ಹೈದರಾಬಾದ್: ಭಾರತೀಯ ನೌಕಾ ಸೇನೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಭಾರತೀಯ ನೌಕಾ ಸೇನೆ ಮತ್ತೊಂದು ಪರಮಾಣು ಜಲಾಂತರ್ಗಾಮಿ (ಸಬ್ಮರಿನ್) ಶೀಘ್ರದಲ್ಲೇ ನೌಕಾಸೇನೆಯಲ್ಲಿ ಕಾರ್ಯಾಚರಣೆಗೆ ಇಳಿಯಲಿದೆ. ಅದುವೇ ಐಎನ್ಎಸ್ ಅರಿಘಾಟ್. ಭಾರತದ ಎರಡನೇ ಪರಮಾಣು ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ಇದಾಗಿದೆ. ಮೂಲಗಳ ಪ್ರಕಾರ, ಐಎನ್ಎಸ್ ಅರಿಘಾಟ್ ತನ್ನ ಪ್ರಯೋಗವನ್ನು ಯಶಸ್ವಿಯಾಗಿ ಮುಗಿಸಿದ್ದು, ಇನ್ನು ಕೆಲವೇ ದಿನದಲ್ಲಿ ನೌಕಾ ಸೇನೆಯಲ್ಲಿ ಕಾರ್ಯಾಚರಣೆ ಭಾಗವಾಗುವ ಸಾಧ್ಯತೆ ಇದೆ. ಈ ಸಬ್ಮರಿನ್ ಭಾರತದ ಕಾರ್ಯತಂತ್ರದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ.
ಐಎನ್ಎಸ್ ಅರಿಘಾಟ್ ವಿಶೇಷತೆ: ಐಎನ್ಎಸ್ ಅರಿಘಾಟ್ ಮೊದಲ ಪೂರ್ಣ ಪ್ರಮಾಣದ ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ಜಲಾಂತರ್ಗಾಮಿ ಆಗಿದೆ. ಐಎನ್ಎಸ್ ಭಾರತದ ಎರಡನೇ ಸಬ್ ಮರಿನ್ ಇದಾಗಿದೆ. ಮೊದಲನೇ ಸಬ್ ಮರಿನ್ ಐಎನ್ಎಸ್ ಅರಿಹಂತ್ ಇದಾಗಿದೆ. 2011ರ ಡಿಸೆಂಬರ್ನಲ್ಲಿ ಅರಿಹಂತ್ ಅನ್ನು ವಿಶಾಖಪಟ್ಟಣಂನ ನೌಕಾ ಡಾಕ್ಯಾರ್ಡ್ನಲ್ಲಿನ ನೌಕಾ ನಿರ್ಮಾಣ ಕೇಂದ್ರದಲ್ಲಿ (ಎಸ್ಬಿಸಿ) ತಯಾರು ಮಾಡಲಾಗುತ್ತಿದೆ. ಮೊದಲ ಹಂತದ ನಿರ್ಮಾಣದ ಬಳಿಕ ನವೆಂಬರ್ 19, 2017ರಂದು ಇದನ್ನು ಉದ್ಘಾಟಿಸಲಾಯಿತು.
ಲೋಕಸಭಾ ಚುನಾವಣೆ ಬಳಿಕ ರಕ್ಷಣಾ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜನಾಥ್ ಸಿಂಗ್ ವಿಶಾಖ ನೌಕಾ ನೆಲೆಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು ನೌಕಾ ಅಧಿಕಾರಿಗಳಿಂದ ಐಎನ್ಎಸ್ ಅರಿಘಾಟ್ ಕುರಿತು ಮಾಹಿತಿ ಪಡೆದುಕೊಂಡಿದ್ದರು. ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರು ಈ ತಿಂಗಳ ಅಂತ್ಯ ಅಥವಾ ಸೆಪ್ಟೆಂಬರ್ನಲ್ಲಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದ್ದು, ಆಗಸ್ಟ್ 29ರಂದು ರಾಜನಾಥ್ ಸಿಂಗ್ ವಿಶಾಖಪಟ್ಟಣಂಗೆ ಭೇಟಿ ನೀಡಲಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post