ಮಂಗಳೂರು, ಏ 29: ‘ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ. ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೈದ್ಯೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಪ್ರಕಟಿಸಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಇರುವ ಸಂದರ್ಭದಲ್ಲಿಯೇ ವೈದ್ಯೆ ಈ ರೀತಿ ಪೋಸ್ಟ್ ಮಾಡಿರುವುದಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್ಎಸ್ ಕಲಂ 196(1)(a), 353(2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
Help stinky hindus behind me (ನನ್ನ ಹಿಂದೆ ಬಿದ್ದಿರುವ ಕೊಳಕು ಹಿಂದುಗಳಿಗೆ ಸಹಾಯ ಮಾಡಿ) ಎಂದು ಯಾರದ್ದೋ ಕಮೆಂಟಿಗೆ ಪ್ರತಿಕ್ರಿಯೆಯಾಗಿ ವೈದ್ಯೆ ಉತ್ತರ ನೀಡಿರುವಂತಿದೆ. ಮತ್ತೊಂದು ಕಮೆಂಟಿನಲ್ಲಿ am I Indian? Yes. Do I Hate India? Yes.. (ನಾನು ಭಾರತೀಯಳಾ..? ಹೌದು.. ನಾನು ಭಾರತವನ್ನು ದ್ವೇಷಿಸುತ್ತೀನಾ? ಹೌದು..) ಎಂದು ಪೋಸ್ಟ್ ಹಾಕಿದ್ದಾರೆ. ಮೇಲ್ನೋಟಕ್ಕೆ ಹಿಂದು ವಿರೋಧಿ ಕಮೆಂಟ್, ದೇಶ ವಿರೋಧಿ ಎಂದು ತೋರಿದರೂ, ಇದರ ವಾಕ್ಯಾರ್ಥ ನೇರವಾಗಿ ಆ ರೀತಿಯ ಭಾವನೆ ಬಿಂಬಿಸುತ್ತಿಲ್ಲ. ತನ್ನ ಹಿಂದೆ ಬಿದ್ದು ಕಮೆಂಟ್ ಹಾಕುತ್ತಿರುವವರನ್ನು ಮಾತ್ರ ಕೊಳಕು, ಕೆಟ್ಟ ಹಿಂದುಗಳೆಂದು ಈಕೆ ಜರೆದಿದ್ದಾರೆ. ಇನ್ನೊಂದು ವಾಕ್ಯದಲ್ಲಿ ನಾನು ಭಾರತವನ್ನು ದ್ವೇಷಿಸುತ್ತೀನಾ ಎಂದು ಕೇಳಿ ಹೌದು ಎಂದು ಹೇಳಿ ಅಪಾರ್ಥಕ್ಕೆ ಎಡೆ ಮಾಡಿದ್ದಾರೆ.
ಅಫೀಫ ಫಾತಿಮಾ ಹೈಲ್ಯಾಂಡ್ ಆಸ್ಪತ್ರೆಯಿಂದ ವಜಾ : ಅಫೀಫ ಫಾತಿಮಾ ಪೋಸ್ಟ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದೆ. ನಂತರ ಆಸ್ಪತ್ರೆಯ ಹೆಚ್ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳೂರಿನ ಹೈಲ್ಯಾಂಡ್ ನ ಖಾಸಗಿ ಆಸ್ಪತ್ರೆಯ ವೈದ್ಯೆಯ ದೇಶ ಹಾಗೂ ಹಿಂದೂ ವಿರೋಧಿ ಬರವಣಿಗೆಯ ಬಗ್ಗೆ ಮಂಗಳೂರು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ವೈದ್ಯೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ವಿಹೆಚ್ಪಿ ಮುಖಂಡ ಶರಣ್ ಕುಮಾರ್ ಪಂಪ್ವೆಲ್ ಆಗ್ರಹಿಸಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post