ಮಂಗಳೂರು: ಕುಡಿದ ಅಮಲಿನಲ್ಲಿ ಗಲಾಟೆ ಮಾಡಿದ ವ್ಯಕ್ತಿಯೊಬ್ಬ ಕಟ್ಟಿಗೆಯಿಂದ ಹೊಡೆದು ಪತ್ನಿಯನ್ನೇ ಕೊಲೆ ಮಾಡಿರುವುದು ಬಜ್ಪೆ ಬಳಿಯ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ. ಸರಿತಾ ಮೃತ ಮಹಿಳೆ. ಪತಿ ದುರ್ಗೇಶ್ ಕೊಲೆ ಮಾಡಿದ ಆರೋಪಿ.

ಭಾನುವಾರ ರಾತ್ರಿ 8.30ಕ್ಕೆ ಮನೆಗೆ ಕುಡಿದು ಬಂದಿದ್ದ ದುರ್ಗೇಶ್, ಹೆಂಡತಿ ಸರಿತಾ ಜತೆ ಜಗಳವಾಡಿದ್ದಾನೆ. ಈ ವೇಳೆ ಪತ್ನಿ ಸರಿತಾಳ ಮೇಲೆ ದುರ್ಗೇಶ್ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಇದನ್ನು ಕಂಡು ದಂಪತಿಯ ಹನ್ನೊಂದು ವರ್ಷದ ಮಗ ಹೆದರಿ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ. ಇತ್ತ ತೀವ್ರ ರಕ್ತಸ್ರಾವವಾಗಿ ಸರಿತಾ ಸಾವನ್ನಪ್ಪಿದ್ದಾರೆ. ಈ ಹಿಂದೆಯೂ ದುರ್ಗೇಶ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇಂದು ಬೆಳಗ್ಗೆ ದುರ್ಗೇಶ್ ತನ್ನ ಅಣ್ಣನಿಗೆ ಸರಿತಾ ಮೃತಪಟ್ಟ ಬಗ್ಗೆ ತಿಳಿಸಿದ್ದಾನೆ. ಬಜ್ಪೆ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.


Discover more from Coastal Times Kannada
Subscribe to get the latest posts sent to your email.








Discussion about this post