ದರು. ಇದಾದ ನಂತರ ರಾಜ್‌ಕುಮಾರ್ ತಮ್ಮ ಕೆಲಸದ ನಿಮಿತ್ತ ಯುಎಇಗೆ ಹೋಗಿದ್ದರು. 2020 ರಲ್ಲಿ ಯುಎಇಯಲ್ಲಿ ಕೊರೊನಾದಿಂದಾಗಿ ಅಲ್ಲೇ ಸಾವಿಗೀಡಾಗಿದ್ದಾರೆ. ಸೋಂಕಿಗೆ ಒಳಗಾದ ಮೃತದೇಹವನ್ನು ವಿದೇಶದಿಂದ ತರಲು ನಿರ್ಬಂಧವಿದ್ದ ಕಾರಣ, ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯನ್ನು ಯುಎಇಯಲ್ಲಿಯೇ ನೆರವೇರಿಸಲಾಗಿತ್ತು.

ಚಿತಾಭಸ್ಮವಷ್ಟೇ ನೆನಪು: ರಾಜ್‌ಕುಮಾರ್ ಅವರ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅಜ್ಮಾನ್‌ನ ಕಲಿಫಾ ಆಸ್ಪತ್ರೆಯಲ್ಲಿ ಸುರಕ್ಷಿತವಾಗಿ ಇರಿಸಲಾಗಿತ್ತು. ಕೊನೆಯ ಕ್ಷಣದಲ್ಲಿ ತಂದೆಯ ಮುಖವನ್ನೂ ನೋಡದ ಮಕ್ಕಳು ತಮ್ಮ ತಂದೆಯ ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅಲ್ಲಿಂದ ಹೇಗಾದರೂ ಮಾಡಿ ತರಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೆ, ದುರದೃಷ್ಟವಶಾತ್ ಅವರಿಗೆ ಏನೂ ದೋಚಿರಲಿಲ್ಲ. ಕೊನೆಯದಾಗಿ ಅವರು ವಾಟ್ಸ್ ಆಪ್ ಗ್ರೂಪ್‌ನಲ್ಲಿ ಈ ಸಂಬಂಧ ಮಾಹಿತಿ ಹಂಚಿದರು. ಇದರಲ್ಲಿ ಅವರು ಕೇರಳದ ಕೊಟ್ಟಾಯಂಗೆ ಸೇರಿದ ಸಿಜೋ ಎಂಬ ವ್ಯಕ್ತಿಯಿಂದ ಸಹಾಯ ಪಡೆದರು. ತಂದೆಯನ್ನು ಕಳೆದುಕೊಂಡ ಈ ಇಬ್ಬರು ಮಕ್ಕಳಿಗೆ ಸಹಾಯ ಮಾಡಲು ಮುಂದೆ ಬಂದು ತಂದೆಯ ಚಿತಾಭಸ್ಮವನ್ನು ಆಸ್ಪತ್ರೆಯಿಂದ ಸ್ವೀಕರಿಸಿ ಅದನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು.

ಮುಂದೆ ಬಂದ ಮುಸ್ಲಿಂ ಮಹಿಳೆ: ಸಿಜೋ ಅವರು ಅಂತ್ಯಕ್ರಿಯೆಯ ಚಿತಾಭಸ್ಮವನ್ನು ಅನೇಕ ಜನರ ಮೂಲಕ ತಲುಪಿಸಲು ಪ್ರಯತ್ನಿಸಿದರಾದರೂ ಭಾರತಕ್ಕೆ ಯಾರೂ ಅದನ್ನು ತರಲು ಮುಂದಾಗಲಿಲ್ಲ. ಆದರೆ, ಕೊನೆಗೆ ಕೋಜಿಕೋಡಿನ ತಾಹಿರಾ ಎಂಬ ಮುಸ್ಲಿಂ ಮಹಿಳೆ ಈ ಮಾನವೀಯ ಕೆಲಸ ಮಾಡಿದ್ದಾರೆ. ಚಿತಾಭಸ್ಮಕ್ಕಾಗಿ ಹಂಬಲಿಸುತ್ತಿದ್ದ ಪುತ್ರರಿಗೆ ಈ ಮೂಲಕ ಸಹಾಯ ಮಾಡಿದ್ದಾರೆ. 2 ವರ್ಷಗಳಿಂದ ತಂದೆಯ ಚಿತಾಭಸ್ಮಕ್ಕಾಗಿ ಕಾಯುತ್ತಿದ್ದ ಪುತ್ರರು ಅಂತಿಮವಾಗಿ ಅದನ್ನು ಕಣ್ಣಿಗೊತ್ತಿಕೊಂಡಿದ್ದಾರೆ.

