ಮಂಗಳೂರು, ಡಿ.28: ಸುಲಭದಲ್ಲಿ ಹಣ ಗಳಿಸಲು ಹೋಗಿದ್ದ ಯುವಕನೊಬ್ಬ ವಂಚನೆಗೊಳಗಾಗಿ ಸಾವಿಗೆ ಶರಣಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂಡುಶೆಡ್ಡೆ ನಿವಾಸಿ ಸೂರ್ಯ (24) ಎಂಬ ಯುವಕ ಮರವೂರಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಕ್ಷಿಣ ಕನ್ನಡದಲ್ಲಿ ಇತ್ತೀಚಿನ ಹಗರಣವು RPC ಅಪ್ಲಿಕೇಶನ್ ಅನ್ನು ಒಳಗೊಂಡಿತ್ತು, ಇದು ಬಳಕೆದಾರರಿಗೆ ವೀಡಿಯೊಗಳನ್ನು ನೋಡುವ ಮೂಲಕ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಆರಂಭದಲ್ಲಿ, ಹಲವಾರು ವ್ಯಕ್ತಿಗಳು ಭಾಗವಹಿಸಿದರು ಮತ್ತು ಸ್ವಲ್ಪ ಹಣವನ್ನು ಗಳಿಸಿದರು.
ಡಿ.24ರಂದು ಆರ್ ಪಿಸಿ ಆ್ಯಪ್ ಸ್ಥಗಿತಗೊಂಡಿದ್ದು, ಅದೇ ದಿನ ಮೂಡುಶೆಡ್ಡೆ ನಿವಾಸಿ ಸೂರ್ಯ (24) ನಾಪತ್ತೆಯಾಗಿದ್ದರು. ಗುರುವಾರ ಮರವೂರು ನದಿಯಲ್ಲಿ ಅವರ ಮೃತದೇಹ ತೇಲುತ್ತಿತ್ತು. ಮೂಲಗಳ ಪ್ರಕಾರ, ಸೂರ್ಯ ಅವರು ಆರ್‌ಪಿಸಿ ಆ್ಯಪ್‌ನಲ್ಲಿ ಸುಮಾರು 70,000 ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು ಮತ್ತು ಕಂಪನಿಯು ಮುಚ್ಚಲ್ಪಟ್ಟಿದೆ ಎಂದು ತಿಳಿದ ನಂತರ, ಹೂಡಿಕೆಗಾಗಿ ಹಣವನ್ನು ಸಾಲವಾಗಿ ಪಡೆದಿದ್ದರಿಂದ ಅವರು ತಮ್ಮ ಜೀವನವನ್ನು ಕಳೆದುಕೊಂಡಿದ್ದಾರೆ ಎಂದು ನಂಬಲಾಗಿದೆ. ಕಾವೂರು ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಕಾಲೇಜು ಒಂದರಲ್ಲಿ ಬಿಸಿಎ ಮುಗಿಸಿ ಕಾವೂರಿನ ದಿಯಾ ಸಿಸ್ಟಮ್ ನಲ್ಲಿ ಒಂದೂವರೆ ವರ್ಷ ಕೆಲಸ ಮಾಡಿದ್ದ ಸೂರ್ಯ, ಆನಂತರ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಒಂದು ವರ್ಷದಲ್ಲಿ ಸರಿಯಾದ ಕೆಲಸ ಇರಲಿಲ್ಲ. ಈ ನಡುವೆ, ಮೊಬೈಲ್ ನಲ್ಲಿ ತುಂಬ ಆಕ್ಟಿವ್ ಆಗಿದ್ದ ಎನ್ನುವುದು ಸ್ನೇಹಿತರಿಗೂ ತಿಳಿದಿತ್ತು. ಸಂಜೆಯಾಗುತ್ತಲೇ ಸ್ನೇಹಿತರ ಜೊತೆಗೆ ದಿನವೂ ಕ್ರಿಕೆಟ್ ಆಡುವುದು, ಮೊಬೈಲ್ ಗೇಮ್ ಆಡುವುದು ಮಾಡುತ್ತಿದ್ದ.
ಮನೆಯಲ್ಲಿ ತಂಗಿ ಮತ್ತು ತಾಯಿ ಮಾತ್ರ ಇದ್ದರು. ಈತನ ತಂದೆ ಸೂರ್ಯ ಸಣ್ಣದಿದ್ದಾಗಲೇ ತೀರಿಕೊಂಡಿದ್ದರು. ತಾಯಿ ಕಷ್ಟದಿಂದ ಮಗನನ್ನು ಬೆಳೆಸಿ ಪದವಿ ಓದಿಸಿದ್ದರು. ಮೊನ್ನೆ ದಿಢೀರ್ ಆಗಿ ನಾಪತ್ತೆಯಾಗುತ್ತಲೇ ಸ್ನೇಹಿತರು, ಮನೆಯವರು ಹುಡುಕಾಟ ಶುರು ಮಾಡಿದ್ದರು. ಮರುದಿನ ಡಿ.26ರಂದು ಮರವೂರಿನ ಅಣೆಕಟ್ಟಿನ ಸಂದಿನಲ್ಲಿ ಬಾತುಕೊಂಡಿದ್ದ ಯುವಕನ ಶವ ಪತ್ತೆಯಾಗಿತ್ತು. ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರಿಂದ ಅದನ್ನು ಚೆಕ್ ಮಾಡಿದಾಗ ಆನ್ಲೈನ್ ಗೇಮ್ ಮೋಸಕ್ಕೆ ಬಲಿಯಾಗಿದ್ದಾನೆ ಎಂಬುದು ಪತ್ತೆಯಾಗಿದೆ. ಕಾವೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post