ಮಂಗಳೂರು: ಕೊಂಕಣಿ ಲೇಖಕ್ ಸಂಘ ಕರ್ನಾಟಕ ನೀಡುವ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಲೇಖಕಿ ಆಲಿಸ್ ಫರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಅವರಿಗೆ ಪ್ರಕಟಿಸಲಾಗಿದೆ.
ಕೊಂಕಣಿ ಲೇಖಕ್ ಸಂಘ್ ಕರ್ನಾಟಕ, ಕೊಂಕಣಿ ಭಾಷೆ ಮತ್ತು ಸಾಹಿತ್ಯವನ್ನು ಉತ್ತೇಜಿಸಿ ಬೆಳೆಸುವ ಉದ್ದೇಶದಿಂದ 2018ರಲ್ಲಿ ಆರಂಭಗೊoಡಿತು. 2022ರಲ್ಲಿ ಕೊಂಕಣಿ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ ಲೇಖಕರನ್ನು ಆಯ್ಕೆ ಮಾಡಿ ಗೌರವಿಸಲು ಕೊಂಕಣಿ ಲೇಖಕ್ ಸಂಘ್ ನಿರ್ಧರಿಸಿತು. ಪ್ರಶಸ್ತಿಯು ರುಪಾಯಿ 25000/- ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. 2025ನೇ ಸಾಲಿನ ಕೊಂಕಣಿ ಲೇಖಕ್ ಸಂಘ್ ಸಾಹಿತ್ಯ ಪ್ರಶಸ್ತಿಗೆ ಖ್ಯಾತ ಕೊಂಕಣಿ ಲೇಖಕಿ ಶ್ರೀಮತಿ ಆಲಿಸ್ ಫೆರ್ನಾಂಡಿಸ್ (ಶಾಲಿನಿ ವಲೆನ್ಸಿಯಾ) ಇವರನ್ನು ಆಯ್ಕೆ ಮಾಡಲಾಗಿದೆ.
1965ರಲ್ಲಿ ತನ್ನ 16ನೇ ವಯಸ್ಸಿನಲ್ಲೇ ಲೇಖನಿ ಹಿಡಿದರು. 1965 ರಿಂದ 1971 ರವರೆಗೆ ಮಿತ್ರ್, ಝೆಲೊ, ರಾಕ್ಣೊ, ಕಾಣಿಕ್, ವಾವ್ರಾಡ್ಯಾಂಚೊ ತಾಳೊ ಮುಂತಾದ ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ನಿರಂತರ ಬರೆದರು. ಸಾಹಿತ್ಯ ಸೇವೆಗೆ 30 ವರ್ಷದ ವಿರಾಮ ನೀಡಿ 2002ರ ನಂತರ ಪುನಃ ಲೇಖನಿಯನ್ನು ಕೈಗೆತ್ತಿಕೊಂಡ ಇವರು ಸತತ 22 ವರ್ಷಗಳಿಂದ ಝೆಲೊ, ದಿವೊ, ಕುಟ್ಮಾಚೊ ಸೆವಕ್, ರಾಕ್ಣೊ, ದರ್ವೆಂ, ನಮಾನ್ ಬಾಳಕ್ ಜೆಜು, ಮಿಲರ್ಚೆಂ ಮಿಲನ್ ಈ ಕೊಂಕಣಿ ಪತ್ರಿಕೆಗಳಿಗೆ ಬರೆಯುತ್ತಿದ್ದಾರೆ. ಇವರ ಸರಿಸುಮಾರು 28 ವರ್ಷಗಳ ಸಾಹಿತ್ಯ ಕೃಷಿಯಲ್ಲಿ 34 ಕವಿತೆಗಳು, 30 ಕಿರು ಕಥೆಗಳು, 200 ರಷ್ಟು ಲೇಖನಗಳು ಕೊಂಕಣಿಯ ವಿವಿಧ ಪತ್ರಿಕೆಗಳಲ್ಲಿ ಪ್ರಟವಾಗಿವೆ. “ಕೊಂಕ್ಣಿ ಲೇಖಕಾಂಚೊ ಎಕ್ವಟ್” ಎಂಬ ಕೊಂಕಣಿ ಲೇಖಕರ ಸಂಘಟನೆಯಲ್ಲಿ ಮೂರು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
“ಕೊಂಕ್ಣಿ ಲೇಖಕಾಂಚೊ ಎಕ್ವಟ್”, ರಾಕ್ಣೊ ಮತ್ತು ದರ್ವೆಂ ಪತ್ರಿಕೆಗಳಿಂದ ಸನ್ಮಾನ ಹಾಗೂ ರಾಕ್ಣೊ ಸಾಹಿತ್ಯ ಸ್ಪರ್ಧೆಯಲ್ಲಿ ಕಿರುಕಥೆಗೆ ಪ್ರೋತ್ಸಾಹಕ ಬಹುಮಾನವನ್ನು ಪಡೆದಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಫೆಬ್ರವರಿ 15, 2025ನೇ ಶನಿವಾರ ಸಂಜೆ 6.30ಕ್ಕೆ, ಸಂದೇಶ ಪ್ರತಿಷ್ಠಾನ, ಬಜ್ಜೋಡಿ, ಮಂಗಳೂರು, ಇಲ್ಲಿ ಜರಗಲಿರುವುದು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಸದಸ್ಯರು: ರಿಚರ್ಡ್ ಮೊರಾಸ್ – ಸಂಚಾಲಕರು, ಡೊಲ್ಫಿ ಎಫ್. ಲೋಬೊ – ಸಮಿತಿ ಸದಸ್ಯರು, ಡಾ| ಜೆರಿ ನಿಡ್ಡೋಡಿ – ಸಲಹಾ ಸಮಿತಿ ಸದಸ್ಯರು, ಜೆ. ಎಫ್. ಡಿಸೋಜಾ – ಸಲಹಾ ಸಮಿತಿ ಸದಸ್ಯರು.
Discover more from Coastal Times Kannada
Subscribe to get the latest posts sent to your email.
Discussion about this post