Share this:

  • Share on Facebook (Opens in new window) Facebook
  • Share on X (Opens in new window) X

Like this:

Like Loading...

Related

Discover more from Coastal Times Kannada

Subscribe to get the latest posts sent to your email.

Previous Post

ಪೂರ್ವ ನಿಗದಿಯಂತೆ ನೋಯ್ಡಾದ ಸೂಪರ್‌ಟೆಕ್‌ ಅವಳಿ ಕಟ್ಟಡ ನೆಲಸಮ : ವಿಡಿಯೊ ನೋಡಿ

Next Post

ಏಷ್ಯಾ ಕಪ್‌: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ಭಾರತಕ್ಕೆ ರೋಚಕ ಜಯ

Related Posts

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ
ರಾಷ್ಟ್ರೀಯ ಸುದ್ದಿ

ಇರಾನ್-ಇಸ್ರೇಲ್ ಯುದ್ಧ; ಕೇರಳದ ವಿಮಾನ ನಿಲ್ದಾಣಗಳಿಂದ ಗಲ್ಫ್​ ರಾಷ್ಟ್ರಗಳಿಗೆ ವಿಮಾನ ಸೇವೆ ಸ್ಥಗಿತ

March 1, 2026
10
ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ
ಕ್ರೈಮ್ ನ್ಯೂಸ್

ರೆಡ್ ಹ್ಯಾಂಡ್ ಲಂಚ ಪಡೆಯುವಾಗ ಸಿಕ್ಕಿಬಿದ್ದ ಗಣಿ ಅಧಿಕಾರಿಯ ಮನೆ ತಪಾಸಣೆ ವೇಳೆ 4 ಕೋಟಿ ರೂಪಾಯಿ ಹಣ ಪತ್ತೆ

February 25, 2026
50
Next Post
ಏಷ್ಯಾ ಕಪ್‌: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ಭಾರತಕ್ಕೆ ರೋಚಕ ಜಯ

ಏಷ್ಯಾ ಕಪ್‌: ಪಾಕ್​ ವಿರುದ್ಧ ಅಬ್ಬರಿಸಿದ ಪಾಂಡ್ಯ.. ಭಾರತಕ್ಕೆ ರೋಚಕ ಜಯ

Discussion about this post

Recent News

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
93
ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

March 3, 2026
4
COASTAL BOX LOGO

CORPORATE OFFICE

KHYATI VISUAL MEDIA
3rd Floor, Shalimar Complex
Kankanady, Mangaluru-575002

Email ID : coastaltimeskannada@gmail.com

Follow Us

ಹೊಸ ಸುದ್ದಿಗಳು

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ’ ಎಂದು ಪೋಸ್ಟ್ ಹಾಕಿದ್ದ ಆರೋಪಿ ಭಟ್ಕಳದಲ್ಲಿ ಬಂಧನ

March 3, 2026
ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಮುಲ್ಲಕಾಡ್ ಸರ್ಕಾರಿ ಶಾಲೆಯ ಮೇಲ್ಛಾವಣಿ ಉದ್ಘಾಟನೆ

March 3, 2026
ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

ಸಾಮಾಜಿಕ ಜಾಲತಾಣದಲ್ಲಿ ಉಳ್ಳಾಲ ಮಸೀದಿ ಬಳಿ ಬಾಂಬ್ ಬ್ಲಾಸ್ಟ್ ಬೆದರಿಕೆ ಸಂದೇಶ: ಎಫ್‌ಐಆರ್ ದಾಖಲು

March 3, 2026
  • About
  • Advertise
  • Privacy & Policy
  • Contact

Copyright ©2024. All Rights Reserved. Coastaltimeskannada.com | Design and Developed By Bluechip Infosystem - Contact Us : cc.bcis.blr@gmail.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

%d